ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರ. ಜ. 30 ರಿಂದ ಫೆ. 01
ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮ
ಪರಿಷ್ಕøತಗೊಂಡಿದೆ.
ರೇಣುಕಾಚಾರ್ಯ ಅವರು ಜ.30 ರಂದು ಬೆಳಿಗ್ಗೆ ಹೊನ್ನಾಳಿಯಿಂದ
ಹೊರಟು 11 ಗಂಟೆಗೆ ಹರಗನಹಳ್ಳಿಗೆ ತೆರಳಿ ಕ್ರಿಕೆಟ್ ಪಂದ್ಯಾವಳಿ
ಉದ್ಘಾಟಿಸುವರು. ಬೆ.11.45ಕ್ಕೆ ನೇರಲಗುಂಡಿ ತಾಂಡಾದಲ್ಲಿ ಪೇವರ್ ಬ್ಲಾಕ್
ಉದ್ಘಾಟಿಸುವರು, ಬಳಿಕ ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ
ಕಾಮಗಾರಿಗೆ ಚಾಲನೆ ನೀಡುವರು. 12.30ಕ್ಕೆ ಯಕ್ಕನಹಳ್ಳಿ
ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟಿಸುವರು. ಮ. 01 ಕ್ಕೆ
ನೆಲಹೊನ್ನೆ ತಾಂಡದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟನೆ ಹಾಗೂ
ಬಾಕ್ಸ್ ಚರಂಡಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು.
ಮ.1.30ಕ್ಕೆ ನೆಲಹೊನ್ನೆ ಗ್ರಾಮದಲ್ಲಿ ಬಾಕ್ಸ್ ಚರಂಡಿ ಕಾಮಗಾರಿ
ಶಂಕುಸ್ಥಾಪನೆ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆ
ನೆರವೇರಿಸುವರು. ಮ.2.30 ಕ್ಕೆ ನೆಲಹೊನ್ನೆ ಆಂಧ್ರ ಕ್ಯಾಂಪ್‍ನಲ್ಲಿ
ಜಲಜೀವನ್ ಮಿಷನ್ ವಾಟರ್ ಟ್ಯಾಂಕ್ ಮತ್ತು ಅಂಗನವಾಡಿ ಕಟ್ಟಡ ಉದ್ಘಾಟನೆ
ನೆರವೇರಿಸುವರು. ಮ.03 ಕ್ಕೆ ಕುಂಬಳೂರು ಗ್ರಾಮದ
ದೇವಸ್ಥಾನಕ್ಕೆ ಭೇಟಿ ನೀಡುವರು. ಮ.04.30ಕ್ಕೆ ಹೊನ್ನಾಳಿಗೆ ತೆರಳಿ
ಸಾರ್ವಜನಿಕರ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸಿ
ವಾಸ್ತವ್ಯ ಮಾಡುವರು.
ಜ.31 ರಂದು ಬೆಳಿಗ್ಗೆ ಹೊನ್ನಾಳಿಯಿಂದ ಹೊರಟು ಬೆ.11ಕ್ಕೆ ದಾನಿಹಳ್ಳಿ
ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯ ವತಿಯಿಂದ
ಆಯೋಜಿಸಿರುವ ಕುರಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಬೆ.11.30ಕ್ಕೆ ಫಲವನಹಳ್ಳಿ ಗ್ರಾಮದಲ್ಲಿ ಗ್ರಾಮ
ಒನ್ ಕೇಂದ್ರದ ಉದ್ಘಾಟನೆ ನೆರವೇರಿಸುವರು. ಮ.12ಕ್ಕೆ ನ್ಯಾಮತಿ
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ
ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮ.01ಕ್ಕೆ ನ್ಯಾಮತಿ ಪಟ್ಟಣದ
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ. ಸದಸ್ಯರಿಗೆ
ಸಲ್ಲಿಸುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.
ಮ.04ಕ್ಕೆ ನ್ಯಾಮತಿ ಎ.ಪಿ.ಎಂ.ಸಿ. ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ
ನಡೆಸುವರು. ಸ.05.15ಕ್ಕೆ ಹೊನ್ನಾಳಿಗೆ ತೆರಳಿ, ಸಾರ್ವಜನಿಕ
ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ
ಮಾಡುವರು.
ಫೆ. 01 ರಂದು ಬೆಳಿಗ್ಗೆ ಹೊನ್ನಾಳಿಯಿಂದ ಹೊರಟು ಬೆ.10.45ಕ್ಕೆ
ದಿಡಗೂರು ಕೃಷ್ಣಪ್ಪ ನಗರದಲ್ಲಿ ಶಾಲಾ ಕಟ್ಟಡ ದುರಸ್ಥಿ
ಕಾಮಗಾರಿ ಉದ್ಘಾಟನೆ ನೆರವೇರಿಸುವರು. ಬೆ.11.15ಕ್ಕೆ ದಿಡಗೂರು
ಗ್ರಾಮದಲ್ಲಿ ಶಾಲಾ ಕಟ್ಟಡ ದುರಸ್ಥಿ ಕಾಮಗಾರಿ ಉದ್ಘಾಟನೆ
ನೆರವೇರಿಸುವರು. ಬೆ.11.45ಕ್ಕೆ ಹರಳಹಳ್ಳಿ ಗ್ರಾಮದಲ್ಲಿ ಶಾಲಾ
ಕಟ್ಟಡ ದುರಸ್ಥಿ ಮತ್ತು ಸಿ.ಸಿ. ರಸ್ತೆ ಕಾಮಗಾರಿ ಉದ್ಘಾಟನೆ
ನೆರವೇರಿಸುವರು. ಮ.12.15ಕ್ಕೆ ಗೋವಿನಕೋವಿ ಗ್ರಾಮದಲ್ಲಿ ಶಾಲಾ
ಕಟ್ಟಡ ದುರಸ್ಥಿ ಮತ್ತು ಅಂಗನವಾಡಿ ಕಟ್ಟಡ ಉದ್ಘಾಟನೆ
ನೆರವೇರಿಸುವರು. ಮ.12.45ಕ್ಕೆ ಕುರುವ ಗ್ರಾಮದ ಪರಿಶಿಷ್ಟ
ಸಮುದಾಯದ ಕಾಲೋನಿಯಲ್ಲಿ ಸಿ.ಸಿ. ರಸ್ತೆ ಉದ್ಘಾಟನೆ
ನೆರವೇರಿಸುವರು. ಮ.01.15ಕ್ಕೆ ಕುರುವ ತಾಂಡಾದಲ್ಲಿ
ಗ್ರಂಥಾಲಯ ಕಟ್ಟಡ ಉದ್ಘಾಟನೆ ನೆರವೇರಿಸುವರು. ಮ.01.45ಕ್ಕೆ
ದೊಡ್ಡೇರಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿಯ
ಶಂಕುಸ್ಥಾಪನೆ ನೆರವೇರಿಸುವರು. ಮ.02.15ಕ್ಕೆ ಕೆಂಗಟ್ಟೆ
ತಾಂಡಾದಲ್ಲಿ ಗ್ರಂಥಾಲಯ ಉದ್ಘಾಟನೆ ನೆರವೇರಿಸುವರು. 02.45ಕ್ಕೆ
ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಉದ್ಘಾಟನೆ
ನೆರವೇರಿಸುವರು. ಮ.03.15ಕ್ಕೆ ಬಸವನಹಳ್ಳಿ ಗ್ರಾಮದ ಕೆರೆ
ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡುವುದು. ಸ.05ಕ್ಕೆ
ಹೊನ್ನಾಳಿಗೆ ತೆರಳಿ ಸಾರ್ವಜನಿಕ ಕುಂದು ಕೊರತೆಗಳ
ಅಹ್ವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ ಮಾಡುವರು ಎಂದು ವಿಶೇಷ
ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.