ಹೊನ್ನಾಳಿ : 100 ಕ್ಕೂ ಹೆಚ್ಚು ಸೇವೆಗಳು ಗ್ರಾಮ ಒನ್ ನಲ್ಲಿ ಒಂದೇ ಸೂರಿನಡಿ ದೊರೆಯಲಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇಲಿಮಲ್ಲೂರು, ಬೆನಕನಹಳ್ಳಿ ಹಾಗೂ ಬೆಳಗುತ್ತಿ ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯವರ್ತಿಗಳ ಹಾವಳಿ ಇಲ್ಲದೇ, ಜನರು ತಮ್ಮ ಕೆಲಸಗಳನ್ನು ಗ್ರಾಮ ಒನ್ ಮೂಲಕ ಮಾಡಿಕೊಳ್ಳಲು ಅನುಕೂಲವಾಗಿದೇ ಎಂದ ಶಾಸಕರು, ಸಾರ್ವಜನಿಕರು ಗ್ರಾಮ್ ಒನ್ ಕೇಂದ್ರಗಳ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಬೆಂಗಳೂರು ಒನ್, ಕರ್ನಾಟಕ ಒನ್ ಮಾದರಿಯಲ್ಲಿ ಸರ್ಕಾರಿ ಸೇವೆಗಳನ್ನು ಗ್ರಾಮ ಒನ್ ಮೂಲಕ ನೀಡಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಹೊನ್ನಾಳಿ ತಾಲೂಕಿನಲ್ಲಿ 26 ಹಾಗೂ ನ್ಯಾಮತಿ ತಾಲೂಕಿನಲ್ಲಿ 12 ಗ್ರಾಮ ಒನ್ ಕೇಂದ್ರಗಳಿದ್ದು ಜನರ ಇದರ ಸದುಪಯೋಗ ಪಡೆದುಕೊಳ್ಳುಂವತೆ ರೇಣುಕಾಚಾರ್ಯ ಮನವಿ ಮಾಡಿದರು.
ಸಾರ್ವಜನಿಕರು ತಾಲೂಕು ಕಚೇರಿಗೆ ಬಂದು ದಿನವಿಡಿ ಕಾಯುವ ಬದಲು, ಇದೀಗ ಅವರ ಕೆಲಸಗಳು ಗ್ರಾಮ ಒನ್ ನಲ್ಲೇ ಆಗಲಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕೃಷಿ, ತೋಟಗಾರಿಕೆ,ಕ ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಧಾರ್ ಕಾರ್ಡ,ರೇಷನ್ ಕಾರ್ಡ ಸೇರಿದಂತೆ ಹಲವಾರು ಸೇವೆಗಳು ಗ್ರಾಮ ಮಟ್ಟದಲ್ಲಿ ಸಿಗುವಂತಾಗುವ ದೃಷ್ಟಿಯಿಂದ ಗ್ರಾಮ ಒನ್ ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರ ನಾಯ್ಕ, ಗ್ರಾ.ಪಂ ಸದ್ಯರಾದ ಅಣ್ಣಪ್ಪ, ಪೂಜಾರ ಹನುಮಂತಪ್ಪ, ಚಂದ್ರಪ್ಪ ಮೂಲೆ, ಜಯಪ್ಪ ಬುತ್ತಿ, ಮಹೇಶ್ವರಪ್ಪ ಬಿ. ಕೆ.ಎನ್.ಹನುಮಂತಪ್ಪ ಸೇರಿದಂತೆ ಮುಖಂರಾದ ಕುಬೇರಪ್ಪ, ಅರಕೆರೆ ನಾಗರಾಜ್, ಕೋಟೆಮಲ್ಲೂರು ವಿಶ್ವನಾಥ್, ಚಂದ್ರು ಮಾಡೇರ್, ಚಂದ್ರು ಗುಂಡಾ, ಮಿಥುನ್ ಸೇರಿದಂತೆ ಮತ್ತೀತರರಿದ್ದರು.