ಮಾಡಿಸಿ.   

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು

3ಬಿ ವಿದ್ಯಾರ್ಥಿಗಳಿಗೆ ಸೂಚನೆ

ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಮೆಟ್ರಿಕ್
ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ
ನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಎಸ್.ಎಸ್.ಪಿ. (SSP)
ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಸದರಿ
ಸೌಲಭ್ಯವನ್ನು ವಿದ್ಯಾರ್ಥಿಯು ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟಲ್
ಬ್ಯಾಂಕ್ ಖಾತೆಗಳಿಗೆ ನೇರವಾಗಿ ಮಂಜೂರಾದ ಹಣವನ್ನು ಜಮೆ
ಮಾಡಲಾಗುತ್ತದೆ.
      2020-21ನೇ ಸಾಲಿಗೆ ಎಸ್.ಎಸ್.ಪಿ. ಆನ್‍ಲೈನ್ ಮೂಲಕ ಅರ್ಜಿಗಳನ್ನು
ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೇರವಾಗಿ ವಿದ್ಯಾರ್ಥಿಗಳು
ಹೊಂದಿರುವ ಬ್ಯಾಂಕ್ ಖಾತೆಗಳಿಗೆ ಮಂಜೂರಾದ ಮೊತ್ತ
ಜಮೆಯಾಗಿರುತ್ತದೆ. ಆದರೆ ಕೆಲ ವಿದ್ಯಾರ್ಥಿಗಳು ಮಾತ್ರ ಬ್ಯಾಂಕ್
ಅಥವಾ ಪೋಸ್ಟಲ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಸಹ
ಮಂಜೂರಾದ ಮೊತ್ತ ಜಮೆಯಾಗಿರುವುದಿಲ್ಲ. ಇಂತಹ
ವಿದ್ಯಾರ್ಥಿಗಳು ತಾವು ಹೊಂದಿರುವ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್
ಸೀಡಿಂಗ್ ಮೂಲಕ ಓPಅI ಮಾಡಿಸದೇ ಇರುವುದರಿಂದ ಮಂಜೂರಾದ
ಮೊತ್ತವು ಜಮೆಯಾಗಿರುವುದಿಲ್ಲ. ವಿದ್ಯಾರ್ಥಿಗಳು ಈ ಸೂಚನೆಯ
ದಿನಾಂಕದಿಂದ ಮೂರು ದಿನದೊಳಗಾಗಿ ತಾವು ಹೊಂದಿರುವ ಬ್ಯಾಂಕ್
ಅಥವಾ ಪೋಸ್ಟಲ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್
ಮೂಲಕ ಓPಅI ಮಾಡಿಸಿ, ಅಪ್‍ಡೇಟ್ ಮಾಡಿಸಿರುವ ಬಗ್ಗೆ ವರದಿಯನ್ನು
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ತಾಲ್ಲೂಕು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಕುಮಾರ್ ಬಡಾವಣೆ
ಕೊನೆ ಹಂತ, ಬಿ.ಸಿ.ಎಂ. ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ,
ದಾವಣಗೆರೆ ಇಲ್ಲಿಗೆ ಸಲ್ಲಿಸಲು ಸೂಚಿಸಿದೆ.

      ನಿಗಧಿತ ಅವಧಿಯೊಳಗೆ ಸಂಬಂಧಪಟ್ಟ ವಿದ್ಯಾರ್ಥಿಗಳು ಆಧಾರ್
ಸೀಡಿಂಗ್ ಮೂಲಕ ಓPಅI ಮಾಡಿಸಿದಿದ್ದರೆ, ಯಾವುದೇ ಕಾರಣಗಳನ್ನು
ಪರಿಗಣಿಸಿದೆ, ಮಂಜೂರಾದ ಮೊತ್ತವನ್ನು ಸರ್ಕಾರದ ಲೆಕ್ಕ
ಶೀರ್ಷಿಕೆಗೆ ವಾಪಸ್ಸು ಪಡೆದು ಜಮೆ ಮಾಡಿಕೊಳ್ಳಲಾಗುವುದು
ಎಂದು ತಿಳಿಯುವುದು. ಹೆಚ್ಚಿನ ವಿವರಗಳಿಗಾಗಿ ಕಛೇರಿ
ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *