ಹೊನ್ನಾಳಿ : ಜ;-14 – ಹೊನ್ನಾಳಿ ತಾಲೂಕಿನಲ್ಲಿ ವಿಷ ಆಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಮಕ್ಕಳು ಬೆಳಗಿನ ಉಪಹಾರವನ್ನು ಸೇವಿಸಿದ್ದು ಮದ್ಯಾಹ್ನ ಒಬ್ಬೋಬ್ಬರಲ್ಲೇ ವಾಂತಿ ಭೇದಿ ಕಾಣಿಸಿಕೊಳ್ಳಲು ಆರಂಭವಾಗಿದೆ.
ಸಂಜೆಯ ಹೊತ್ತಿಗೆ ವಸತಿ ಶಾಲೆಯಲ್ಲಿನ ಐವತ್ತಕ್ಕೂ ಹೆಚ್ಚು ಮಕ್ಕಳಲ್ಲಿ ವಿಪರೀತ ವಾಂತಿ ಬೇದಿ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.


ಐವತ್ತಕ್ಕೂ ಹೆಚ್ಚು ಮಕ್ಕಳು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ವಿಷ ಆಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯಲ್ಲಿ ನಡೆದಿದೆ. ಎಲ್ಲರೂ ಗುಣಮುಖರಾಗಿದ್ದಾರೆ.
. ವಸತಿ ಶಾಲೆಯಲ್ಲಿನ ಮಕ್ಕಳು ಹೊನ್ನಾಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಮಧುಸೂದನ್ ರವರು ಮಕ್ಕಳನ್ನು 108 ಅಂಬುಲೆನ್ಸ್ ವಾಹನದಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ಹೊನ್ನಾಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗೆ ಬಂದು ಮಕ್ಕಳ ಆರೋಗ್ಯ ವಿಚಾರಿಸಿ ಅವರ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು.


ಘಟನೆ ಬಗ್ಗೆ ವರದಿಯನ್ನು ಇಂದಿರಾ ಗಾಂಧಿ ಪರಿಶಿಷ್ಟ ಜಾತಿ ವರ್ಗದ ಶಾಲೆಯ ಪ್ರಾಂಶುಪಾಲರಾದ ಮಧುಸೂದನ ರವರ ಹತ್ತಿರ ಮಾಹಿತಿ ಪಡೆದು, ಆಸ್ಪತ್ರೆ ವೈಧ್ಯಾಧಿಕಾರಿಯಾದ ಡಾಕ್ಟರ್ ಚಂದ್ರಪ್ಪರವರ ಅತ್ತಿರ ಮಕ್ಕಳ ಆರೋಗ್ಯ ಹೇಗಿದೆ ಎಂದು ತಿಳಿದುಕೊಂಡರು ,ನಂತರ ಆ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೂ ಇದು ಆಹಾರದಿಂದ ವ್ಯತ್ಯಾಸ ಆಗಿರಬಹುದು ನೀವು ಹೆದರುವ ಅವಶ್ಯಕತೆ ಇರುವುದಿಲ್ಲ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಅವರಿಗೆ ಧೈರ್ಯ ತುಂಬಿದರು.
ವಶತಿ ಶಾಲೆಯಲ್ಲಿ ಮಕ್ಕಳು ಅಶ್ವಸ್ಥ ರಾಗಲು ಆಹಾರದಿಂದ ಆಗಿದೆಯೋ ಅಥವಾ ನೀರಿನಿಂದ ಆಗಿದೆಯೋ ವೈದ್ಯರು ಲ್ಯಾಬ್ ಟೆಸ್ಟಿಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ನನಗೆ ತಿಳಿಸಿದರು, ಅವರ ವರದಿ ಬಂದ ನಂತರ ಕಾರಣ ಏನು ಎಂಬುದು ವೈಧ್ಯರಿಂದ ಗೊತ್ತಾಗುತ್ತದೆ .ಎಂದು ಮಾಜಿ ಶಾಸಕರಾದ ಡಿ ,ಜಿ .ಶಾಂತನಗೌಡ್ರುರವರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.


ಉಪಸ್ಥಿತಿಯಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ವೈದ್ಯಾಧಿಕಾರಿಗಳಾದ ಡಾಕ್ಟರ್ ಚಂದ್ರಪ್ಪ ಇಂದಿರಾ ವಸತಿ ಶಾಲೆಯ ಪ್ರಾಂಶುಪಾಲರಾದ ಮಧುಸೂದನ್ ಅಸ್ವಸ್ಥಗೊಂಡ ಮಕ್ಕಳು ಮತ್ತು ಅವರ ಪೋಷಕರು ಹಾಗೂ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *