ಹೊನ್ನಾಳಿ,15::ಶನಿವಾರ ತಾಲೂಕು ಪಂಚಾಯ್ತಿ ಸಾಮಾಥ್ಯಸೌಧದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಬಿದರಗಟ್ಟೆ ಗ್ರಾಮದಿಂದ ರೈತರ ಜಮೀನುಗಳಲ್ಲಿ ಹಾದು ಹೋಗುವ ಸಾಸ್ವೆಹಳ್ಳಿವರೆಗೆ 10.9.ಕೀಮೀ.49 ವಿದ್ಯುತ್ ಟವರ್‍ಗಳನ್ನು ಅಳವಡಿಸುವ ಕಾಮಾಗಾರಿ ನಡೆಸಲು, ರೈತರಿಗೆ ಮನವೊಲಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಸಂಸದರು ಹೊನ್ನಾಳಿ ಮತ್ತು ಚನ್ನಗಿರಿ ಶಾಸಕರು ಜಿಲ್ಲಾಧಿಕಾರಿ ಜಿಲ್ಲಾ ವರಿಷ್ಠಾಧಿಕಾರಿ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.
ಕಾಮಾಗಾರಿ ವಿಳಂಬವಾದರೆ ಗುತ್ತಿಗೆದಾರರನ್ನು ಬ್ಲಾಕ್‍ಲಿಸ್ಟ್‍ಗೆ ಸೆರಿಸಲಾಗುವುದು: ರೇಣುಕಾಚಾರ್ಯ.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕಕ್ಕಾಗಿ 49 ವಿದ್ಯುತ್ ಟವರಗಳನ್ನು ಅಳವಡಿಸುವ ಕಾಮಾಗಾರಿಗೆ ರೈತರು ಸಹಕಾರ ನೀಡಬೇಕು ಎಂದು ಸಿ.ಎಂ.ರಾಜಕೀಯ ಕಾರ್ಯಧರ್ಶಿ,ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶನಿವಾರ ತಾಲೂಕು ಪಂಚಾಯ್ತಿ ಸಾಮಾಥ್ಯಸೌಧದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕಕ್ಕಾಗಿ ತಾಲೂಕಿನ ಬಿದರಗಡ್ಡೆ 221/66/11 ಕೆ.ವಿ.ವಿದ್ಯುತ್ ಸ್ಟೇಷನ್‍ನಿಂದ ಸಾಸ್ವೆಹಳ್ಳಿ ಹತ್ತಿರ ಮಾವಿನಕೋಟೆ ಗ್ರಾಮದ ವಿದ್ಯುತ್‍ಸಬ್ ಸ್ಟೇಷನ್ ಪಂಪ್ ಹೌಸಿಗೆ ತನಕ ವಿದ್ಯತ್ ಸಂಪರ್ಕಕಕ್ಕೆ ಬಿದರಗಡ್ಡೆ ಗ್ರಾಮದಿಂದ ರೈತರ ಜಮೀನುಗಳಲ್ಲಿ ಹಾದು ಹೋಗುವ ಸಾಸ್ವೆಹಳ್ಳಿವರೆಗೆ 10.9.ಕೀಮೀ.49 ವಿದ್ಯುತ್ ಟವರ್‍ಗಳನ್ನು ಅಳವಡಿಸುವ ಕಾಮಾಗಾರಿ ನಡೆಸಲು ರೈತರಿಗೆ ಮನವೊಲಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಸಂಸದರು ಹೊನ್ನಾಳಿ ಮತ್ತು ಚನ್ನಗಿರಿ ಶಾಸಕರು ಜಿಲ್ಲಾಧಿಕಾರಿ ಜಿಲ್ಲಾ ವರಿಷ್ಠಾಧಿಕಾರಿ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.
ಹೊನ್ನಾಳಿ,ಭದ್ರರಾವತಿ,ಚನ್ನಗಿರಿ,ದಾವಣಗೆರೆ,ಹೊಳಲ್ಕೆರೆ,ಚಿತ್ರದುರ್ಗದವರೆಗೆ 121 ಕೆರೆ ತುಂಬಿಸುವ ಏತನೀರಾವರಿ ಯೋಜನೆ ಸರ್ಕಾರದ ಮಹಾತ್ವಾಕಾಂಕ್ಷೀ ಯೋಜನೆಗೆ ಯಾವ ರೈತರು ಅಡ್ಡಿಪಡಿಸದೆ ಸಹಕಾರ ನೀಡಬೇಕು,ರೈತರಿಗೆ ಅನ್ಯಯಾವಾಗದಂತೆ ಸೂಕ್ತ ಪರಿಹಾರ ನೀಡಲಾಗುವುದು ಎಂದ ಅವರು ಕಾಮಾಗಾರಿ ನಡೆಸಲು ಮಳೆ ಬಂದರೆ ಆಗುವುದಿಲ್ಲ ಬೇಸಿಗೆಯಲ್ಲೇ ಗುತ್ತಿಗೆದಾರರು ಈ ಕಾಮಾಗಾರಿಯನ್ನು ಅನುಷ್ಠಾನಗೊಳಿಸಬೇಕು ವಿಳಂಬ ಮಾಡಿದರೆ ಗುತ್ತಿಗೆದಾರರನ್ನು ಬ್ಲಾಕ್‍ಲಿಸ್ಟ್‍ಗೆ ಸೆರಿಸಲಾಗುವುದು ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ರೈತರ ಜೀವನಾಡಿ ಕೆರೆ ತುಂಬಿಸುವ ಯೋಜನೆ ಕಾಮಾಗಾರಿಗೆ ಯಾವ ರೈತರು ಅಡ್ಡಿಪಡಿಸಬಾರದು,ರೈತರುಬೆಳೆದ ಅಡಿಕೆ 5-6 ವರ್ಷವಾಗಿದೆ ಅದಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ನಾನೊಬ್ಬ ಅಡಿಕೆ ಬೆಳೆದವನಾಗಿ ರೈತರ ಕಷ್ಟ ನನಗೆ ಗೊತ್ತಾಗುತ್ತದೆ ಸರ್ಕಾರದ ದೊಡ್ಡ ಪ್ರಮಾಣದ ಯೋಜನೆ ರೈತರು ಸಹಕರಿಸಬೇಕು ಎಂದರು.
ಚನ್ನಗಿರಿ ಶಾಸಕ ಮಾಡಾಳವೀರೂಪಾಕ್ಷಪ್ಪ ಮಾತನಾಡಿ ಫಸಲು ಬಂದಂತಹ ಅಡಿಕೆ ಕಿಳಲು ನೋವಾಗುತ್ತದೆ ಕಾಮಗಾರಿ ಹೋಗುವ ಸ್ಥಳದಲ್ಲಿ ಯಾವ ರೈತರು ಕಾಮಾಗಾರಿ ಕೆಲಸಕ್ಕೆ ಅಡ್ಡಿಪಡಿಸದೆ ರೈತರು ತುಂಬಾ ಸಹಕರಿಸಬೇಕು ಬೆಳೆದ ಅಡಿಕೆ ಸೂಕ್ತ ಪರಿಹಾರ ನೀಡಲಾಗುವುದೆಂದು ರೈತರಿಗೆ ಭರವಸೆ ನೀಡಿ ಕಾಮಗಾರಿ ನಡೆಸುವ ಗುತ್ತಿಗೆದಾರ ತಮಿಳುನಾಡು ಮೂಲದವ ಎಲ್ಲೋ ಕುಳಿತು ಸಬ್ ಗುತ್ತಿಗೆದಾರರಿಗೆ ನೀಡುತ್ತಾ ಕಾಮಾಗಾರಿ ವಿಳಂಬ ಮಾಡುತ್ತಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೋಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಮಾಹಾಂತೇಶ್ ಬಿಳಿಗಿ ಮಾತನಾಡಿ ನಾವೇಲ್ಲಾ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ ನೀರಾವರಿ ಯೋಜನೆ,ರೈಲ್ವೆ ಯೋಜನೆಗಳಿಗೆ ಕೆಲಸಮಾಡಬೇಕಾದರೆ ಅಡ್ಡಿಪಡಿಸಿದವರಿಗೆ ಪೊಲೀಸ್ ಪ್ರೊಟೆಕ್ಷನ್ ಇಟ್ಟುಕೊಂಡು ಕೆಲಸಮಾಡಬೇಕಾಗುತ್ತದೆ ನಾವೇಲ್ಲ ಬಂದಿರುವುದು ರೈತರ ಅನುಕೂಲ ಮಾಡಲು ಬಂದಿದ್ದೇವೆ ಎಂದರು.
ವಿಶೇಷ ಸಭೆಯಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪ,ಜಿಲ್ಲಾ ವರಷ್ಠಾಧಿಕಾರಿ ರಿಷ್ಯಂತ್,ಉಪವಿಭಾಗಾಧಿಕಾರಿ ಮಮತ ಹೊಸಗೌಡರ್,ತಹಶಿಲ್ದಾರ ಬಸವನಗೌಡ ಕೊಟೂರು,ತಾಪಂ ಇಓ ರಾಮಭೋವಿ ನಿರಾವರೀ ಇಲಾಖೆ ಇಂಜಿನಿಯರ್,ಗುತ್ತಿಗೆರಾರರು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಎಲ್ಲಿದೆ ಪಾರದರ್ಶಕತೆ:- ವಾಸ್ತವಿಕವಾಗಿ ತಮ್ಮ ಜಮೀನು ಕಳೆದುಕೊಂಡ ರೈತರು ಮತ್ತು ಮಾಧ್ಯಮದವರನ್ನು ಹೊರಗೆ ಕಳುಹಿಸಿ ಸಂಸದರು ಹೊನ್ನಾಳಿ ಮತ್ತು ಚನ್ನಗಿರಿ ಶಾಸಕರು,ಜಿಲ್ಲಾಧಿಕಾರಿ,ಜಿಲ್ಲಾ ಎಸ್ಪಿ ನೀರಾವರಿ ಇಲಾಖೆ ಇಂಜಿನೀಯರ ಮತ್ತು ಗುತ್ತಿಗೆದಾರರು ಪ್ರತ್ಯೇಕ ಸಭೆ ನಡೆಸಿರುವುದು ಎಲ್ಲಿದೆ ಪಾರದರ್ಶಕತೆ.