ಹೊನ್ನಾಳಿ 26 ಪಟ್ಟಣದಲ್ಲಿರುವ ಕ್ರೀಡಾಂಗಣದಲ್ಲಿ ಇಂದು ಭಾರತದ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮಾನ್ಯ ಶಾಸಕರಾದ ಎಂಪಿ ರೇಣುಕಾಚಾರ್ಯ ಅಧ್ಯಕ್ಷತೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.
ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೊಡುವವರು ಪೊಲೀಸ್ ಇಲಾಖೆ ಮತ್ತು ಗೃಹ ರಕ್ಷಕ ದಳ ತಂಡ ಹಾಗೂ ವಿದ್ಯಾರ್ಥಿಗಳ ಪೆರೇಡನ್ನು ವೀಕ್ಷಿಸಿದರು.
ದೇಶದ 73ನೇ ಗಣರಾಜ್ಯೋತ್ಸವದ ಅಧ್ಯಕ್ಷೀಯ ಭಾಷಣವನ್ನು ಎಂಪಿ ರೇಣುಕಾಚಾರ್ಯ ಅವರು ಮಾತನಾಡಿದರು.
ಉಪಸ್ಥಿತಿಯಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ ,ಪುರಸಭೆಯ ಅಧ್ಯಕ್ಷರಾದ ಹೋಬಳಿದಾರ್ ಬಾಬು , ತಹಸೀಲ್ದಾರರಾದ ಬಸವನಗೌಡ ಕೋಟೂರ್ ,ಪುರಸಭೆಯ ಅಧಿಕಾರಿಯಾದ ಪಂಪಾಪತಿ ನಾಯಕ್, ಸಿಪಿಐ ಟಿವಿ ದೇವರಾಜ್, ಪಿಎಸ್ಐ ಬಸವರಾಜ್ ಬೀರದಾರ್, ಇ ಇಓ ರಾಮ ಭೋವಿ, ಬಿಇಓ ಪಿ ರಾಜೀವ್, ತಾಲೂಕು ಕ್ರೀಡಾಧಿಕಾರಿ ವರ್ನೇಶ್ ಪ್ಪ. ತಾಲೂಕು ನೌಕರ ಸಂಘದ ಅಧ್ಯಕ್ಷ ಕುಮಾರ್. ತಾಲೂಕಿನ ಎಲ್ಲಾ ಅಧಿಕಾರಿ ವರ್ಗದವರು ಶಿಕ್ಷಕರು ಮತ್ತು ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.