ಶಾಂತಿಸಾಗರ (ಸೂಳೆಕೆರೆ) ಕೆರೆಯಲ್ಲಿ 2022ರ ಬೇಸಿಗೆ
ಹಂಗಾಮಿಗೆ ನೀರು ಹರಿಸಲು ಕುಡಿಯುವ ನೀರು ಹೊರತುಪಡಿಸಿ
ಸಿದ್ಧನಾಲಾ ಮತ್ತು ಬಸವನಾಲಾಗಳಿಗೆ ಏ. 30 ರವರೆಗೆ ನಿರಂತರವಾಗಿ
ನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ
ಹರಿಸಲಾಗುವುದು ಎಂದು ಭದ್ರಾ ನಾಲಾ ಉಪವಿಭಾಗದ ಸಹಾಯಕ
ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಪ್ರಸಕ್ತ ಬೇಸಿಗೆ ಹಂಗಾಮಿಗೆ ಕುಡಿಯುವ ನೀರು 779 ಎಂಸಿಎಫ್‍ಟಿ
ಹೊರತುಪಡಿಸಿ, ಅರೆ ನೀರಾವರಿ ಮತ್ತು ತೋಟದ ಬೆಳೆಗೆ
ಅವಶ್ಯವಿರುವ 1012 ಎಂಸಿಎಫ್‍ಟಿ ಕೆರೆಯಲ್ಲಿ ನೀರಿನ
ಲಭ್ಯತೆಯಿರುವುದರಿಂದ ಜ.20 ರಿಂದ ಏ.30 ರವರೆಗೆ ಸಿದ್ಧನಾಲಾ-
60ಕ್ಯೂಸೆಕ್  ಮತ್ತು ಬಸವನಾಲಾ-45 ಕ್ಯೂಸೆಕ್‍ನಂತೆ ನಿರಂತರವಾಗಿ
ನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ
ಹರಿಸಲು ತೀರ್ಮಾನಿಸಲಾಗಿದೆ.
ಬೆಳೆ ಮಾದರಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ
ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ
ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು
ಅನಧಿಕೃತ ನೀರಾವರಿ ಬೆಳೆಗಾರರು ಕರ್ನಾಟಕ ನೀರಾವರಿ ಕಾಯ್ದೆ 1965
ರ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ
ಒಳಗಾಗುತ್ತಾರೆ.
ಬೇಸಿಗೆ ಹಂಗಾಮಿನಲ್ಲಿ ರೈತ ಬಾಂಧವರು ಹೆಚ್ಚು ನೀರುಣ್ಣುವ
ಬೆಳೆಯಾದ ಭತ್ತವನ್ನು ಬೆಳೆಯದೆ, ಅರೆ ನೀರಾವರಿ ಬೆಳೆಯನ್ನು
ಮಾತ್ರ ಬೆಳೆಯಲು ಸೂಚನೆ ನೀಡಲಾಗಿದೆ. ಪ್ರಕಟಿತ
ಬೆಳೆಯನ್ನು ಬೆಳೆಯದೆ ಉಲ್ಲಂಘನೆ ಮಾಡಿ ಬೇರೆ ಬೆಳೆಯನ್ನು
ಬೆಳೆದರೆ ಜಲಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ.
ಇದಕ್ಕೆ ರೈತ ಬಾಂಧವರ ಸಹಕಾರ ಅತ್ಯಗತ್ಯ ಎಂದು ಸಹಾಯಕ
ಕಾರ್ಯಪಾಲಕ ಇಂಜಿನಿಯರ್ ಕನೀನಿನಿ ನಂ.3 ಭದ್ರಾ ನಾಲಾ ಉಪವಿಭಾಗ
ತ್ಯಾವಣಿಗೆ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *