ಸಾಗರ: ಯಾರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕಿತ್ತೊ ಹಾಗೂ ಗೌರವಿಸಬೇಕಿತ್ತೊ ಆ ಕಾರ್ಯವನ್ನು ಇನ್ನೂ ಅಂಬೆಗಾಲ್ಕಿಕ್ಕುತ್ತಿರುವ ಸಂಸ್ಥೆಯ ಜಮೀಲ್ ಸಾಗರ್ ಹಾಗೂ ರಫೀಕ ಕೂಪ್ಪ ಮಾಡಿದ್ದಾರೆ, ಇದನ್ನು ಸಮಾಜ ಗಮನಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯ ಪಟ್ಟರು.
ರಫೀಕ ಕೂಪ್ಪ ಸಾರಥ್ಯದ ಮಲೆನಾಡ ರಹಸ್ಯ ವಾರಪತ್ರಿಕೆ ಮತ್ತು ಜಮೀಲ್ ಸಾಗರ್ ಸಾರಥ್ಯದ ಸುದ್ದಿ ಮನೆ ಡಿಜಿಟಲ್ ಮಿಡಿಯಾ ಸಂಸ್ಥೆ ನಗರದ ಗ್ರೀನ್ ಎಂಬಾಸ್ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ, ಮಾಸ್ಟರ್ ವಿ. ಶಂಕರ್ ಮತ್ತು ಯುವ ಪತ್ರಕರ್ತ ANI ನ್ಯೂಸ್ ಏಜೆನ್ಸಿ ಕರೆಸ್ಪಾಂಡೆಂಟ್ &
ಟೈಂಸ್ ಆಫ್ ಇಂಡಿಯಾ ಶಿವಮೊಗ್ಗ-ಚಿಕ್ಕಮಗಳೂರು ರಿಪೋರ್ಟರ್ ಉದಯ ಸಾಗರ್ ಮತ್ತು ಸಮಾಜ ಸೇವಕ ಡಾ. ರಾಜು ಎಂ. ತಲ್ಲೂರ್ ಹಾಗೂ ಕ್ರಿಕೆಟ್ ಆಟಗಾರ ಮಿಥೇಶ್‍ಗೆ ಮಲೆನಾಡ ಸಾಧಕ, ಸಮಾಜ ಸೇವಕರಾದ ಹಾಜಿ ಇಕ್ಬಾಲ್ ಸಾಬ್, ಎಸ್.ಎಂ. ಭಾಷಾ ಸಾಬ್, ಫ್ರಾಂಕಿ ಲೊಬೋ, ಗಂಗಾಧರ, ಪೌರ ಕಾರ್ಮಿಕ ಮಹೇಶ್, ಮಹಿಳಾ ಮಂಡಳಿಯ ಪ್ರಭಾ ವೆಂಕಟೇಶ್‍ಗೆ ಮಲೆನಾಡ ಸೇವಕ ಮತ್ತು ಹಿರಿಯ ವೈದ್ಯರಾದ ಡಾ. ಭಾಗವತ್, ಡಾ. ನಾಗೇಂದ್ರಪ್ಪ ಮತ್ತು ಡಾ. ಕಾವ್ಯರವರಿಗೆ ಮಲೆನಾಡ ಅಪತ್ಬಾಂಧವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕಿತ್ತೊ ಹಾಗೂ ಗೌರವಿಸಬೇಕಿತ್ತೊ ಆ ಕಾರ್ಯವನ್ನು ಇನ್ನೂ ಅಂಬೆಗಾಲ್ಕಿಕ್ಕುತ್ತಿರುವ ಸಂಸ್ಥೆಯ ಸ್ನೇಹಿತರು ಮಾಡಿದ್ದಾರೆ, ಇದನ್ನು ಸಮಾಜ ಗಮನಿಸಬೇಕು ಎಂದರು.
ಸಾಧಕರಿಗೆ ಸನ್ಮಾನ ನೀಡಿದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಇಂದಿನ ಪೈಪೋಟಿ ಯುಗದಲ್ಲಿ ಸವಾಲು ಸ್ವೀಕರಿಸಿದರೆ ಮಾತ್ರ ಈಜಿ ದಡ ಸೇರುವುದಕ್ಕೆ ಸಾಧ್ಯ ಜತೆಗೆ ಯಾವುದೇ ವೃತ್ತಿಯಾದರೂ ನಿಖರತೆ, ಸ್ಪಷ್ಟತೆ ಇರಬೇಕು ಎಂದರು.

ನಾಡಿನ ಹಿರಿಯ ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ,
ಒಳ್ಳೆಯದನ್ನು ಗಮನಿಸುತ್ತ, ಒಳ್ಳೆಯದಕ್ಕೆ ಪ್ರೋತ್ಸಾಹ ನೀಡುತ್ತ ಮತ್ತು ಒಳ್ಳೆಯದನ್ನು ಎತ್ತಿ ಹಿಡಿಯುವ ಕಾರ್ಯವನ್ನು ಪತ್ರಕರ್ತ ಮತ್ತು ಪತ್ರಿಕೆ ಮಾಡಬೇಕು ಅಂತಹ ಪತ್ರಕರ್ತ ಮತ್ತು ಪತ್ರಿಕೆಗೆ ಸಮಾಜ ಖಂಡಿತಾ ಗೌರವ ನೀಡಲಿದೆ ಎಂದರು.
ಸಮಾಜ ಸೇವಕ ರಾಜು ಎಂ. ತಲ್ಲೂರ್, ನಗರ ಸಭಾ ಅಧ್ಯಕ್ಷೆ ಮಧುರಾ ಶಿವಾನಂದ, ಎಸ್‍ಜಿಟಿ ಗ್ರೂಪ್ ಮಾಲೀಕ ಹಾಜಿ ಸಯ್ಯದ್ ಇಕ್ಬಾಲ್ ಸಾಬ್, ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ರಾಕೇಶ್ ಡಿಸೋಜ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ.ಆರ್. ಸಂಸ್ಥೆಯ ಮಹಮ್ಮದ್ ರಫೀ ಅಧ್ಯಕ್ಷತೆವಹಿಸಿದ್ದರು. ನಗರ ಸಭಾ ಉಪಾಧ್ಯಕ್ಷ ವಿ ಮಹೇಶ್, ಆಯುಕ್ತ ರಾಜು ಬಣಕರ್, ಕೆ.ಎಸ್. ಪ್ರಶಾಂತ್, ಜಿ.ಆರ್. ಷಡಕ್ಷರಪ್ಪ, ಸಯ್ಯದ್ ಜಾಕೀರ್, ಸುದ್ದಿ ಮನೆ ಡಿಜಿಟಲ್ ಮಿಡಿಯಾ ಸಂಪಾದಕ ಜಮೀಲ್ ಸಾಗರ್ , ಮಲೆನಾಡ ರಹಸ್ಯ ಪತ್ರಿಕೆಯ ಸಹ ಸಂಪಾದಕರಾದ ರಫೀಕ್ ಎಸ್.ಎಂ. ಮೈಕಲ್ ಕೇನಿತ್ ಶಿವಮೊಗ್ಗ. ದೇವರಾಜ್ ಆರಗ.ಹರೀಶ್ ಕುಳಗೆರಿ.ಮೊಹಮ್ಮದ್ ಸಾಧಿಕ್ ಸುದ್ದಿ ಮನೆ. ವೇಣು ಗೋಪಾಲ್ ಬೆಂಗಳೂರು. ಬದ್ರುಲ್ ಮುನೀರ್. (ಉ.ಕ) ಅಯ್ಯೂಬ್ ಉಡುಪಿ.ವಸಂತ್ ಮೇಳವರಿಗೆ. ಸಂತೋಷ್ ಸದ್ಗುರು.ಸತೀಶ್ ಮೊಗವೀರ, ಕೆಪಿಸಿಸಿ ರಾಜ್ಯ ಒಬಿಸಿ ಕಾರ್ಯದರ್ಶಿ ಪ್ರಶಾಂತ್ ಕೆ ಎಸ್, ಹಾಗೂ ನಗರಸಭೆಯ ಸದಸ್ಯರು ಹಾಜರಿದ್ದರು.