ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಸುತ್ತ
ಹಾಗೂ ಇತರೆ ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ತಂಬಾಕು
ಉತ್ಪನ್ನಗಳ ಮಾರಾಟ ಮಾಡುತ್ತಿರುವವರ ಮೇಲೆ ಅಪರ
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ತಂಡವು ದಾಳಿ
ನಡೆಸಿ, ಕಾಯ್ದೆ ಉಲ್ಲಂಘನೆಯ ಒಟ್ಟು 12 ಪ್ರಕರಣಗಳಿಗೆ ಒಟ್ಟು 1500
ರೂ. ದಂಡ ವಿಧಿಸಿದೆ.
ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲಿಕರು ಧೂಮಪಾನ
ನಿಷೇಧದ ನಾಮಫಲಕವನ್ನು ಕಟ್ಟುನಿಟ್ಟಾಗಿ ಪ್ರದರ್ಶಿಸಲು ಹಾಗೂ
ಅಳವಡಿಸಲು ತಂಡ ಸೂಚಿಸಿತು.
ತಂಬಾಕು ತನಿಖಾ ತಂಡದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ
ಡಾ.ಪ್ರಭು, ನಲ್ಲೂರು ವೈದ್ಯಾಧಿಕಾರಿ ಡಾ. ಅಕ್ಷಯ್ಕುಮಾರ್.ಸಿ,
ಲೋಕೆಶಪ್ಪ ಟಿ ಮತ್ತು ರಾಜಪ್ಪ.ಎಮ್ ಹಿರಿಯ ಆರೋಗ್ಯ
ನಿರೀಕ್ಷಣಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣಕೋಶದ
ಸಲಹೆಗಾರ ಸತೀಶ್ ಕಲಹಾಳ್ ಹಾಗೂ ಸಮಾಜ ಕಾರ್ಯಕರ್ತ
ದೇವರಾಜ್.ಕೆ.ಪಿ ನಲ್ಲೂರುನ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಮಹಮ್ಮದ್ ಅಲಿ
ಇತರರು ಹಾಜರಿದ್ದರು.