ಕಾರ್ಯಕ್ರಮ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ
ಹೊನ್ನಾಳಿಗೆ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಜ.21 ರಿಂದ
24 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ
ಹಮ್ಮಿಕೊಂಡಿದ್ದಾರೆ.
ಜ.21 ರಂದು ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ಹೊನ್ನಾಳಿ
ಆಗಮಿಸುವರು. ಮಧ್ಯಾಹ್ನ 1 ಗಂಟೆಗೆ ಹೊನ್ನಾಳಿ ಪಟ್ಟಣದಲ್ಲಿ
ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹಾಗೂ
ಸಾರ್ವಜನಿಕರ ಕುಂದುಕೊರತೆಗಳ ಅಹ್ವಾಲುಗಳನ್ನು
ಸ್ವೀಕರಿಸುವರು. ಸಂಜೆ 5.45ಕ್ಕೆ ಶಿವಮೊಗ್ಗಕ್ಕೆ ತೆರಳಿ ರಾತ್ರಿ 7.45ಕ್ಕೆ
ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಜ.22 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್ ಕಡದಕಟ್ಟೆ
ಗ್ರಾಮದಲ್ಲಿ ಶಾಲಾ ಕೊಠಡಿಯ ಶಂಕುಸ್ಥಾಪನೆಯನ್ನು
ನೆರವೇರಿಸುವರು. ಹಾಗೂ 11.30ಕ್ಕೆ ಸೊರಟೂರು ಗ್ರಾಮದಲ್ಲಿ
ಸಿ.ಸಿ.ರಸ್ತೆ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಕಂಚಿಕೊಪ್ಪ
ಗ್ರಾಮದಲ್ಲಿ ಸಿ.ಸಿ.ರಸ್ತೆ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ
ಉದ್ಘಾಟನೆ ಮತ್ತು ಶಾಲಾ/ಕಾಲೇಜು ಕೌಂಪೌಡ್ ಕಾಮಗಾರಿ
ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 12.30ಕ್ಕೆ ಅರುಂಡಿ
ಗ್ರಾಮದಲ್ಲಿ ಸಿ.ಸಿ.ರಸ್ತೆ ಉದ್ಘಾಟಿಸುವರು. ಹಾಗೂ 1 ಗಂಟೆಗೆ
ನ್ಯಾಮತಿಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುದ್ದ
ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 3 ಗಂಟೆಗೆ ಮಾದನಭಾವಿ ಗ್ರಾಮದಲ್ಲಿ ಚರಂಡಿ
ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4.30ಕ್ಕೆ
ಹೊನ್ನಾಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳ
ಆಹ್ವಾಲುಗಳನ್ನು ಸ್ವೀಕರಿಸುವರು ಮತ್ತು ವಾಸ್ತವ್ಯ
ಮಾಡುವರು.
ಜ.23 ರಂದು ಬೆಳಿಗ್ಗೆ ಹೊಸಜೋಗ ಗ್ರಾಮದಲ್ಲಿ ಅಂಗನವಾಡಿ
ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು. ಹಾಗೂ
11.30ಕ್ಕೆ ಚಿನ್ನಿಕಟ್ಟಿ ಗ್ರಾಮದಲ್ಲಿ ನಿವೇಶನ ಅಭಿವೃದ್ದಿ ಕಾಮಗಾರಿ
ಮತ್ತು ಪರಿಶಿಷ್ಟ ಜಾತಿ ಸಮುದಾಯದ ಸ್ಮಶಾನದ ಅಭಿವೃದ್ದಿ
ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸುವರು.
ಮಧ್ಯಾಹ್ನ 12 ಗಂಟೆಗೆ ಸವಳಂಗ ಗ್ರಾಮದಲ್ಲಿ ಚರಂಡಿ
ಅಭಿವೃದ್ದಿ ಕಾಮಗಾರಿಯ ಶಂಕುಸ್ಥಾಪನೆಯನ್ನು
ನೆರವೇರಿಸುವರು. 12.30ಕ್ಕೆ ಚಟ್ನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ
ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಘನತ್ಯಾಜ್ಯ ವಿಲೇವಾರಿ
ಘಟಕವನ್ನು ಉದ್ಘಾಟಿಸುವರು. 1 ಗಂಟೆಗೆ ಎರೆಮಡು ಗ್ರಾಮದಲ್ಲಿ
ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು ಶುದ್ದ ಕುಡಿಯುವ ನೀರಿನ
ಘಟಕದ ಶಂಕುಸ್ಥಾಪನೆಯನ್ನು ನೆರವೇರಿಸುವರು.1.30ಕ್ಕೆ
ಫಲವನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ
ಕಾಮಗಾರಿಯ ಶಂಕುಸ್ಥಾಪನೆಯ ನೆರವೇರಿಸುವರು. 2
ಗಂಟೆಗೆ ಕಂಚಿಗನಹಳ್ಳಿ ಗ್ರಾಮದ ಬಸ್ ನಿಲ್ದಾಣವನ್ನು
ಉದ್ಘಾಟಿಸುವರು. ಮಧ್ಯಾಹ್ನ 3.30ಕ್ಕೆ ಹೊನ್ನಾಳಿಗೆ ಪ್ರಯಾಣ ಬೆಳಸಿ
ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸುವರು.
ಜ.24 ರಂದು ಬೆಳಿಗ್ಗೆ 11 ಗಂಟೆಗೆ ಬೇಲಿಮಲ್ಲೂರು ಗ್ರಾಮದಲ್ಲಿ
ಸರ್ಕಾರಿ ಶಾಲಾ ಕೊಠಡಿಯ ಶಂಕುಸ್ಥಾಪನೆಯನ್ನು
ನೆರವೇರಿಸುವರು. 11.30ಕ್ಕೆ ಕೋಣನತಲೆ ಗ್ರಾಮದಲ್ಲಿ ಸರ್ಕಾರಿ
ಶಾಲಾ ಕೊಠಡಿಯ ಶಂಕುಸ್ಥಾಪನೆಯನ್ನು ನೆರವೇರಿಸುವರು.
ಮಧ್ಯಾಹ್ನ 12 ಗಂಟೆಗೆ ನರಸಗೊಂಡನಹಳ್ಳಿ ಗ್ರಾಮದಲ್ಲಿ
ಸಿ.ಸಿ.ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯನ್ನು
ನೆರವೇರಿಸುವರು. 12.30ಕ್ಕೆ ನೇರಲಗುಂಡಿ ಗ್ರಾಮದಲ್ಲಿ ಸಿ.ಸಿ.ರಸ್ತೆ
ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸುವರು.
ಹಾಗೂ 1 ಗಂಟೆಗೆ ಹೊಸದೇವರ ಹೊನ್ನಾಳಿ ಗ್ರಾಮದಲ್ಲಿ ಸರ್ಕಾರಿ
ಶಾಲಾ ಕೊಠಡಿಯ ಶಂಕುಸ್ಥಾಪನೆಯನ್ನು ನೆರವೇರಿಸುವರು.
ಮಧ್ಯಾಹ್ನ 1.30ಕ್ಕೆ ಸುಂಕದಕಟ್ಟೆ ಗ್ರಾಮದಲ್ಲಿ ಸರ್ಕಾರಿ ಶಾಲಾ
ಕೊಠಡಿಯ ಶಂಕುಸ್ಥಾಪನೆಯನ್ನು ನೆರವೇರಿಸುವರು. ಹಾಗೂ
2 ಗಂಟೆಗೆ ಹರಳಹಳ್ಳಿ ಗ್ರಾಮದ ಬಸ್ ನಿಲ್ದಾಣದ
ಶಂಕುಸ್ಥಾಪನೆಯನ್ನು ನೆರವೇರಿಸುವರು. ಮಧ್ಯಾಹ್ನ 3.30ಕ್ಕೆ
ಹೊನ್ನಾಳಿಗೆ ಪ್ರಯಾಣ ಬೆಳಸಿ ಸಾರ್ವಜನಿಕರ
ಕುಂದುಕೊರತೆಗಳನ್ನು ಸ್ವೀಕರಿಸುವರು. ವiತ್ತು ವಾಸ್ತವ್ಯ
ಮಾಡುವರೆಂದು ಅವರ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.