ಹೊನ್ನಾಳಿ-ಜ-: 15-ಹೊನ್ನಾಳಿ ತಾಲೂಕ್ ಆಫೀಸ್ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ತಾಲೂಕು ಆಪೀಸ್ ಸಬಾಂಗಣದಲ್ಲಿ ಇಂದು ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ಅಧ್ಯಕ್ಷತೆಯಲ್ಲಿ ಶ್ರೀ ಶರಣ ಸಿದ್ದರಾಮೇಶ್ವರರ ಜಯಂತೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಸಿದ್ದರಾಮೇಶ್ವರ ಶರಣರ ಭಾವಚಿತ್ರಕ್ಕೆ ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ತಾಲೂಕ ದಂಡಾಧಿಕಾರಿಗಳಾದ ಬಸನಗೌಡ ಕೋಟೂರ್ ರವರು ಶ್ರೀ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮೂಲಕ ಸಿದ್ದರಾಮೇಶ್ವರರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಉಪಸ್ಥಿತಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ತಾಲೂಕ ದಂಡಾಧಿಕಾರಿಗಳ ಬಸನಗೌಡ ಕೋಟೂರ್, ಹಾಗೂ ತಾಲೂಕಿನ ಎಲ್ಲಾ ಆಡಳಿತ ವರ್ಗದವರು ಸಹ ಭಾಗಿಯಾಗಿದ್ದರು.