ಹೊನ್ನಾಳಿ : ನೇರಲಗುಂಡಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಕೆರೆ ನಿರ್ಮಾಣ ಮಾಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲಾ, ಒಂದು ವೇಳೆ ಅವ್ಯವಹಾರ ನಡೆದಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿಯೊಂದುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ ಐವತ್ತು ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನ ಬಳಸಿಕೊಂಡು ನನ್ನ ಜಮೀನಿಗೆ ಮಣ್ಣು ಒಡೆಸಿಕೊಂಡಿದ್ದೇನೆಂದು ಮಾಜಿ ಶಾಸಕ ಶಾಂತನಗೌಡ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಎಂದ ರೇಣುಕಾಚಾರ್ಯ ಗ್ರಾಮಸ್ಥರ ಆಪೇಕ್ಷೆಯ ಮೇರೆಗೆ ನನ್ನ ಸ್ವತಃ ಖರ್ಚಿನಲ್ಲಿ ಮಣ್ಣನ್ನು ನನ್ನ ಜಮೀನಿಗೆ ಒಡೆದುಕೊಂಡಿದ್ದೇನೆ, ಒಂದು ವೇಳೆ ಕೆರೆ ಕಾಮಗಾರಿಯಲ್ಲಿ ಒಂದು ಪೈಸೆ ಅವ್ಯವಹಾರವಾಗಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿಯೊಂದುವುದಾಗಿ ಶಾಸಕರು ಹೇಳಿದರು.
ಕೆರೆ ವಿಚಾರವಾಗಿ ಮಾಜಿ ಶಾಸಕರು ಏನೇ ಆರೋಪ ಮಾಡಿದರೂ, ನಾನು ಈ ವೆರೆಗೆ ಪ್ರತಿಕ್ರಿಯೇ ನೀಡಿರಲಿಲ್ಲಾ, ಆದರೇ ಇಂದು ನೇರಗುಂಡಿ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಹಾಗೂ ಇದೇ ಕೆರೆಯ ವಿಚಾರವಾಗಿ ಮಾಜಿ ಶಾಸಕರು ಆರೋಪ ಮಾಡಿದ್ದು, ಇದನ್ನು ಗ್ರಾಮಸ್ಥರು ಹಾಗೂ ಕ್ಷೇತ್ರ ಜನರ ತೀರ್ಮಾನಕ್ಕೆ ಬಿಟ್ಟಿದ್ದೇನೆಂದರು.
ಕೆರೆ ನಿರ್ಮಾಣ ಗ್ರಾಮಸ್ಥರ ಆಪೇಕ್ಷೆಯಾಗಿದ್ದು ಅವರ ಅನುಕೂಲಕ್ಕಾಗಿ ಕೆರೆ ನಿರ್ಮಾಣ ಮಾಡಲಾಗಿದೆ ಎಂದ ಶಾಕಸರು ಕೆರೆಯ ಬಗ್ಗೆ ಮಾಜಿ ಶಾಸಕರು ಮಾಡಿದ ಆರೋಪದ ಸತ್ಯಾ ಸತ್ಯತೆ ಗ್ರಾಮಸ್ಥರಿಗೆ ಬಿಟ್ಟಿದ್ದೇನೆ ಎಂದರು.
4 ಎಕೆರೆ 20 ಗುಂಟೆ ವಿಸ್ತೀರ್ಣದ ಕೆರೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬೆನಕನಹಳ್ಳಿ ಏತ ನೀರಾವರಿ ಮೂಲಕ ಕೆರೆ ತುಂಬಿಸಲಾಗುವುದು ಎಂದರು.
ಕೆರೆ ತುಂಬಿದರೆ ಸುತ್ತಮುತ್ತಲಿನ ಬೋರ್‍ಗಳಲ್ಲಿ ಅಂತರ್ ಜಲದ ಮಟ್ಟವೂ ಹೆಚ್ಚಲಿದ್ದು ರೈತರು ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗಲಿದೆ ಎಂದ ಶಾಸಕರು, ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ ಎಂದರು.
ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಗುದ್ದಲಿಪೂಜೆ : ತಾಲೂಕಿನ ನೇರಲಗುಂಡಿ ತಾಂಡದ ಸೇವಾಲಾಲ್ ಸಮುದಾಯದ ಮುಂಭಾಗ 2.50 ಲಕ್ಷ ರೂಪಾಯಿ ಫೇವರ್ ಬ್ಲಾಕ್ ಉದ್ಘಾಟಿಸಿದ ಶಾಸಕರು, ನೆಲವೊನ್ನೆ ತಾಂಡದಲ್ಲಿ 14 ಲಕ್ಷ ಮೌಲ್ಯದ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿ, ಐದು ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ನೆಲವೊನ್ನೆ ಗ್ರಾಮದಲ್ಲಿ 11.45 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ, ಐದು ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿದರು. ನೆಲವೊನ್ನೆ ಆಂದ್ರಕ್ಯಾಂಪ್‍ನಲ್ಲಿ 18 ಲಕ್ಷ ಮೌಲ್ಯದ ಜಲಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿದ ಶಾಸಕರು, 16 ಲಕ್ಷ ಮೌಲ್ಯದ ನೂತನ ಅಂಗನವಾಡಿ ಉದ್ಘಾಟಿಸಿದರು. ಕುಂಬಳೂರು ಗ್ರಾಮದಲ್ಲಿ 14 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ ಹಾಗೂ 2.50 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕರು, 1.29 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮಸ್ಥರಲ್ಲಿ ಕೊರೊನಾ ಜಾಗೃತಿ : ಕೊರೊನಾ ಮೂರನೇ ಅಲೆ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು ಜನರು ಕೊರೋನಾ ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದ ಶಾಸಕರು, ಪ್ರತಿಯೊಬ್ಬರೂ ಸರ್ಕಾರದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಕರ್ನಾಟಕ ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಗ್ರಾ.ಪಂ ಸದಸ್ಯರಾದ ಹನುಮಂತಪ್ಪ, ಮುಖಂಡರಾದ ಸೋಮಣ್ಣ, ಕುಬೇರ, ಶ್ರೀಕಂಠಪ್ಪ, ಶಾಂತರಾಜಪ್ಪ,ಕುಮಾರ್,ಸಂತೋಷ್, ತೇರಪ್ಪ, ರುದ್ರೇಶ್ ಎಚ್.ಜಿ, ಚಂದ್ರಪ್ಪ ಸೇರದಿಂತೆ ಮತ್ತೀತತರಿದ್ದರು.