ದಾವಣಗೆರೆ ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ
ಹೆಚ್ಚಾಗಿ ಕಂಡುಬರುತ್ತಿದ್ದು, ಕೋವಿಡ್ 3ನೇ ಅಲೆ ತಡೆಗಟ್ಟುವ
ನಿಟ್ಟಿನಲ್ಲಿ ಇದುವರೆಗೂ ಎರಡನೆ ಡೋಸ್ ಲಸಿಕೆ ಪಡೆಯುವುದು ಬಾಕಿ
ಇರುವವರು ಹಾಗೂ 2ನೇ ಡೋಸ್ ಪಡೆದು 09 ತಿಂಗಳು
ಪೂರ್ಣಗೊಂಡಿರುವ ಮುಂಚೂಣಿ ಕಾರ್ಯಕರ್ತರು ಮತ್ತು 60
ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಲಸಿಕೆಯನ್ನು ಕೂಡಲೆ
ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳುವಂತೆ
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ
ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಜ. 18 ರ ಲಸಿಕೆ ಕಾರ್ಯಕ್ರಮಕ್ಕಾಗಿ ಚಿಗಟೇರಿ ಜಿಲ್ಲಾ
ಆಸ್ಪತ್ರೆಯೂ ಸೇರಿದಂತೆ ಎಲ್ಲ ನಗರ ಆರೋಗ್ಯ ಕೇಂದ್ರಗಳಿಗೆ
ಒಟ್ಟು 7500 ಡೋಸ್ ಕೋವಿಶೀಲ್ಡ್ ಮತ್ತು 3500 ಡೋಸ್ ಕೋವ್ಯಾಕ್ಸಿನ್
ಹಾಗೂ ಗ್ರಾಮೀಣ ಪ್ರದೇಶಗಳಿಗೆ 7500 ಡೋಸ್ ಕೋವಿಶೀಲ್ಡ್ ಲಸಿಕೆ
ಹಂಚಿಕೆ ಮಾಡಲಾಗಿದೆ.
ಮೊದಲನೆ ಲಸಿಕೆ ಪಡೆದು ನಿಗದಿತ ಅವಧಿ ಪೂರ್ಣಗೊಂಡಿದ್ದರೂ,
ತಾಲ್ಲೂಕಿನಲ್ಲಿ ಅದರಲ್ಲೂ ದಾವಣಗೆರೆ ನಗರದಲ್ಲಿ ಬಹಳಷ್ಟು ಜನ
ಎರಡನೆ ಡೋಸ್ ಲಸಿಕೆಯನ್ನು ಪಡೆಯದೇ ನಿರ್ಲಕ್ಷ್ಯ
ತೋರುತ್ತಿರುವುದು ಕಂಡುಬಂದಿರುತ್ತದೆ. ದಾವಣಗೆರೆ
ತಾಲ್ಲೂಕಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ
ಕಂಡುಬರುತ್ತಿದ್ದು, ಇಂತಹವರು ತಪ್ಪದೆ ಕೂಡಲೆ ಸಮೀಪದ
ಆರೋಗ್ಯ ಕೇಂದ್ರದಲ್ಲಿ ಎರಡನೆ ಡೋಸ್ ಲಸಿಕೆಯನ್ನು
ಪಡೆದುಕೊಳ್ಳಬೇಕು.
ಸರ್ಕಾರದ ಸೂಚನೆಯಂತೆ ಆರೋಗ್ಯ ಕಾರ್ಯಕರ್ತರು,
ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ
ಬೂಸ್ಟರ್ ಡೋಸ್ ಲಸಿಕೆಯನ್ನು ತಾಲ್ಲೂಕಿನ ಎಲ್ಲ ಗ್ರಾಮೀಣ ಮತ್ತು
ನಗರ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದು, ಎರಡನೆ
ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರು ಬೂಸ್ಟರ್ ಡೋಸ್
ಲಸಿಕೆಯನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದು ಡಾ.
ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.