ಹೊನ್ನಾಳಿ-ಜ;-30- ಪಟ್ಟಣದ ದುರ್ಗಿಗುಡಿ ನಾಲ್ಕನೇ ವಾರ್ಡಿನಲ್ಲಿ ದುರ್ಗಿಗುಡಿ ದುರ್ಗಮ್ಮ ದೇವಸ್ಥಾನದ ಹತ್ತಿರ ಮಳಿಗೆಯಲ್ಲಿ ಧರ್ಮಸ್ಥಳ ಸಂಘದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಡಿಜಿಟಲ್ ಸರ್ವಿಸ್ ಸೆಂಟರ್ 32ನೇ ಕಾಮನ್ ಸೇವಾ ಕೇಂದ್ರವನ್ನ ಪುರಸಭೆಯ ನಾಲ್ಕನೇ ವಾರ್ಡಿನ ಸದಸ್ಯರಾದ ರಾಜೇಂದ್ರ್ ಎನ್ ರವರು ಟೇಪ್ ಕಟ್ ಮಾಡುವುದುರ ಮುಖೇನ ಚಾಲನೆ ಕೊಡಲಾಯಿತು .
ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ ಅವರು ಮಾತನಾಡಿ. ಈ ಡಿಜಿಟಲ್ ಕಾಮನ್ ಸರ್ವಿಸ್ ಸೆಂಟರ್ ಗೆ ಸಾರ್ವಜನಿಕರು ಬಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿ ಸೇವೆಗಳ ಅನುಕೂಲವನ್ನು ಇಲ್ಲಿ ಪಡೆಯಬಹುದೆಂದು ತಿಳಿಸಿದರು .
ಉಪಸ್ಥಿತಿಯಲ್ಲಿ ಪುರಸಭೆ ಸದಸ್ಯರಾದ ರಾಜೇಂದ್ರ ಎನ್ ತಾಲೂಕು ಯೋಜನಾಧಿಕಾರಿ ಬಸವರಾಜ್ ಅಂಗಡಿ .ಕತೆಗಿ ನಾಗರಾಜ್, ಕಲ್ಕೇರಿ ಕುಮಾರ್, ಯೋಜನಾಧಿಕಾರಿ ಬಸವರಾಜ್, ಧರ್ಮಸ್ಥಳ ಸಂಘ ಸಂಸ್ಥೆಯ ಮಹಿಳೆಯರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.