ನ್ಯಾಮತಿ:- ಜ-20 ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಬಾಯಿ ಗಾಡ್ ದೇವಸ್ಥಾನದಲ್ಲಿ ಇಂದು ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ದೇವಸ್ಥಾನ ಕಮಿಟಿ ವತಿಯಿಂದ ಹಾಗೂ ಈ ದೇವಸ್ಥಾನದ ಗೌರವ ಅಧ್ಯಕ್ಷರಾದ ಡಾ// ಎಲ್ ಈಶ್ವರನಾಯ್ಕರವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಡಾಕ್ಟರ್ ಎಲ್ ಈಶ್ವರ ನಾಯ್ಕರವರು ಮಾತನಾಡಿ .ನಾವು ಪತ್ರಿಕಾಗೋಷ್ಠಿಯನ್ನು ಕಮಿಟಿ ವತಿಯಿಂದ ಕರೆದಿರುವ ಉದ್ದೇಶ ಸೂರಗೊಂಡನಕೊಪ್ಪದಲ್ಲಿರುವ ನಮ್ಮ ಆರಾಧ್ಯದೈವ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯನ್ನು ಸ್ಮರಿಸುತ್ತಾ ,ಪ್ರತಿವರ್ಷದಂತೆ ಈ ,ವರ್ಷವೂ ಸಹ ಫೆಬ್ರುವರಿ 13/2/2022ರಿಂದ 14 ,15/2/2022ರವರೆಗೆ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಬೇಕಾಗಿತ್ತು, ಕಾರಣ ಏನು ಅಂದರೆ ಕೋವಿಡ್-19 ಮತ್ತು ಒಮಿಕ್ರೋನ್ ರೋಗವು ತೀವ್ರತರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮತ್ತು ಜಿಲ್ಲಾಡಳಿತ ಆದೇಶವನ್ನು ಪಾಲಿಸಿಕೊಂಡು ನಮ್ಮ ದೇವಸ್ಥಾನದ ಕಮಿಟಿಯ, ರಾಜ್ಯ ಸಮಿತಿ ಮತ್ತು ತಾಲೂಕಿನ ಸಮಿತಿಯವರ ಜೊತೆ ಎಲ್ಲಾ ಸದಸ್ಯರುಗಳೊಂದಿಗೆ ಚರ್ಚೆಯನ್ನು ಮಾಡಿ, ನಾವು ಇಂದು ಪ್ರಬ್ರವರಿ 13, 14 ,15 /2/2022 ರಂದು ಮೂರು ದಿನಗಳ ಕಾಲ ಜಾತ್ರಾಮಹೋತ್ಸವವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಆದ ಕಾರಣ ಈ ದೇವಸ್ಥಾನಕ್ಕೆ ಬರುವ ದೇಶ ಮತ್ತು ರಾಜ್ಯ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮೂಲೆ ಮೂಲೆಗಳಿಂದ ಬರುವ ಬಣಜಾರ ಸಮಾಜದ ಎಲ್ಲಾ ಭಕ್ತರು ಮತ್ತು ಮಾಲಾಧಾರಿಗಳ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ನಾವುಗಳು ನಮ್ಮ ಸಮುದಾಯದ ಜೊತೆ ಎಲ್ಲಾ ಸಮುದಾಯದವರು ಜಾತ್ರಾ ಮಹೋತ್ಸವಕ್ಕೆ ಬರುವುದರಿಂದ” ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಮ್ಮ ಗುರಿ” ಹಾಗಾಗಿ ಈ ಸಾರಿ ಯಾವುದೇ ಕಾರಣಕ್ಕೂ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವವು ನಡೆಯುವುದಿಲ್ಲ. ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಯಾರೂ ಕೂಡಾ ಅನ್ಯತಾ ಭಾವಿಸದೆನೆ, ಈ ದೇವಸ್ಥಾನವು ಸಂಪೂರ್ಣವಾಗಿ ಬಂದ ಮಾಡಲಾಗುವುದರಿಂದ ಯಾರೂ ಕೂಡಾ ಬರಬೇಡಿ ಎಂದು ಸರ್ವ ಭಕ್ತಾದಿಗಳಿಗೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಾ,


ನಮ್ಮ ಸಮುದಾಯದ ಒಬ್ಬ ಯುವಕ ವಿಡಿಯೋದಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರವರು ದುರುದ್ದೇಶವನ್ನು ಇಟ್ಟುಕೊಂಡು ಜಾತ್ರಾಮಹೋತ್ಸವವನ್ನು ಬಂದ್ ಮಾಡಿಸಿದ್ದಾರೆ ಎಂದು ಸಮಾಜದ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ .ಅದು ಶುದ್ಧ ಸುಳ್ಳು. ಕಾರಣ ವಿಷ್ಟೇ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿಲ್ಲ ಅನ್ನುವುದು ನಮಗೂ ನೋವು ಇದೆ

,ಆದರೆ ಶಾಸಕರಾಗಲಿ ಹಾಗೂ ನಮ್ಮ ಕಮಿಟಿಯವರ ಆಗಲಿ ರದ್ದು ಮಾಡಲಿಕ್ಕೆ ಹೇಳಿಲ್ಲ .ಸರ್ಕಾರದ ಆದೇಶ ಮತ್ತು ಜಿಲ್ಲಾಡಳಿತದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಕಮಿಟಿಯಲ್ಲಿ ಚರ್ಚಿಸಿ ಎಲ್ಲರ ಅಭಿಪ್ರಾಯ ತಿರ್ಮಾದ ಮೇರೆಗೆ ಕೂರೂನಾ ಮತ್ತು ಓಮಿಕ್ರಾನ್ ಮಹಾಮಾರಿ ರೋಗ ಇರುವ ಕಾರಣ ರದ್ದುಪಡಿಸಲಾಗಿದೆ ,

ಭಕ್ತಾದಿಗಳು ಮತ್ತು ಮಾಲಾಧಾರಿಗಳು ನಿಮ್ಮ ನಿಮ್ಮ ಊರಿನಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಪೋಟೋ ಇಟ್ಟು ಮಾಲೆಯನ್ನು ಹಾಕಿ ನಿಮ್ಮ ಮನೆಯಲ್ಲಿ ವ್ರತವನ್ನು ಆಚರಣೆ ಮಾಡಿ, ನಿಮ್ಮ ಮನೆಯಲ್ಲಿಯೇ ಮಾಲಾದಾರಿಗಳು ಮಾಲೆಯನ್ನು ವಿಸರ್ಜನೆ ಮಾಡಬಹುದು .ಅದರ ಜೊತೆಗೆ ನೀವುಗಳು ಅಂತರ ಕಾಪಾಡಿಕೊಂಡು ,ಮುಖಕ್ಕೆ ಮಾಸ್ಕ ದರಿಸಿ , ಸ್ಯಾನಿಟೈಸರ ಬಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರುಗಳ ನೇತೃತ್ವದಲ್ಲಿ ಈ ವಿಷಯವನ್ನು ಡಾ// ಎಲ್ ಈಶ್ವರನಾಯ್ಕರವರು ತಿಳಿಸಿದರು.
ಶ್ರೀ ಸಂತ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಿಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಬಣಜಾರ ಸಮಾಜದ ಮುಖಂಡರುಗಳ ವತಿಯಿಂದ ಕೊರೋನಾ ಮಹಾಮಾರಿ ಮತ್ತು ಓಮಿಕ್ರಾನ ರೋಗದಿಂದ ಮುಕ್ತರಾಗಿ ದೇಶದ ಜನರು ಅನಾರೋಗ್ಯದಿಂದ ಬೇಗ ಗುಣಮುಖರಾಗಲೆಂದು ಪೂಜೆಯನ್ನು ಮಾಡಿಸಿ ,ಪ್ರಾರ್ಥನೆ ಗೈದರು. ಸಾರ್ವಜನಿಕರ ಪರವಾಗಿ ಪೂಜೆ ಮಾಡಿಸಿರುವುದು ವಿಶೇಷವಾಗಿತ್ತು.


ಉಪಸ್ಥಿತಿಯಲ್ಲಿ ದೇವಸ್ಥಾನ ಕಮಿಟಿಯ ಗೌರವ ಅಧ್ಯಕ್ಷರಾದ ಡಾಕ್ಟರ ಎಲ್ ಈಶ್ವರ ನಾಯ್ಕ, ಮಾರುತಿ ನಾಯಕ ಬಣಜಾರ ಸಮಾಜದ ನಿಗಮ ನಿರ್ದೇಶಕ, ಶಿವರಾಂ ನಾಯ್ಕ, ಬೋಜ ನಾಯ್ಕ, ಸುರೇಂದ್ರ ನಾಯಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಬಣಜಾರ ಸಮಾಜದ ತಾಲೂಕು ಅಧ್ಯಕ್ಷ ಜುಂಜ ನಾಯ್ಕ, ಗೋಪಾಲ ನಾಯ್ಕ್, ಓಂಕಾರ್ ನಾಯ್ಕ, ದೂಧ್ಯಾ ನಾಯ್ಕ , ಶಂಕ್ರಾ ನಾಯ್ಕ ,ಸೇವಾ ನಾಯ್ಕ ದೇವಸ್ಥಾನದ ಆಡಳಿತಾಧಿಕಾರಿ. ಇನ್ನು ಮುಂತಾದ ಸಮಾಜದ ಮುಖಂಡರು. ಹಿರಿಯರು ಮತ್ತು ಕಿರಿಯರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *