ಹೊನ್ನಾಳಿ : ಕೊರೊನಾ ಮೂರನೇ ಅಲೆ ಬರ ಬಾರದೆಂದು ದೇವರಲ್ಲಿ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಕಲ್ಯಾಣಾರ್ಥವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಲೋಕಕ್ಕೆ ಒಳ್ಳೆಯಾದಗಾಲಿ ಎಂದು ಸತ್ಯನಾರಾಯಣ ಪೂಜೆ ಸಲ್ಲಿಸಿದ್ದು ಒಳ್ಳೆಯ ಕೆಲಸ ಎಂದ ರೇಣುಕಾಚಾರ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಾಮಾಜಿಕವಾಗೀ, ಧಾರ್ಮಿಕವಾಗಿ ಜನಪರವಾದ ಕೆಲಸ ಮಾಡುತ್ತಿದೆ ಎಂದರು.
ಕೊರೊನಾ ಬಗ್ಗೆ ಜಾಗೃತಿ : ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿಯೊಬ್ಬರೂ ಕೂಡ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು
.
ದೇಶದಲ್ಲಿ 159 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲೇ ಅತ್ಯಂತ ಬೃಹತ್ ಲಸಿಕಾ ಮೇಳ ನಡೆದಿದೆ ಎಂದ ರೇಣುಕಾಚಾರ್ಯ, ಲಾಕ್‍ಡೌನ್ ಆದರೇ ಆರ್ಥಿಕತೆಗೆ ಬಾರೀ ಪೆಟ್ಟು ಬೀಳಲಿದೆ ಎಂದರು.
ಲಾಕ್‍ಡೌನ್ ಮಾಡಲು ಸರ್ಕಾರ ಇಟ್ಟ ಪಡುವುದಿಲ್ಲಾ ಆಗಾಗೀ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದರು.
ಈ ಸಂದರ್ಭ ಕೆಎಸ್‍ಡಿಎಲ್ ನಿದೇರ್ಶಕರಾದ ಶಿವುಹುಡೇದ್, ಬಗರ್‍ಹುಕ್ಕುಂ ಕಮಿಟಿ ಸದಸ್ಯರಾದ ಎಂ.ಆರ್.ಮಹಂತೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಪಾ ಸತೀಶ್ ಉಪಾಧ್ಯಕ್ಷರು ಜ್ಯೋತಿ ಮುರುಗ, ಸದಸ್ಯರಾದ ದೇವುಗೌಡ, ಶಿವು.ಎನ್,ರೇಖಾ,ನರೇಂದ್ರಾ, ವೆಂಕಟೇಶ್, ಶಶಿಕಲಾ ಸೇರಿದಂತೆ ಧರ್ಮಸ್ಥಳ ಗ್ರಾಮೀಣಾಭಿವೃಧ್ದಿ ಸಂಸ್ಥೆಯ ಪ್ರಕಾಶ್ ನಾಯ್ಕ, ಹನುಮಂತು ಕೆ.ಟಿ, ಸೇರಿದಂತೆ ಮತ್ತೀತತರಿದ್ದರು.