ಹೊನ್ನಾಳಿ ;-ಜ-27- ಹೊನ್ನಾಳಿ ತಾಲೂಕು ಬಿದರಗಡ್ಡಿ ಗ್ರಾಮದಲ್ಲಿ ಇಂದು ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ತರಳಬಾಳು ಕಲ್ಯಾಣ ಮಂಟಪವು ಹಣದ ತೊಂದರೆ ಯಿಂದ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಮಾಜದ ಅಧ್ಯಕ್ಷರು ಮತ್ತು ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರ ನೇತೃತ್ವದಲ್ಲಿ ಸಮಾಜದ ವತಿಯಿಂದ ದೇಣಿಗೆ ಎತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿದರಗಡ್ಡೆ ಗ್ರಾಮದ ಪ್ರತಿಯೊಂದು ಮನೆಯವರು 5000 ,10000 ,25000 ಹಣವನ್ನು ವಯಕ್ತಿಕ ವಾಗಿ ದೇಣಿಗೆ ರೂಪದಲ್ಲಿ ಕೊಟ್ಟರು. ಅದರಲ್ಲಿ ವಿಶೇಷತೆಯೇನೆಂದರೆ ಶಿವ ಬ್ಯಾಂಕ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ ಸಿ ನಾಗೇಂದ್ರಪ್ಪ ನವರು ವೈಯಕ್ತಿಕವಾಗಿ ಒಂದು ಲಕ್ಷ ರೂಗಳನ್ನು ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ಮತ್ತುಸಮಾಜದ ಅಧ್ಯಕ್ಷರುಗಳ ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಚಕ್ಕ್ ನ್ನು ಹಸ್ತಾಂತರಿಸಿದರು .
ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ನಂತರ ಮಾತನಾಡಿ ,ವೈಯಕ್ತಿಕವಾಗಿ ಅಧ್ಯಕ್ಷರಾದ ನಾಗೇಂದ್ರಪ್ಪ ನವರು ಒಂದು ಲಕ್ಷ ರೂಗಳನ್ನು ಕಲ್ಯಾಣಮಂಟಪಕ್ಕೆ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ, ಅವರುಗಳಿಗೆ ವೈಯಕ್ತಿಕವಾಗಿ ಮತ್ತು ಸಮಾಜದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು .ಇದರ ಜೊತೆಗೆ ನಿಮ್ಮಂತ ದಾನಿಗಳು ಕೊಟ್ಟಂತಹ ದೇಣಿಗೆಯಿಂದ ಅಪೂರ್ಣಗೊಂಡ ಕಲ್ಯಾಣ ಮಂಟಪವನ್ನು ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯವರ ಸಹಾಯದೊಂದಿಗೆ ಬೇಗನೆ ಈ ಕಾರ್ಯವನ್ನು ಅವಳಿ ತಾಲೂಕಿನ ಸಮಾಜದ ಸಹಕಾರದಿಂದ ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.
ಉಪಸ್ಥಿತಿಯಲ್ಲಿ ಡಿ. ಜಿ ಶಾಂತನಗೌಡ್ರು ಮಾಜಿ ಶಾಸಕರು ,ಸಮಾಜದ ಅಧ್ಯಕ್ಷರಾದ ಕೆ ಕರೆಗೌಡ್ರು,ಸಮಾಜದ ಮುಖಂಡರಾದ ಎಚ್ ಎ ಗದಿಗೇಶಣ್ಣ ,ಶಿವ ಬ್ಯಾಂಕಿನ ಅಧ್ಯಕ್ಷರಾದ ಎಂಸಿ ನಾಗೇಂದ್ರಪ್ಪ ,ಕುಮಾರಣ್ಣ ,ನಾಗರಾಜಣ್ಣ ,ಕುಬೇರಣ್ಣ ಇನ್ನು ಮುಂತಾದ ಬಿದರಗಡ್ಡೆ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *