ಹೊನ್ನಾಳಿ-ಜ;- ದಿನಾಂಕ:-24-01-2022 ರಂದು ರಾತ್ರಿ ಸಮಯದಲ್ಲಿ ಹೊನ್ನಾಳಿ ತಾಲ್ಲೂಕು ದೊಡ್ಡರೆಹಳ್ಳಿ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಶ್ರೀ ಡಾ.ಸಂತೋಷ ಪೊಲೀಸ್ ಉಪಾದೀಕ್ಷಕರು, ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಹೊನ್ನಾಳ ಪೊಲೀಸ್ ನಿರೀಕ್ಷಕರಾದ ಶ್ರೀ ದೇವರಾಜ ಟಿ.ವಿ., ರವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀ ಬಸವರಾಜ ಬಿರದಾರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ತಂಡ ದಾಳಿ ಮಾಡಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 24 ಜನರನ್ನು ಬಂಧಿಸಿ, ಇಸ್ಪೀಟ್ ಜೂಜಾಟ ತೊಡಗಿಸಿದ್ದ ಒಟ್ಟು 01,31,500/ ರೂಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣಾ ಗುನ್ನೆ ನಂ: 32/2022, ಕಲಂ 87 ಕೆಪಿ ಆಕ್ಟ್ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ,ಎಂದ ಸಿಪಿಐ ಟಿವಿ ದೇವರಾಜ್ ರವರು ತಿಳಿಸಿದರು.
ಸದರಿ ಮೇಲ್ಕಂಡ ದಾಳಿಯಲ್ಲಿ ಶ್ರೀ ದೇವರಾಜ್ ಟಿ.ವಿ, ಸಿಪಿಐ ಹೊನ್ನಾಳ, ಶ್ರೀ ಬಸವರಾಜ್ ಬಿರಾದಾರ ಪಿ.ಎಸ್.ಐ ಹೊನ್ನಾಳ ಠಾಣೆ, ಹಾಗೂ ಸಿಬ್ಬಂದಿಯವರಾದ ಜಗದೀಶ್, ಬೊಜಪ್ಪ, ರಾಮಚಂದ್ರ, ಮಂಜುನಾಥ, ರಫೀಕ್, ಉಮೇಶ್, ಸುನೀಲ್, ಗುರುಬಸಪ್ಪ, ಶ್ರೀನಿವಾಸ, ಉಮೇಶ, ಲೊಕೇಶ್, ಮೌನೇಶಚಾರಿ ಇವರುಗಳು ಭಾಗವಹಿಸಿರುತ್ತಾರೆ.