ಹೊನ್ನಾಳಿ- ಜ 27 -ತಾಲೂಕು ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷ ಗಳಾದ ಕೆ ಕರೆಗೌಡಪ್ಪ ಮತ್ತು ಶಿವಪ್ಪ ಕೋಡಿಕೊಪ್ಪ ಇವರುಗಳಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರು ಗಳಾದ ಕೆ ಕರಿಯ ಗೌಡಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪನವರು ಮತ್ತು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಕಾರ್ಯಕರ್ತರಾದ ಶಿವರಾಜ ತರಗನಹಳ್ಳಿ ಇವರ ಫೋನಿನ ಸಂಭಾಷಣೆಯಲ್ಲಿ ತೊಡಗಿದಾಗ ಎಚ್ ಬಿ ಮಂಜಪ್ಪನವರು ಲಿಂಗಾಯತ ಸಮುದಾಯಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿಡಿಯೋ ವೈರಲ್ ಆಗಿತ್ತು.
ಆ ವಿಷಯವನ್ನು ಇಟ್ಟುಕೊಂಡು ಇಂದು ಸಾಧು ಲಿಂಗಾಯತ ಸಮಾಜದ ವತಿಯಿಂದ ನಾವುಗಳು ನಮ್ಮ ಲಿಂಗಾಯತ ಸಮಾಜದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಡೀ ಲಿಂಗಾಯತ ಸಮಾಜದವರಿಗೆ ಅಪಮಾನ ಮಾಡಿದ್ದಾರೆ ಅದರ ಜೊತೆಗೆ ಅವರು ರಾಜಕಾರಣದಲ್ಲಿ ಜಾತೀಯತೆ ಮಾಡುತ್ತಾರೆ, ಎಂದು ಹೇಳಿಕೆಯನ್ನು ಸಹ ಕೊಟ್ಟಿರುತ್ತಾರೆ ಅದು ಶುದ್ಧ ಸುಳ್ಳು. ಆದರೆ ನಾವುಗಳು ಲಿಂಗಾಯತರು ಜಾತಿಯತೆ ಮಾಡಿಲ್ಲ ಮುಂದೇನೂ ಕೂಡ ಮಾಡಲ್ಲ ಎಂದು ಇದಕ್ಕೆ ಉದಾಹರಣೆಯಾಗಿ ನಾವು ಈ ಹಿಂದೆ ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ
(1)ಜನತಾ ಪಕ್ಷದ ವತಿಯಿಂದ ಅರಬಗಟ್ಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಅಬ್ಬಲಗೆರೆ ಹನುಮಂತಪ್ಪ ಕುರುಬ ಸಮಾಜದ ವತಿಯಿಂದ ಎಲೆಕ್ಷನ್ನಿಗೆ ನಿಂತಿದ್ದರು ಅವರನ್ನು ಸಹ ನಾವುಗಳು ಗೆಲ್ಲಿಸಿದ್ದೆವು.
(2) ಚೀಲೂರು ಕ್ಷೇತ್ರದಿಂದ ಕುರುಬ ಸಮಾಜದ ಎಂ ರಮೇಶ್ ಅವರನ್ನು ಸಹ ಚುನಾವಣೆ ಯಲ್ಲಿ ಗೆಲ್ಲಿ ಸಿದ್ದೆವು.
(3) ಇದೇ ರೀತಿ ಚೀಲೂರು ಕ್ಷೇತ್ರದಿಂದ ಎಚ್ ಬಿ ಮಂಜಪ್ಪ ಅವರು ಸಹ ನಮ್ಮ ಸಹಕಾರದಿಂದ ಗೆದ್ದಿದ್ದರು.
(4) ನಂತರ ಬೇಲಿಮಲ್ಲೂರು ಕ್ಷೇತ್ರದಿಂದ ಎಚ್ ಬಿ ಮಂಜಪ್ಪ ಅವರ ಪತ್ನಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿಂತಿದ್ದರು .
ಬಿಜೆಪಿಯಿಂದ ಶಾಸಕರಾದ ಎಂಪಿ ರೇಣುಕಾಚಾರ್ಯ ಇವರ ಸೊಸೆಯು ಸಹ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಂತಿದ್ದರು.
ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರಾದ ಬಸವನಗೌಡ್ರು ಸೊಸೆಯಾದ ಶ್ರೀಮತಿ ಲತಾ ಡಿ ಬಿ ಪ್ರಕಾಶ್ ಸಹ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಕಣಕ್ಕೆ ನಿಂತಿದ್ದರು. ಯಾಕೆ ಈ ಮಾತನ್ನು ಈ ಸಂದರ್ಭದಲ್ಲಿ ಅಂದಿನ ಚುನಾವಣೆಯ ವಿಷಯವನ್ನು ತಿಳಿಸುತ್ತಿದ್ದೇವೆ ಎಂದರೆ
ಡಿ ಜಿ ಶಾಂತನಗೌಡ್ರು ಆಗಲಿ ಮತ್ತು ಸಾಧು ಲಿಂಗಾಯತ ಸಮಾಜದವರು ಆಗಲಿ, ಜಾತೀಯತೆಯನ್ನು ಮಾಡಿದ್ದರೆ ಮಾಜಿ ಶಾಸಕರಾದ ಬಸವನಗೌಡ ಅವರ ಸೊಸೆ ಶ್ರೀಮತಿ ಲತಾ ಪ್ರಕಾಶ್ ರವರು ಸರಳವಾಗಿ. ಗೆಲ್ಲಬಹುದಿತ್ತು, ಆದರೆ ಶಾಂತನಗೌಡ್ರು ರವರು ಜಾತಿಯವರು ಅನ್ನುವುದಾಗಲೀ ,ಅದಕ್ಕೆ ಮಿಗಿಲಾಗಿ ತಮ್ಮ ಹತ್ತಿರದ ರಕ್ತ ಸಂಬಂಧಿ ಅಣ್ಣನ ಸೊಸೆಯನ್ನು ಈ ಚುನಾವಣೆ ಸಂದರ್ಭದಲ್ಲಿ ಅವರನ್ನು ರಾಜಕೀಯ ವಾಗಿ ಪರಿಗಣಿಸಲಿಲ್ಲ ಹಾಗಾಗಿ ಎಚ್ ಬಿ ಮಂಜಪ್ಪ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ “ಮಂಜಪ್ಪ ಸೋತರೆ ನಾನು ಸೋತ ಹಾಗೆ” ಮಂಜಪ್ಪ ಗೆದ್ದರೆ ನಾನು ಗೆದ್ದ ಹಾಗೆ’ ಮಂಜಪ್ಪನ ಮರ್ಯಾದೆ ಹೋದರೆ ನನ್ನ ಮರ್ಯಾದೆ ಹೋದಹಾಗೆ” ಎಂದು ಪ್ರತಿಷ್ಠೆಯನ್ನು ತೆಗೆದುಕೊಂಡ ಡಿ ಜಿ ಶಾಂತನಗೌಡರವರು ಅದೇ ಬೆಲೆಮಲ್ಲೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಗಳನ್ನು ಮತ್ತು ಅದಕ್ಕಿಂತ ಮಿಗಿಲಾಗಿ ಸಾಧು ಲಿಂಗಾಯತ ಸಮಾಜದವರಿಗೆ ಕಾಲಿಗೆ ಬಿದ್ದು ರಾತ್ರೋರಾತ್ರಿ ಗುಟ್ಟಾಗಿ ಮತಯಾಚನೆಯನ್ನು ಮಾಡಿದರು. ಕಾರಣವಿಷ್ಟೇ ಅಣ್ಣನ ಸೊಸೆಯ ಗೆದ್ದರೆ ಜಾತಿಯತೆಯ ಮಾಡಿ ಗೆಲ್ಲಿಸಿದರು, ಅನ್ನುವ ಅಪವಾದ ಬರುತ್ತಿತ್ತು ಹಾಗಾಗಿ ಡಿ ಜಿ ಶಾಂತನಗೌಡರವರು ಜಾತಿವಾದ ಮತ್ತು ರಕ್ತ ಸಂಬಂಧವನ್ನು ದೂರವಿಟ್ಟರು, ಇದು ಜ್ವಲಂತ ಉದಾಹರಣೆಯಾಗಿದೆ. ಈ ವಿಷಯ ಸಹ ಮಂಜಪ್ಪನವರಿಗೆ ಗೊತ್ತಿದೆ. ಯಾಕೆ ನಮ್ಮ ಸಮಾಜದ ಮೇಲೆ ಹಗುರವಾಗಿ ಜಾತಿನಿಂದನೆ ಯಾಕೆ ಮಾಡಿದರು ಎಂದು ದುಃಖದ ಜೊತೆಗೆ ನಮ್ಮ ಸಮಾಜದವರು ನೋವು ಪಡುವಂತಾಗಿದೆ ಇದನ್ನು ತೀವ್ರವಾಗಿ ನಮ್ಮ ಸಮಾಜ ಖಂಡಿಸುತ್ತದೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಹೆಂಡೇರ ರುದ್ರೇಶ್ ಣ್ಣ ಮಾತನಾಡಿ ಎಚ್ ಬಿ ಮಂಜಪ್ಪನವರು ನಮ್ಮ ಸಮಾಜದ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಅವರನ್ನು ಕರೆಸಿ ತಪ್ಪಿದ್ದರೆ ಬೈದು ಬುದ್ಧಿಮಾತು ಹೇಳಬಹುದಾಗಿತ್ತು. ಜಾತಿ ನಿಂದನೆ ಮಾಡಿರುವುದು ಎಷ್ಟು ಸರಿ, ? ಒಬ್ಬ ವ್ಯಕ್ತಿ ತಪ್ಪು ಮಾಡಿದ್ದೆ ಆದರೆ ಅವನಿಗೆ ಶಿಕ್ಷೆ ಕೊಡಬಹುದಿತ್ತು. ಇಡೀ ಲಿಂಗಾಯತ ಸಮಾಜವನ್ನು ಯಾಕೆ ನಿಂದಿಸಿದರಿ ಎನ್ನುವುದು ನಮ್ಮ ಪ್ರಶ್ನೆಯಾಗಿ ಉಳಿದಿದೆ.
ನಾವು ಈ ಹಿಂದೆ ನಮ್ಮ ಸಮಾಜದವರು ಡಿ ಬಿ ಗಂಗಪ್ಪ ನವರನ್ನು. ಎಚ್ ಬಿ ಕೃಷ್ಣಮೂರ್ತಿ ಅವರನ್ನು ಎಂಪಿ ರೇಣುಕಾಚಾರ್ಯ ಅವರಿಗೆ ಲಿಂಗಾಯತ ಸಮುದಾಯ ಮತವನ್ನು ಹಾಕಿ ಗೆಲ್ಲಿಸಿದ್ದಾರೆ. .ಬರೇ ಒಂದು ಜಾತಿಯಿಂದ ರಾಜಕಾರಣದಲ್ಲಿ ಗೆಲ್ಲಲಿಕ್ಕೆ ಸಾಧ್ಯವಿಲ್ಲ ,ನೂರಾರು ಜಾತಿಗಳ ಮತದಾರರು ಮತವನ್ನು ಹಾಕಿದಾಗ ಮಾತ್ರ ಗೆಲ್ಲೋಕೆ ಸಾಧ್ಯ. ಇದನ್ನು ಅರಿತು ಯೋಚನೆಯನ್ನು ಮಾಡಿ ಮಾತನಾಡಬೇಕಿತ್ತು ಎಂದು ದುಃಖದಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಲಿಂಗಾಯಿತ ಸಮಾಜದ ಮುಖಂಡರಾದ ಅರಬಗಟ್ಟೆ ರಮೇಶ್ ರವರು ಸಹ ಮಾತನಾಡಿ, ಒಬ್ಬ ವ್ಯಕ್ತಿಗಿಂತ ಸಮಾಜ ದೊಡ್ಡದು ,ಸಮಾಜಕ್ಕೆ ಅವಮಾನ ಮಾಡಿದಾಗ ಎಂಥ ದೊಡ್ಡ ವ್ಯಕ್ತಿಯಾದರೂ ಕೂಡ ಚಿಕ್ಕವನು ಆಗುತ್ತಾನೆ ಎಂದು ಮಾತನ್ನು ಮುಗಿಸಿದರು.
ಉಪಸ್ಥಿತಿಯಲ್ಲಿ ಸಾಧು ವೀರಶೈವ ಸಮಾಜದ ಅಧ್ಯಕ್ಷರು ಗಳಾದ ಕೆ ಕರೆಗೌಡಪ್ಪ, ಕೊಡಿಕೊಪ್ಪ ಶಿವಣ್ಣ, ಗೊಣಗೆರೆ ನಂದಿಗೌಡ್ರು, ರಮೇಶಣ್ಣ ಎರಳ್ಳಿ, ಸಮಾಜದ ಮುಖಂಡರುಗಳಾದ ಹೆಂಡೇರ ರುದ್ರೇಶ್ ಣ್ಣ ,ರಮೇಶ್ ಅರಬಗಟ್ಟೆ, ಪ್ರಕಾಶ ಎ ಜಿ ,ಶೈಲೇಶ್, ಶಿವ ಬ್ಯಾಂಕಿನ ಅಧ್ಯಕ್ಷರಾದ ಎಂಸಿ ನಾಗೇಂದ್ರಪ್ಪ, ನಾಗಣ್ಣ ಬಿದರಗಡ್ಡೆ ,ಸುರೇಶಣ್ಣ ಟಿ ಬಿ ಸರ್ಕಲ್ ಇನ್ನು ಮುಂತಾದ ಸಮಾಜದ ಮುಖಂಡರುಗಳು ಮತ್ತು ಸಮಾಜದ ಬಾಂಧವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *