ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ನಾಗರೀಕರ ಸಹಕಾರ ಶ್ಲಾಘನೀಯವಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಕಾಲೋನಿ ಮತ್ತು ಬಸಾಪುರ ಗ್ರಾಮದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 15-20 ವರ್ಷದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೊಂಡು ಕ್ಷೇತ್ರದ ಎಲ್ಲಾ ವಾರ್ಡ್ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ನಾಗರೀಕರು ಸಹ ನಮಗೆ ಸಹಕಾರ ನೀಡುವುದರಿಂದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಯಿತು ಎಂದರು.
ಇಂದು ವಾರ್ಡ್ ನಂ.20 ಭಾರತ್ ಕಾಲೋನಿ 7ನೇ ಕ್ರಾಸ್‍ನ ದೇವಸ್ಥಾನದಿಂದ ತಿಪ್ಪೇಶಪ್ಪನವರ ಮನೆಯವರೆಗೆ ಸಿ.ಸಿ.ಚರಂಡಿ ಕವರಿಂಗ್ ಸ್ಲ್ಯಾಬ್ ಮತ್ತು ಡೆಕ್ ಸ್ಲ್ಯಾಬ್ ನಿರ್ಮಾಣ ಹಾಗೂ 13ನೇ ಕ್ರಾಸ್ ಅಡ್ಡ ರಸ್ತೆಯಿಂದ 8ನೇ ಕ್ರಾಸ್ ಪ್ರಕಾಶ್ ಮನೆಯವರೆಗೆ ಎರಡುಬದಿ ಚರಂಡಿ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಹಾಗೂ ಅಣ್ಣಾನಗರದ ವಿವಿಧ ಕ್ರಾಸ್‍ನಲ್ಲಿ ಎರಡು ಬದಿಯಲ್ಲಿ ಸಿ.ಸಿ. ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಮತ್ತು ವಾರ್ಡ್.ನಂ. 21 ಬಸಾಪುರದ ಹೈಸ್ಕೂಲ್ ಮುಂಭಾಗದಲ್ಲಿ ಬಾಕಿ ಉಳಿದ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಐಗೂರು ರಸ್ತೆ ಮತ್ತು ಬೋರಗನಹಳ್ಳಿ ರಸ್ತೆ ನಡುವಿನ ಆಶ್ರಯ ಕಾಲೋನಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅಣ್ಣಾನಗರದಲ್ಲಿ ಕೊಟ್ರೇಶ್ ಮನೆಯ ಕೇರಿ ಮತ್ತು ರೇವಣಸಿದ್ದೇಶ್ವರ ಮನೆಯ ಕೇರಿಯಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಸುಮಾರು 1.30 ಲಕ್ಷ ರೂ. ವೆಚ್ಚದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಮೀನಾಕ್ಷಿ ಜಗದೀಶ್, ಶ್ರೀಮತಿ ಶೀವಲೀಲಾ ಕೊಟ್ರಯ್ಯ, ಮಾಜಿ ಕಾರ್ಪೋರೇಟರ್ ಬಾ.ಮ.ಬಸವರಾಜಯ್ಯ, ಮುಖಂಡರುಗಳಾದ ಟಿ.ಡಿ.ಹಾಲೇಶ್, ವೆಂಕಟೇಶ ನಾಯ್ಕ, ಕೆ.ಎಲ್.ಹರೀಶ್, ಅಲೆಕ್ಸಾಂಡರ್ (ಜಾನು), ವಿರೇಶ್ ಎಲ್, ಮುನಿಸ್ವಾಮಿ, ಆನೆಕೊಂಡ ಗೌಡ್ರು ಅಜ್ಜಪ್ಪ, ಆನೆಕೊಂಡ ನಾಗರಾಜ್, ಎಸ್. ಸುರೇಂದ್ರಪ್ಪ, ಸಿ.ಮಹೇಶ್ವರಪ್ಪ, ಕೊಟ್ರಯ್ಯ. ಎಂ.ಎಸ್., ನಾಗೇಂದ್ರಚಾರ್, ಕಳೂರು ಮಹೇಶ್ವರಪ್ಪ, ಕೆ.ಬಿ..ಲಿಂಗರಾಜ್, ದೇವೆಂದ್ರಪ್ಪ, ಕೆ.ಬಿ.ಪ್ರಕಾಶ್, ಶಿವಕುಮಾರ್, ಆನೆಕೊಂಡ ಲಿಂಗರಾಜ್, ಬಿ.ಟಿ.ಮರುಳಸಿದ್ದಪ್ಪ, ಎನ್.ಎಂ. ಕೊಟ್ರಯ್ಯ, ವಾಮದೇವಯ್ಯ, ಪಂಚಾಕ್ಷರಯ್ಯ, ಅಕ್ಕಿ ರಾಜು, ಗಿರೀಶ್, ನಿಂಗಪ್ಪ, ಕ್ಯಾಂಪ್‍ನ ನಾಗರಾಜ್, ವಿರೇಶ್, ತಿಪ್ಪೇಶ್, ಹನುಮಂತಪ್ಪ ಮತ್ತಿತರರಿದ್ದರು.