ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ
ಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆ
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್)
ಯೋಜನೆಯಡಿ
ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ
ಗೌರವಧನದ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿ
ಮಾಡಿಕೊಳ್ಳಲು ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆ
ಮಾಡಲಾಗುತ್ತದೆ. ಸಮಿತಿಯ ನಿರ್ಧಾರವೇ
ಅಂತಿಮವಾಗಿರುತ್ತದೆ.
ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ :ಹುದ್ದೆಯ ಸಂಖ್ಯೆ
02, ದ್ವಿತೀಯ ಪಿ.ಯು.ಸಿ ಉತ್ತೀರ್ಣ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ
ಆದ್ಯತೆ, ಮಾಸಿಕ ಗೌರವಧನ ರೂ.8000 ಪ್ರಯಾಣ ಭತ್ಯೆ
ರೂ.2000 ವರೆಗೆ, ಕಂಪ್ಯೂಟರ್ ಜ್ಣಾನ ಹೊಂದಿರಬೇಕು(ಪ್ರಮಾಣ
ಪತ್ರ ಪಡೆದಿರಬೇಕು.) ಪುರಸಭೆ ವ್ಯಾಪ್ತಿಯಲ್ಲಿ ಖಾಯಂ
ನಿವಾಸಿಯಾಗಿದ್ದು ಕನಿಷ್ಟ 3 ವರ್ಷ ಸ್ವ-ಸಹಾಯಸಂಘದಲ್ಲಿ
ಸದಸ್ಯರಾಗಿರಬೇಕು. ಯಾವುದೇ ಸರ್ಕಾರಿ /ಅರೆಸರ್ಕಾರಿ/ಎನ್.ಜಿ.ಓ
ಗಳಲ್ಲಿ ಉದ್ಯೋಸ್ಥರಾಗಿರಬಾರದು. ಉತ್ತಮ ಸಂವಹನ
ಕೌಶಲ್ಯದ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ
ಪಾಲ್ಗೋಳ್ಳುವ ಇಚ್ಚಾಶಕ್ತಿ ಹೊಂದಿರಬೇಕು. ಕಾರ್ಯನಿಮಿತ್ತ
ಅಗತ್ಯವಿದ್ದಲ್ಲಿ ಹೊರ ಸಂಚಾರಕ್ಕೆ ಸಿದ್ದರಿರಬೇಕು. 18 ರಿಂದ 45
ವರ್ಷದೊಳಗಿನ ವಯೋಮಾನದಾವರಾಗಿಬೇಕು. ಕಡ್ಡಾಯವಾಗಿ
ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗುವುದು.
ಆಸಕ್ತ ಆಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪುರಸಭೆಯ
ಕಚೇರಿ ಅವಧಿಯಲ್ಲಿ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿ
ಸಲ್ಲಿಸಲು ಫೆ.02 ಕೊನೆಯ ದಿನವಾಗಿದೆ. .ನಂತರ ಸಲ್ಲಿಸುವ
ಅರ್ಜಿಗಳನ್ನು ಸ್ವೀಕರಿಸುವುದಿಲ್ಲವೆಂದು ಹೊನ್ನಾಳಿ ಪುರಸಭೆ
ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.