ಇಂಧಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೀ ರೇಷ್ಮಬಾನು ಅವರೊಂದಿಗೆ ಶಾಲೆಗೆ ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಎರಡು ಮೂರು ದಿನಗಳ ಹಿಂದೆ ಫುಡ್‍ಪಾಯಿಜನ್‍ನಿಂದ 70 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಇದೀಗ ಅವರು ಗುಣಮುಖರಾಗಿದ್ದು, ಶಾಲೆಯಲ್ಲಿನ ಮಕ್ಕಳ ಕೊರೊನಾ ಪರೀಕ್ಷೆ ಮಾಡಿಸಿದಾಗ ಅದರಲ್ಲಿ ಮೂರು ಜನ ಮಕ್ಕಳಿಗೆ ಕರೊನಾ ಪಾಸಿಟಿವ್ ಬಂದಿದ್ದು ಅವರನ್ನು ಹೋಮ್ ಐಶೋಲೇಷನ್ ಮಾಡಲಾಗಿದ್ದು ಜೊತೆಗೆ ಅಗತ್ಯ ಚಿಕಿತ್ಸೆ ಕೂಡ ನೀಡಲಾಗುತ್ತಿದೆ ಎಂದರು.
ಶಾಲೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದು ವಾರ ರಜೆ ಘೋಷಣೆ ಮಾಡಿದ್ದು, ಮಕ್ಕಳು ಶಾಲೆಗೆ ವಾಪಸ್ಸು ಬರುವಾಗ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಲಾಗಿದೆ ಎಂದರು.
ವಸತಿ ಶಾಲೆ ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಿಬ್ಬಂದಿಗಳಿಗೆ ಸೂಚನೆ : ಇನ್ನು ಮುಂದೆ ಅಡುಗೆಯಲ್ಲಿ ಯಾವುದೇ ಅವ್ಯವಸ್ಥೆ ಆಗದಂತೆ ನಿಗಾವಹಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ ರೇಣುಕಾಚಾರ್ಯ, ಶಾಲೆಯಲ್ಲಿ ಸ್ವಚ್ಚವಾಗಿಟ್ಟುಕೊಂಡು, ಮಕ್ಕಳಿಗೆ ಶುದ್ದ ನೀರಿನಿಂದ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವುದರ ಜೊತೆಗೆ ಮೆನು ಪ್ರಕಾರ ಅಡುಗೆ ಮಾಡುವುದರ ಜೊತೆಗೆ ಪ್ರತಿನಿಯತ್ಯ ಶುದ್ದ ತರಕಾರಿ ಬಳಸುವಂತೆ ಸೂಚನೆ ನೀಡಿದರು. ವಸತಿ ಶಾಲೆಗೆ ಮಕ್ಕಳು ನೂರಾರು ಕನಸುಗಳನ್ನು ಕಟ್ಟಿಕೊಂಡು ಬಂದಿರುತ್ತಾರೆ, ಆದ್ದರಿಂದ ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ ಎಂದ ಅವರು,ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂಧಿಗಳು ವಸತಿ ಶಾಲೆಯಲ್ಲೇ ಇದ್ದು ಮಕ್ಕಳ ಬಗ್ಗೆ ನಿಗಾ ಇಡುವಂತೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಉಪ ನಿರ್ದೇಶಕಿ ರೇಷ್ಮಾಬಾನು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದೊಡ್ಡ ಬಸವರಾಜ್,ಪ್ರಾಚಾರ್ಯ ಮಧುಸೂದನ್ ಹಾಗು ನಾಮದೇವ್ ಶಿಕ್ಷಕರು ಇದ್ದರು.
ಚಿತ್ರಸುದ್ದಿ : ಇಂಧಿರಾಗಾಂಧಿ ವಸತಿ ಶಾಲೆ ವಸತಿ ಶಾಲೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Leave a Reply

Your email address will not be published. Required fields are marked *