ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಜ. 25 ರಂದು ಜಿಲ್ಲೆಯಲ್ಲಿ
ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜ.25 ರಂದು ಬೆಳಿಗ್ಗೆ 11 ಗಂಟೆಗೆ ಸೊರಟೂರು ಗ್ರಾಮದಲ್ಲಿ
ಪಶುಸಂಗೋಪನೆ ಇಲಾಖೆಯಿಂದ ಆಯೋಜಿಸಿರುವ ಕರುಗಳ
ಪ್ರದರ್ಶನ ಹಾಗೂ ಬರಡು ದನಗಳ ಚಿಕಿತ್ಸಾ ಶಿಬಿರ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಕ್ಕೆ
ಸುರಹೊನ್ನೆ ಗ್ರಾಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ
ಕಾರ್ಡ್‍ಗಳ ವಿತರಿಸುವರು. ಮಧ್ಯಾಹ್ನ 01 ಗಂಟೆಗೆ ನ್ಯಾಮತಿ
ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯ ತಾಲ್ಲೂಕು ಮಟ್ಟದ ಕಛೇರಿ ಉದ್ಘಾಟನೆ
ನೆರೆವೇರಿಸುವರು. ಮ. 01.30ಕ್ಕೆ ಹೊನ್ನಾಳಿಗೆ ತೆರಳಿ ಸ್ಥಳೀಯ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ. 03 ಗಂಟೆಗೆ
ಕುರುವಾ ಗ್ರಾಮದಲ್ಲಿಯ ಏತ ನೀರಾವರಿ ಜಾಕ್‍ವೆಲ್ ವೀಕ್ಷಣೆ ಮತ್ತು
ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಸಂಜೆ 05 ಕ್ಕೆ
ಹೊನ್ನಾಳಿಯ ಪ್ರಯಾಣ ಬೆಳೆಸಿ ಸಾರ್ವಜನಿಕರ ಕುಂದು
ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ ಮಾಡಲಿದ್ದಾರೆ
ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.