ಹೊನ್ನಾಳಿ- ಜ-25; ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ತಾಲೂಕು ಆಡಳಿತ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 25/ 12 /20 22ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ತಾಲೂಕಾಡಳಿತ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರರಾದ ಬಸವನಗೌಡ ಕೋಟೂರ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ರವರು ನಂತರ ಮಾತನಾಡಿ 1950 ಜನವರಿ 25ರಂದು ಸಂವಿಧಾನ ಸಂಸ್ಥೆಯು ಚುನಾವಣೆಯನ್ನು ಹುಟ್ಟುಹಾಕಿದರು. 18 ವರ್ಷ ತುಂಬಿದ ಶಾಲಾ ಮಕ್ಕಳುಗಳಿಗೆ ಮತದಾನದ ಗುರುತಿನ ಚೀಟಿಯನ್ನು ವಿತರಿಸಿ, ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆಯವರೆಗೆ ನೀವುಗಳು ಮತದಾನ ಮಾಡುವ ಮೂಲಕ ಕರ್ತವ್ಯ ಮತ್ತು ಜವಾಬ್ದಾರಿಯೂ ನಿಮ್ಮಂತ ಯುವ ಪಡೆಯಿಂದ ನಿಷ್ಟಾವಂತ ಸದೃಢವಾಗಿ ದೇಶವನ್ನು ಕಟ್ಟುವಂತಹ ನಾಯಕರುಗಳನ್ನು ಬೆಳೆಸುವ ಶಕ್ತಿ ನಿಮ್ಮ ಕೈಯಲ್ಲಿದೆ, ಪ್ರತಿಯೊಬ್ಬರ ತಪ್ಪದೆ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕುನ್ನು ಚಲಾಯಿಸ ಬಹುದಾಗಿದೆ ಎಂದರು.
ತದಾದ ನಂತರ ಬಸನಗೌಡ ಕೊಟೂರರವರು ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಅವಳಿ ತಾಲೂಕಿನ ಎಲ್ಲ ಅಧಿಕಾರಿಗಳಿಗೂ 18 ವರ್ಷ ತುಂಬಿ ಚುನಾವಣೆ ಗುರುತಿನ ಚೀಟಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಪ್ರತಿಜ್ಞೆಯನ್ನು ಮಾಡುವುದರ ಮೂಲಕ ಬೋಧಿಸಿದರು.
;-ಮತದಾರರ ಪ್ರತಿಜ್ಞಾ ವಿಧಿ ಈ ಕೆಳಗಿನಂತೆ ಇದೆ;-
ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು, ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ ಜನಾಂಗ ,ಜಾತಿ ,ಮತ ,ಭಾಷೆ ,ಅಥವಾ ಯಾವುದೇ ಪ್ರೇರಣೆಗಳ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ , ಈ ಮೂಲಕ ಪ್ರತಿಜ್ಞೆಯನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ವೃತ್ತ ನಿರೀಕ್ಷಕ ಟಿವಿ ದೇವರಾಜ ಹೆಣ್ಣು ಮಕ್ಕಳ ಬಗ್ಗೆ ಅವರು ಮಾತನಾಡುತ್ತಾ ಕೇಂದ್ರ ಸರ್ಕಾರ ಹೊಸದೊಂದು ಕಾನೂನನ್ನು ಜಾರಿಗೆ ತಂದಿದೆ .ಈ ಹಿಂದೆ ಹೆಣ್ಣು ಮಕ್ಕಳಿಗೆ 18 ವರ್ಷ ಮದುವೆಯಾಗಲಿಕ್ಕೆ, ಗಂಡು ಮಕ್ಕಳಿಗೆ 21 ವರ್ಷ ನಿಗದಿಯಾಗಿತ್ತು. ಆದರೆ ಈಗ ಹೊಸ ಕಾನೂನು ರೀತಿಯಲ್ಲಿ ಮದುವೆಯಾಗುವುದಾದರೆ ಹೆಣ್ಣುಮಕ್ಕಳಿಗೆ 21ವರ್ಷ ಗಂಡುಮಕ್ಕಳಿಗೆ 25 ವರ್ಷ ನಿಗದಿ ಮಾಡಲಾಗಿದೆ. ಇದಕ್ಕೆ ಮುಂಚಿತವಾಗಿ ಮದುವೆಯಾದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನಿನ ಪರಿಪಾಠವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿದರು.
ಉಪಸ್ಥಿತಿಯಲ್ಲಿ ಬಸನಗೌಡ ಕೊಟ್ಟೂರು ತಾಲೂಕು ದಂಡಾಧಿಕಾರಿಗಳು, ವೃತ್ತನಿರೀಕ್ಷಕ ಟಿವಿ ದೇವರಾಜ್, ತಾಲೂಕು ಪಂಚಾಯಿತಿ ನಿರ್ವಹಣಾ ಅಧಿಕಾರಿ ರಾಮ ಬೋವಿ ,ವಕೀಲರಾದ ಉಮಾಕಾಂತ್ ಜೋಯಿಸ್, ಪುರಸಭೆಯ ಮುಖ್ಯ ಅಧಿಕಾರಿ ಪಂಪಾಪತಿ ನಾಯಕ, ವಕೀಲರಾದ ಉಮೇಶ್, ಎಲ್ಲಾ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ,ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.