ದಾವಣಗೆರೆ ಜ. 31
ರಾಜ್ಯ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಫೆ. 02 ರಂದು
ದಾವಣಗೆರೆ ಜಿಲ್ಲೆ ಚನ್ನಗಿರಿಗೆ ಆಗಮಿಸುವರು. ಸಚಿವರು ಅಂದು
ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ಸಂಜೆ 6.30 ಗಂಟೆಗೆ
ಚನ್ನಗಿರಿಗೆ ಆಗಮಿಸುವರು, ಬಳಿಕ ಚನ್ನಮ್ಮಾಜಿ ಸಮುದಾಯ
ಭವನದಲ್ಲಿ ಜರುಗುವ ವಿವಾಹದ ಆರತಕ್ಷತೆ
ಸಮಾರಂಭವೊಂದರಲ್ಲಿ ಭಾಗವಹಿಸುವರು. ರಾತ್ರಿ 9 ಗಂಟೆಗೆ
ದಾವಣಗೆರೆಗೆ ಆಗಮಿಸಿ, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.
ಸಚಿವರು ಫೆ. 03 ರಂದು ಬೆಳಿಗ್ಗೆ 7-30 ಗಂಟೆಗೆ ಮಂಡ್ಯ ಜಿಲ್ಲೆಗೆ
ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷಾಧಿಕಾರಿ ತಿಳಿಸಿದ್ದಾರೆ.