ಹೊನ್ನಾಳಿ : ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬಂದಾಗಲೆಲ್ಲಾ ಅವರೇ ಮಂತ್ರಿಗಳಾಗ ಬೇಕೆ?, ನಮಗೆ ಆ ಅರ್ಹತೆ ಇಲ್ಲವೇ? ನಮಗೆ ಸಚಿವ ಸ್ಥಾನ ಕೊಟ್ಟರೂ ಸಮರ್ಥವಾಗಿ ನಿಬಾಯಿಸಿ ತೋರಿಸುತ್ತೆವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯ ಸ್ವಗೃಹದಲ್ಲಿ ಮಾದ್ಯಮದರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ನಾನು,ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಷ್ಟು ಕಷ್ಟ ಪಟ್ಟಿದ್ದೇವೆಂದು ನಮಗೆ ಮಾತ್ರ ಗೊತ್ತು ಎಂದ ರೇಣುಕಾಚಾರ್ಯ, ನಮಗೆ ಸಚಿವರಾಗು ಯೋಗ್ಯತೆ ಇಲ್ಲವೇ ಎಂದು ಪ್ರಶ್ನೀಸಿದರು.
ನಮ್ಮ ಕ್ಷೇತ್ರದ ಸಮಸ್ಯೆಗಳ ಜೊತೆಗೆ ಆಗ ಬೇಕಾದ ಕೆಲಸಗಳ ಬಗ್ಗೆ ಹೇಳೋಣವೆಂದರೆ ಕೆಲ ಸಚಿವರು, ಶಾಸಕರು ಪೋನ್ ಕೂಡ ತೆಗೆಯುವುದಿಲ್ಲಾ, ಶಾಸಕರು ಪತ್ರಗಳನ್ನು ಕೊಟ್ಟರೆ ಸಚಿವರು ಉತ್ತರ ಕೊಡುವ ಬದಲು,ಅವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಚಿವ ಸಂಪುಟದಲ್ಲಿ ಈಗ ನಾಲ್ಕು ಸಚಿವ ಸ್ಥಾನಗಳು ಖಾಲಿ ಇದ್ದು, ಹಲವು ಬಾರೀ ಸಚಿವರಾದವರು ತಾವೇ ಸಚಿರಾಗುತ್ತಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಿ ಎಂದ ರೇಣುಕಾಚಾರ್ಯ, ಮಾರ್ಚನಲ್ಲಿ ಸಚಿವ ಸಂಪುಟ ವಿಸ್ತರಣೆ ಬೇಡ, ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿ, ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುತ್ತೇವೆ ಎಂದರು.
ಹೊಸಬರಿಗೆ ಸಚಿವ ಸ್ಥಾನ ಸಿಗ ಬೇಕು ಎಂದು ನಾನು ಹಾಗೂ ಯತ್ನಾಳ್ ಒಂದಾಗಿದ್ದೇವೆ, ಎಂದ ರೇಣುಕಾಚಾರ್ಯ ನಾನೂ ಕೂಡ ವಿದಾನಸೌಧ ಮೂರನೇ ಮಹಡಿಗೆ ಸೀಮಿತವಾಗಿದ್ದ ಅಬಕಾರಿ ಇಲಾಖೆಯನ್ನು ರಾಜ್ಯದ ಉದ್ದಗಲಕ್ಕೆ ಓಡಾಡಿ ರಾಜ್ಯಕ್ಕೆ ರಾಜ್ಯಸ್ವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು,ನಾನು ಸಚಿವನಾಗಿ ಕೆಲಸ ಮಾಡಿದ್ದ ಅನುಭವವಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ನಾವೆಲ್ಲರೂ ಪಕ್ಷವನ್ನು ಕಟ್ಟಲು ಹಗಲಿರುಳು ಶ್ರಮವಹಿಸಿದ ಪರಿಣಾಮ ಪಕ್ಷ ಅಧಿಕಾರಕ್ಕೆ ಬಂದಿದೇ . ಪಕ್ಷ ಹಾಗೂ ಸಂಘಟನೆ ನಮಗೆ ಸಾಕಷ್ಟು ಕಲಿಸಿದ್ದು, ಪಕ್ಷ ನನಗೆ ತಾಯಿ ಸಮಾನ ಎಂದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಎಲ್ಲಾ ವಿಚಾರವನ್ನು ಚರ್ಚೆ ಮಾಡಿದ್ದು, ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೆ ಉಪಯೋಗವಿಲ್ಲಾ,ನಾಲ್ಕು ಸಚಿವ ಸ್ಥಾನ ಖಾಲಿಇದ್ದರೂ ಬೇರೆಯವರಿಗೆ ಹೆಚ್ಚುವರಿಯಾಗಿ ಕೊಟ್ಟಿದ್ದಾರೆ, ಅವರು ಕಾರು ಸೇರಿದಂತೆ ಎಲ್ಲಾ ಬಳಕೆ ಮಾಡುತ್ತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿದದೆ. ಇದು ಚುನಾವಣೆ ವರ್ಷ ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೇ ಉಪಯೋಗವಿಲ್ಲಾ, ಕೊಡುವುದಾರೇ ಬೇಗ ಕೊಡಿ ಎಂದು ಆಗ್ರಹಿಸಿದರು.
ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಮ್ಮದೇಯಾದ ವರ್ಚಸ್ಸು ಇದೇ, ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ವರಿಷ್ಟರಿಗೆ ಬಿಟ್ಟ ವಿಚಾರ, ವರಿಷ್ಟರು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ದ ಎಂದ ರೇಣುಕಾಚಾರ್ಯ, ಹೊಸ ಮುಖಗಳಿಗೆ ಅವಕಾಶ ನೀಡಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೇ ಎಂದರು.
ಕೇಂದ್ರದ ಮಾಜಿ ಸಚಿವರು ಶಾಸಕ ಬಸವನಗೌಡ ಪಾಟೀಲ್ ಯತ್ನಾಲ್ ಹಾಗೂ ನನ್ನ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕ್ಕೆನ್ನುವ ದೃಷ್ಟಿಯಿಂದ ನಮ್ಮ ಮಧ್ಯೆ ಇದ್ದ ಬಿನ್ನಾಭಿಪ್ರಾಯವನ್ನು ಮರೆತು ಪಕ್ಷದ ಸಂಘಟನೆಗಾಗಿ ಒಂದಾಗಿದ್ದೇವೆ ಎಂದರು.
ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆ ಬಂದರೆ ಸಾಕು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ ಅಂತಹ ಕನಸು ಕಾಣಬೇಡಿ ಎಂದು ಡಿಕೆಶಿ ಅವರಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ ಕೇವಲ ರಾಜಕೀಯ ಗಿಮಿಕ್‍ಗಳಿಂದ ಅಧಿಕಾರಕ್ಕೆ ಬರುವುದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲಾ ಎಂದರು.