ಹೊನ್ನಾಳಿ ಜ 19 ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಮತ್ತು ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ರವರ ನೇತೃತ್ವದಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತೋತ್ಸವ ವನ್ನು ಕೋವಿಡ್ ಇರುವ ಕಾರಣ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸರಳವಾಗಿ ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಮತ್ತು ರೆಡ್ಡಿ ಸಮಾಜದ ಮುಖಂಡರುಗಳು ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಆಚರಣೆ ಮಾಡಲಾಯಿತು .
ಉಪಸ್ಥಿತಿಯಲ್ಲಿ ತಹಸೀಲ್ದಾರ್ ಬಸವನಗೌಡ ಕೋಟೂರ್ ಮತ್ತು ರೆಡ್ಡಿ ಸಮಾಜದ ಮುಖಂಡರುಗಳು ಹಾಗೂ ಕಂದಾಯ ಇಲಾಖೆಯವರಾದ ರವಿಕುಮಾರ್, ಚೇತನ್ ಮತ್ತು ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.