ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯ
ಕೈಗೊಳ್ಳಲು ಸರ್ಕಾರದ ಉಲ್ಲೇಖಿತ ಜು.03 ರ ಆದೇಶದಲ್ಲಿ
ಹೊರಡಿಸಲಾಗಿದ್ದ ಕೋವಿಡ್-19 ಕಣ್ಗಾವಲು, ನಿಯಂತ್ರಣ
ಮತ್ತು ಜಾಗೃತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು
ಹಾಗೂ ತದನಂತರ ಇದಕ್ಕೆ ಸಂಬಂಧಿಸಿದ ಆದೇಶಗಳು,
ಹಾಗೂ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯಲ್ಲಿ
ವಿಸ್ತರಿಸಲಾಗಿರುತ್ತದೆ.
ಮುಂದುವರೆದು, ಸರ್ಕಾರ ಆದೇಶಿಸಿದಂತೆ, ಒಮಿಕ್ರಾನ್
ರೂಪಾಂತರ ವೈರಾಣು ಹೊರಹೊಮ್ಮುತ್ತಿರುವ ಈ
ಸನ್ನಿವೇಶದಲ್ಲಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು
ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತು ಕೋವಿಡ್-19
ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ
ಅನುಸರಿಸುವುದು ಮತ್ತು ಐದು ತಂತ್ರಗಳ ಕುರಿತು
ಪೂರ್ವಭಾವಿ ಮೇಲ್ವಿಚಾರಣೆ, ಕಣ್ಗಾವಲು ಮತ್ತು
ಕೇಂದ್ರೀಕೃತ ಅನುμÁ್ಠನ ಕ್ರಮಗಳನ್ನು
ಕೈಗೊಳ್ಳಬೇಕಾಗಿರುತ್ತದೆ. ಆದ್ದರಿಂದ ಹೆಚ್ಚುವರಿ
ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ
ಆದೇಶಿಸಿರುತ್ತಾರೆ.
ದಿನಾಂಕ 31.01.2022ರ ಬೆಳಿಗ್ಗೆ 5.00 ಗಂಟೆಯವರೆಗೆ
ದಾವಣಗೆರೆ ಜಿಲ್ಲೆಯಾಧ್ಯಂತ ಸರ್ಕಾರವು ಉಲ್ಲೇಖಿತ ದಿನಾಂಕ
21.01.2022ರ ಆದೇಶದೊಂದಿಗೆ ಹೊರಡಿಸಿರುವ
ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ
ಆದೇಶಿಸಿದ್ದಾರೆ.
ವಾರಂತ್ಯದ ಕಫ್ರ್ಯೂವನ್ನು ಹಿಂಪಡೆಯಲಾಗಿದೆ. ಆದರೆ,
ರಾತ್ರಿ ಕಫ್ರ್ಯೂ ಮಾತ್ರ – ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 10
ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಜಿಲ್ಲೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆ, ರ್ಯಾಲಿ, ಉತ್ಸವ,
ಜಾತ್ರೆಗಳಿಗೆ ಅವಕಾಶವಿರುವುದಿಲ್ಲ. ಮದುವೆಗಳಲ್ಲಿ
ಹೊರಾಂಗಣದಲ್ಲಿ ಗರಿಷ್ಠ 200, ಒಳಾಂಗಣದಲ್ಲಿ ಗರಿಷ್ಠ 100 ಜನ
ಮಾತ್ರ ಭಾಗವಹಿಸಲು ಅವಕಾಶವಿದೆ.
ದೇವಾಲಯಗಳಲ್ಲಿಯೂ ಕೂಡ ಕೇವಲ ದರ್ಶನಕ್ಕೆ
ಮಾತ್ರ ಅವಕಾಶವಿದೆ. ಸಾರ್ವಜನಿಕರು ತಪ್ಪದೆ ಮಾಸ್ಕ್
ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ
ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ
ಸಾರ್ವಜನಿಕರು ತಪ್ಪದೆ ಸರ್ಕಾರದ ಮಾರ್ಗಸೂಚಿಯನ್ನು
ಪಾಲಿಸಬೇಕು. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಆದೇಶಸಿರುತ್ತಾರೆ.