ಹೊನ್ನಾಳಿ, ಜು 20- ಹೊನ್ನಾಳಿ ತಾಲೂಕಿನ ಕೆಲ ವ್ಯಕ್ತಿಗಳಿಂದ ನನ್ನ ಮೇಲೆ ಮಾಧ್ಯಮಗಳ ಮೂಲಕ ನನ್ನ ಮೇಲೆ ರಾಜಕೀಯ ಪಿತೂರಿ ಮಾಡುತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್ ಬಿ.ಮಂಜಪ್ಪ ನವರು ಕಿಡಿ ಕಾರಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಸಾಮಾಜಿಕ ಜಾಲ ತಾಣದ ಸಂಚಾಲಕ ತರಗನಹಳ್ಳಿ ಶಿವರಾಜ್ ಎಂಬಾತನೇ ಇದಕ್ಕೆಲ್ಲಾ ಮೂಲ ಸೂತ್ರಧಾರನಾಗಿದ್ದಾನೆ ಎಂದು ದೂರಿದರು.
ನನ್ನ ಮಗಳ ಮದುವೆಗೆ ನನ್ನ ಪಕ್ಷದ ವರಿಷ್ಠರನ್ನು ಕಂಡು ಅವರಿಗೆ ಆಮಂತ್ರಿಸಿದ್ದೇನೆ. ಇದನ್ನು ಟಿಕೆಟ್ಗಾಗಿ ಲಾಬಿ ಎನ್ನುವಂತೆ ಪ್ರತಿಬಿಂಬಿಸ ಲಾಗಿದೆ ಎಂದು ಅವರು ಖಂಡಿಸಿದರು.
ಶಿವರಾಜ್ ತನ್ನ ಸ್ಟೇಟಸ್ ನಲ್ಲಿ ಮಗಳ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಅಂತ ತಿಳಿದುಕೊಳ್ಳೋರಿಗೆ ಏನು ಹೇಳಬೇಕು ಗೊತ್ತಿಲ್ಲ ಎಂಬುದಾಗಿ ಇದಕ್ಕೆ ನಾನು ಪ್ರತಿಕ್ರಿಯಿಸಿದ್ದೆ ಎಂದು ಹೇಳಿದರು.
ನಾನು ಈ ಬಗ್ಗೆ ಸೋಷಿಯಲ್ ಮೀಡಿಯಾದ ಕಾರ್ಯಕರ್ತರಿಗೆ ಫೋನ್ ಮಾಡಿ ಈ ರೀತಿ ಮಾಡಬೇಡ ಎಂದು ಹೇಳಿದ್ದೇನೆ ಆದರೆ ನನ್ನ ಸಂಭಾಷಣೆಯನ್ನು ಎಡಿಟ್ ಮಾಡಿ ನಾನು ಅವರಿಗೆ ಬೈದಿರುವುದನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿರುವ ಗಣೇಶ್, ಹುಣಸಘಟ್ಟ ಹರೀಶ್ ವಾಮದೇವ್, ಹೊಟ್ಯಾಪುರ ಮಲ್ಲೇಶ್ ಇವರುಗಳು ಕೂಡ
ಪಕ್ಷದ ನಾಯಕರಿಗೆ ಮುಜುಗರ ಬರುವಂತೆ ಫೋಟೋ ಸಮೇತ ಹೇಳಿಕೆ ಹಾಕಿರುವುದಕ್ಕೆ ಬೇಸರದಿಂದ ಪಕ್ಷದ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದ್ದೇವೆಂದರು.
ಎಸ್ಸೆಸೈಂ ನನ್ನ ರಾಜಕೀಯ ಗುರು :
ನನ್ನ ರಾಜಕೀಯ ಜೀವನ
ಆರಂಭಗೊಂಡಿದ್ದೇ ಮಾಜಿ ಸಚಿವ ಎಸ್.ಮಲ್ಲಿಕಾರ್ಜುನ್ ಆವರ ಗರಡಿಯಲ್ಲಿ ಅವರೇ ನನ್ನ ರಾಜಕೀಯ ಗುರುವಾಗಿದ್ದರೆ, ನಾನು ಕೂಡ ಕಾಂಗ್ರೆಸ್ ಟಿಕೆಟ್ ಆಕ್ಷಾಂಕ್ರಿಯಾಗಿದ್ದೇನೆ. ಇದು ಒಬ್ಬ ಕಾರ್ಯಕರ್ತನಿಗೆ ಇರಬೇಕಾದ ಸಹಜ ಆಸೆಯು ಕೂಡ ಆಗಿದೆ, ಆದರೆ, ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನನ್ನ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ, ಅವರ ಗೆಲುವಿಗೆ ಶ್ರಮಿಸುವುದು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಕರ್ತವ್ಯ ಕೂಡ
ಆಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬೀರಪ್ಪ, ಹರಳಹಳ್ಳಿ ಬೆನಕಪ್ಪ, ಮಲ್ಲೇಶಪ್ಪ, ಮಾರಪ್ಪ, ಅಣ್ಣಪ್ಪ, ಬಸವರಾಜಪ್ಪ ಇಟಗಿ, ಕುಮಾರ್ ಮತ್ತಿತರರಿದ್ದರು.