ಈಶ್ವರ ದೇವಸ್ಥಾನ ಆವರಣದಲ್ಲಿ “ನೇತಾಜಿ
ಸುಭಾಷ ಚಂದ್ರ ಬೋಸ್‍ರವರ ಜನ್ಮದಿನ”
ಆಚರಣೆ.
ಜನಸಾಮಾನ್ಯರ
ಹೃದಯ ಗೆದ್ದವರು
ನೇತಾಜಿ ಸುಭಾಷ ಚಂದ್ರ
ಬೋಸ್.
ಬಾಸುಭ ಅಧ್ಯಕ್ಷರಾದ ಜಯದೇವ
ಮೂರ್ತಿ
ಸ್ವಾತಂತ್ರ್ಯವನ್ನು ಯಾರೂ
ಕೊಡುವುದಿಲ್ಲ. ಅದನ್ನು ನಾವೇ
ಪಡೆದುಕೊಳ್ಳಬೇಕು, ನನಗೆ ರಕ್ತ
ನೀಡಿ ಮತ್ತು ನಾನು ನಿಮಗೆ
ಸ್ವಾತಂತ್ರ್ಯವನ್ನು ನೀಡುತ್ತೇನೆ,
ನಮ್ಮ ದೇಶ ಎದುರಿಸುತ್ತಿರುವ
ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ
ಪರಿಹಾರ ಎಂದವರು ಕೆಚ್ಚೆದೆಯ
ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ
ಬೋಸ್‍ರವರು, ಅವರ ಪ್ರಖರವಾದ
ಮಾತುಗಳು ನಮ್ಮ
ದೇಶಪ್ರೇಮವನ್ನ
ಜಾಗೃತಗೊಳಿಸುತ್ತಿರಬೇಕು ಎಂದು
ಬಾಸುಭ ಸಾಹಿತ್ಯ ಮತ್ತು ಸಾಂಸ್ಕøತಿಕ

ವೇದಿಕೆಯ ಅಧ್ಯಕ್ಷರಾದ ಜಯದೇವ
ಮೂರ್ತಿ ನುಡಿದರು.
ಅವರು ನಗರದ ತಮಟಕಲ್ಲು
ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ
ಆವರಣದಲ್ಲಿ ಬಾಸುಭ ಸಾಹಿತ್ಯ ಮತ್ತು
ಸಾಂಸ್ಕøತಿಕ ವೇದಿಕೆ ಮತ್ತು ಕರ್ನಾಟಕÀ
ಜ್ಞಾನ ವಿಜ್ಞಾನ ಸಮಿತಿ ಸಂಯುಕ್ತವಾಗಿ
ಆಯೋಜಿಸಿದ್ದ “ನೇತಾಜಿ ಸುಭಾಷ ಚಂದ್ರ
ಬೋಸ್‍ರವರ ಜನ್ಮದಿನದ” ಪ್ರಯುಕ್ತ
ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಮಾತನಾಡುತ್ತಿದ್ದರು.

ಅವರ ತೀಕ್ಷ್ಣ ಮಾತುಗಳು, ಪ್ರಖರ
ನಿಲುವುಗಳು, ದೇಶ ಪ್ರೇಮದ ಕಿಚ್ಚು
ಬ್ರಿಟಿಷರ ಎದೆಯಲ್ಲಿಯೂ ನಡುಕ
ಉಂಟು ಮಾಡಿತ್ತು, ಜನ, ಹಣ ಮತ್ತು
ವಸ್ತುಗಳು ಸ್ವತಃ ಜಯ ಅಥವಾ
ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ.
ಧೈರ್ಯಶಾಲಿ ಕೆಲಸಗಳು ಮತ್ತು
ಉಜ್ವಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ
ನಾವು ಪ್ರೇರಕ ಶಕ್ತಿಯನ್ನು
ಹೊಂದಿರಬೇಕು ಎಂದರು.
ಚಿಕ್ಕ ವಯಸ್ಸಿನಿಂದಲೇ ಸುಭಾಷ್ ಚಂದ್ರ
ಬೋಸ್
ರಾಷ್ಟ್ರೀಯಮನೋಧರ್ಮವನ್ನು
ಹೊಂದಿದ್ದರು ಮತ್ತು ಭಾರತೀಯರ

ಬಗ್ಗೆ ಬ್ರಿಟಿಷರು ಹೊಂದಿದ್ದ
ತಾರತಮ್ಯವು ಅವರನ್ನು ಕಾಡಿತ್ತು.
ಅವರು ಬ್ರಿಟಿಷರ ವಿರುದ್ಧ
ಬಂಡಾಯವೆದ್ದ ಮಹಾನ್ ಸ್ವಾತಂತ್ರ್ಯ
ಹೋರಾಟಗಾರರು ಮತ್ತು ಭಾರತಕ್ಕೆ
ಸ್ವಾತಂತ್ರ್ಯವನ್ನು ನೀಡಲು
ಹೋರಾಡಿದವರು. ಅವರ ನಿರ್ಭೀತ
ವರ್ತನೆ ಮತ್ತು ಭಾರತವನ್ನು
ಮುಕ್ತಗೊಳಿಸುವ ಸಂಕಲ್ಪ ನಮ್ಮಲ್ಲಿ
ಸ್ಫೂರ್ತಿ ತುಂಬಬೇಕು ಎಂದರು.

ಕೆಜೆವಿಎಸ್‍ನ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ.
ಎಸ್. ಸ್ವಾಮಿ, ಮಾತನಾಡುತ್ತಾ
ಗಾಂಧೀಯವರ ಮಂದ ಮಾರ್ಗಕ್ಕಿಂತ
ಸುಭಾಷ್‍ರದ್ದು ತೀರಾ ಭಿನ್ನ ಎಂಬುದು
ಕ್ರಮೇಣ ಜನರಿಗೆ ಗೊತ್ತಾಯಿತು.
ನಿವೃತ್ತಯುದ್ಧ ಕೈದಿಗಳು.
ಕ್ರಮೇಣ ಸ್ವಾತಂತ್ರ್ಯ ಸಮಯದಲ್ಲಿ
ಪಕ್ವ ಸೈನ್ಯವಾಗಿ ರೂಪುಗೊಂಡು
ದೇಶ ಸೇವೆಗೆ ಮೀಸಲಾಗಿ ನಿಂತಿತ್ತು. ಹೀಗೆ
ಭಾರತದ ಸ್ವಾತಂತ್ರ್ಯ ಹೋರಾಟಪರ
ಅಭಿಯಾನ ಮಾಡುವ ಮೂಲಕ ದೇಶದ
ಜನಸಾಮಾನ್ಯರ ಹೃದಯ ಮಂದಿರದಲ್ಲಿ
ಅಚ್ಚಳಿಯದೆ ಉಳಿದ ಮಾಹಾನ್ ಕ್ರಾಂತಿ
ಪುರುಷ ನೇತಾಜಿ ಎಂದರು.

ಅವರ ಆದರ್ಶ ನೀತಿಗಳನ್ನು ನಮ್ಮ
ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ
ಮಾದರಿಯಾಗಿ ಬಾಳಿದರೆ ಮಾತ್ರ, ನಮ್ಮ
ಬದುಕು ಸಾರ್ಥಕತೆ ಕಾಣಲಿದೆ, ಜೊತೆಗೆ
ಬೋಸರಿಗೂ ಗೌರವ
ಸಲ್ಲಿಸಿದಂತಾಗುತ್ತದೆ, ಇಂದಿನ ದಿನಗಳಲ್ಲಿ
ನೆನಪಿಡುವುದು ಅವಶ್ಯಕತೆ ಇದೆ
ಎಂದರು.
ವಿಶ್ವನಾಥ ಶೆಟ್ಟರ ಮಾತನಾಡುತ್ತಾ
ಬೋಸ್‍ರವರು ನಮ್ಮ ದೇಶದ ದೊಡ್ಡ
ವ್ಯಕ್ತಿ, ಸ್ವಾತಂತ್ರಕೋಸ್ಕರ ನಾವು
ಹೋರಾಡಬೇಕೇ ಹೊರತು ಅವರನ್ನು
ನಾವು ಬೇಡಿಕೊಳ್ಳಬಾರದು, ನಾವು
ನಮ್ಮ ದೇಶವನ್ನ ನಮಗೆ ಬಿಟ್ಟುಕೊಡಿ
ಎಂದು ಕೇಳಬೇಕು ಎಂದರು, ಅವಾಗ
ಮಹಾತ್ಮ ಗಾಂಧೀಜಿ ಅವರು ಶಾಂತಿ ಮತ್ತು
ಅಹಿಂಸೆಯಿಂದ ತೆಗೆದುಕೊಳ್ಳೋಣ
ಎಂದರು, ಶಾಂತಿಯಿಂದ
ತೆಗೆದುಕೊಳ್ಳಲು ನಮ್ಮಲ್ಲೇನು
ರಕ್ತವಿಲ್ಲವೇ, ನಮ್ಮಲ್ಲಿನ ಶಕ್ತಿಯಿಲ್ಲವೇ
ಎಂದರು, ನಾವು ಅವರ ಮೇಲೆ ಯುದ್ಧ
ಮಾಡಿ ತೆಗೆದುಕೊಳ್ಳಬೇಕು ಎಂದು
ಹಠ ಮಾಡಿದಂಥ ಮಹಾಯೋಗಿ ನೇತಾಜಿ
ಸುಭಾಷ್ ಚಂದ್ರ ಬೋಸ್ ಎಂದರು.
ಅಂಗಡಿ ರಂಗಣ್ಣ, ತಿಪ್ಪೇಸ್ವಾಮಿ, ರಾಜಣ್ಣ,
ತಿಪ್ಪೇಸ್ವಾಮಿ ರೆಡ್ಡಿ, ಎಚ್. ಎಸ್. ರಚನಾ, ಎಚ್.ಎಸ್.

ಪ್ರೇರಣಾ ಹಾಗೂ ಈಶ್ವರ ಬಡಾವಣೆ
ನಿವಾಸಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ
ಸಾರ್ವಜನಿಕರಿಗೆ ಸಾರ್ವಜನಿಕರಿಗೆ ಸಿಹಿ
ಹಂಚಲಾಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ
ಜಯವಾಗಲಿ ಅಮರರಾಗಲಿ ಎಂಬ
ಘೋಷಣೆಗಳನ್ನು ಕೂಗಲಾಯಿತು.

Leave a Reply

Your email address will not be published. Required fields are marked *