ನ್ಯಾಮತಿ : ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಮನೆಗಳನ್ನು ತೆರವು ಗೊಳಿಸಲು ಸಾರ್ವಜನಿಕರು ಸಹಕಾರ ನೀಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದಲ್ಲಿ ಹಾದು ಹೋಗಿರುವ ಜೀನಹಳ್ಳಿ-ನ್ಯಾಮತಿ-ಚೀಲೂರು ಹಾಗೂ ತೀರ್ಥರಾಮೇಶ್ವರ-ನ್ಯಾಮತಿ-ಗೋವಿನಕೋವಿ ಜಿಲ್ಲಾ ಮುಖ್ಯ ರಸ್ತೆಗಳ ಬಾಕಿ ಉಳಿದಿರುವ ಅಭಿವೃದ್ದಿ ಕಾಮಗಾರಿಗೆ ಮನೆಗಳನ್ನು ತೆರವುಗೊಳಿಸಲು ಸಹಕರಿಸುವಂತೆ ಕುಂಬಾರ ಬೀದಿ, ಆಂಜನೇಯ ಬೀದಿ, ವೀರಭದ್ರೇಶ್ವರದ ದೇವಸ್ಥಾನ ಬೀದಿಯ ನಿವಾಸಿಗಳೊಂದಿಗೆ ಚರ್ಚಿಸಿ ಜನರ ಅಭಿಪ್ರಾಯ ಸಂಗ್ರಹಿಸಿದ್ದು ಇದರಲ್ಲಿ ಮೂರು ಬೀದಿಯ ಜನರು ರಸ್ತೆ ಅಗಲೀಕರಣಕ್ಕೆ ಅನುಮತಿ ನೀಡಿದ್ದು, ತಿಲಕ ರಸ್ತೆ ಇನ್ನೂ ತೀರ್ಮಾನ ಆಗಿಲ್ಲಾ ಎಂದರು.
ಈಗ ರೂಪಾಯಿ 25 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ದಿ, ಡ್ರೈನೆಜ್, ಪೈಪ್ ಲೈನ್ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಗಳಿಗೆ ಅಲಂಕಾರಿಕ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು ಸದ್ಯದರಲ್ಲದೇ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
50 ಅಡಿ ರಸ್ತೆ ಅಗಲೀಕರಣ ಆಗ ಬೇಕಾಗಿದ್ದು, ಈಗಾಗಲೇ ಮೂರು ಬೀದಿಯ ಜನರ ಅಭಿಪ್ರಾಯ ಸಂಗ್ರಹಿಸಿದ್ದು 50 ಅಡಿಗೆ ಬದಲಾಗಿ ಜನರು 44 ಅಡಿ ಜಾಗವನ್ನು ತೆರವುಗೊಳಿಸಲು ಸಾರ್ವಜಕರು ಒಪ್ಪಿಗೆ ನೀಡಿದ್ದು, ತಿಲಕ್ ರಸ್ತೆ ಒಂದು ಬಾಕಿ ಇದ್ದು ಅದರ ಅಗಲೀಕರಣಕ್ಕೂ ಸಾರ್ವಜನಿಕರ ಒಪ್ಪಿಗೆ ಪಡೆಯಲಾಗುವುದು ಎಂದರು.
ಕಣ್ಣಪ್ಪ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಬೀದಿಯಲ್ಲಿ ಮುಸ್ಲಿಂ,ಮಾಡಿವಾಳ ಮತ್ತು ಬೇಡರ ಜನಾಂಗ ವಾಸವಿದ್ದು ಬಡವರೇ ಹೆಚ್ಚಾಗಿದ್ದು, ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಒಕ್ಕಲೆಬ್ಬಿಸಿದರೆ ವಾಸಕ್ಕೂ ಮನೆಯಿಲ್ಲದಂತಾಗುತ್ತದೆಂದು ಮನವಿ ಮಾಡಿದ್ದು, ತಾಲೂಕಿನಗೆ 400 ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿದ್ದು ಮನೆ ಕಳೆದುಕೊಂಡವರಿಗೆ ನಿವೇಶನ ಕೊಡಲು ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ ಎಂದರು.
ಈ ಹಿಂದೆಯೇ ಈ ನಾಲ್ಕು ಬೀದಿಗಳ ಅಭಿವೃದ್ದಿಗೆ ಹಣ ಬಿಡುಗಡೆಯಾಗಿತ್ತು, ಆದರೇ ಹಿಂದಿನ ಶಾಸಕರ ಇಚ್ಚಾ ಶಕ್ತಿಯ ಕೊರತೆಯಿಂದ ಬಂದ ಹಣ ವಾಪಸ್ಸು ಹೋಗಿತ್ತು ಎಂದ ರೇಣುಕಾಚಾರ್ಯ, ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಕೊನೆಯ ಅವಧಿಯಲ್ಲಿ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ನಾನು ಅವರಿಗೆ ಸದಾ ಚಿರಋಣಿ ಎಂದರು.
ನ್ಯಾಮತಿ ಪಟ್ಟಣವನ್ನು ಅತ್ಯಂತ ಸುಂದರ ಪಟ್ಟಣ ಮಾಡ ಬೇಕೆಂದು ಪಣ ತೊಟ್ಟಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡ ಬೇಕೆಂದ ರೇಣುಕಾಚಾರ್ಯ,ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಟ್ಟ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭ ಎಂ.ರೇಣುಕಾ, ಉಪತಹಶೀಲ್ದಾರ್ ನಾಗರಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧೀಕಾರಿ ಕೊಟ್ರೇಶ್, ಮುಖಂಡರಾದ ಎಸ್.ಪಿ.ರವಿಕುಮಾರ್, ವೀರಣ್ಣಗೌಡ, ಅಜಯ್ ರೆಡ್ಡಿ, ಸಿ.ಕೆ.ರವಿಕುಮಾರ್, ಪಿಎಸ್‍ಐ ರಮೇಶ್ ಸೇರಿದಂತೆ ಆಯಾ ಬೀದಿಯ ಮುಖಂಡರು ಉಪಸ್ಥಿತರಿದ್ದರು.
ಪೋಟೊ ಕ್ಯಾಷನ್ : ನ್ಯಾಮತಿ ಪಟ್ಟಣದ ಕುಂಬಾರ ಬೀದಿ, ಆಂಜನೇಯ ಬೀದಿ, ವೀರಭದ್ರೇಶ್ವರದ ದೇವಸ್ಥಾನ ಬೀದಿಯ ನಿವಾಸಿಗಳೊಂದಿಗೆ ರಸ್ತೆ ಅಗಲೀಕರಣಕ್ಕೆ ಸಂಬಂದಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಚರ್ಚಿಸಿದರು.

Leave a Reply

Your email address will not be published. Required fields are marked *