ಹೊನ್ನಾಳಿ- ಜ;- 16-ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಇಂದು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಮುಂಚೂಣಿ ಕಾರ್ಯಕರ್ತರುಗಳಾದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಅರಕ್ಷಕ ಠಾಣೆಯ ಅಧಿಕಾರಿಗಳಾದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬೂಸ್ಟರ್ ಡೋಸ್ ಲಸಿಕೆಯನ್ನು ಸಿಪಿಐ ಟಿ ವಿ ದೇವರಾಜ್ ಮತ್ತು ಪಿಎಸ್ಐ ಬಸನಗೌಡ ಬೀರದಾರ್ ಪ್ರಥಮವಾಗಿ ಲಸಿಕೆ ಹಾಕಿಸಿ ಕೊಳ್ಳುವುದರ ಮೂಲಕ ಚಾಲನೆಯನ್ನು ಕೊಡಲಾಯಿತು..ಹೊನ್ನಾಳಿ ಮತ್ತು ನ್ಯಾಮತಿ ಅರಕ್ಷಕ ಠಾಣೆಯ ಸುಮಾರು 50ಕ್ಕೊ ಹೆಚ್ಚು
ಎಲ್ಲಾ ಪೋಲಿಸ್ ನೌಕರ ಸಿಬ್ಬಂದಿ ವರ್ಗದವರಿಗೆ ಲಸಿಕೆಯನ್ನು ಹಾಕಲಾಯಿತು.
ಸಿಪಿಐ ಟಿವಿ ದೇವರಾಜ ನಂತರ ಮಾತನಾಡಿ ಮುಂಚೂಣಿ ಕಾರ್ಯಕರ್ತರು ಗಳಾದ ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂರನೆಯ ಬೂಸ್ವರ್ ಡೋಸ್ ಲಸಿಕೆಯನ್ನು ಮುಂಜಾಗೃತ ವಾಗಿ ಕೊಡುತ್ತಿರವುರಿಂದ ನಮ್ಮಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದುರ ಜೊತೆಗೆ ಕೊರೋನಾ ಕೋವಿಡ್ 19 ಮತ್ತು ಮೂರನೆ ಅಲೆಯಾದ ಒಮಿಕ್ರಾನ್ ರೋಗ ಬರದಂತೆ ತಡೆಗಟ್ಟಬಹುದು ಉದ್ದೇಶವನ್ನಿಟ್ಟುಕೊಂಡು ನಮ್ಮ ಪೊಲೀಸ್ ಇಲಾಖೆ ಎಲ್ಲಾ ಸಿಬ್ಬಂದಿ ವರ್ಗದವರು ಇಂದಿನ ದಿವಸ ಬೂಸ್ವರ್ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಡಿಸಿನಲ್ ಎಸ್ ಪಿ ಯವರಾದ ಆರ್, ಬಿ ,ಬಸರಗಿ ,ಸಿಪಿಐ ಟಿವಿ ದೇವರಾಜ್, ಪಿಎಸ್ಐ ಬಸನಗೌಡ ಬಿರಾದಾರ್, ನ್ಯಾಮತಿ ಪಿಎಸ್ಐ ರಮೇಶ್ ,ಪ್ರೋಪಸನರಿ ಪಿಎಸ್ಐ ಅಜ್ಜಪ್ಪ ,ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಟಿ ತಿಪ್ಪೇಸ್ವಾಮಿ ,ಗುಪ್ತಚರ ಇಲಾಖೆಯ ಪೊಲೀಸ್ ವೆಂಕಟೇಶ್ ,ಭೋಜರಾಜ್ ರಾಜು ದೊಡ್ಡಮನಿ ,ಪಿಎಚಸಿಓ ಟಿ ನಾಗರತ್ನ, ಚೇತನ್, ಆಶಾ ಕಾರ್ಯಕರ್ತೆ ಶಂಶಾದ್, ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.