ಹೊನ್ನಾಳಿ : ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಆರ್ಥಿಕ,ರಾಜಕೀಯ,ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದು, ಮಳೆಯ ಪಾತ್ರ ದೊಡ್ಡದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೋನಾಯ್ಕನಹಳ್ಳಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲಾ ಎಂದು ನಿರೂಪಿಸಿದ್ದಾರೆ ಎಂದ ರೇಣುಕಾಚಾರ್ಯ, ಸ್ರ್ತೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ ಎಂದರು.
ತೊಟ್ಟಿಲು ತೂಗುವ ಕೈ ದೇಶವನ್ನ ಹಾಳಿ ಅದರಲ್ಲಿ ಯಶಸ್ವಿಯಾಗಿದ್ದರು ಎಂದ ರೇಣುಕಾಚಾರ್ಯ ದೇಶದಲ್ಲಿ ಸ್ತ್ರೀಯರಿಗೆ ದೊಡ್ಡ ಸ್ಥಾನವಿದೆ ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು, ಪುರುಷರಿಗಿಂತ ನಾವೇನು ಕಡಿಮೆ ಇಲ್ಲಾ ಎಂಬುವಂತೆ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ನಾಲ್ಕು ಗೋಡೆಗಳ ಮದ್ಯೆ ಇರುತ್ತಿದ್ದ ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೂಡ ಮಹಿಳೆರ ಪರವಾಗಿದ್ದು ಮಹಿಳೆಯರ ಸಬಲೀಕರಣಕ್ಕೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 64 ಸಂಘಗಗಳಿಗೆ ತಲಾ ಒಂದು ಲಕ್ಷ ಹಣ ನೀಡಿದ್ದಾರೆ ಎಂದರು.
ತಾಯಿಯನ್ನು ನೆನೆಪು ಮಾಡಿಕೊಂಡ ರೇಣುಕಾಚಾರ್ಯ : ಕೋನಾಯ್ಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಾಯಿಯನ್ನು ನೆನೆದು ಬಾವುಕರಾದರು. ದೇಶದಲ್ಲಿ ತಾಯಿಗೆ ಮೊದಲ ಸ್ಥಾನವಿದೆ, ನನ್ನ ತಾಯಿ ನಾನು ಶಾಸಕನಾಗುತ್ತೇನೆಂದು ಹೇಳಿದ್ದಳು, ಆಕೆ ಹೇಳಿದಂತೆ ನಾನು ಶಾಸಕನಾಗಿದ್ದೇನೆ ಎಂದ ರೇಣುಕಾಚಾರ್ಯ ಸಾಮಾನ್ಯ ಶಿಕ್ಷಕನ ಮಗನನ್ನು ಮೂರು ಬಾರೀ ಶಾಸಕನನ್ನಾಗಿ ಮಾಡಿದ್ದು ಅವರಿಗೆ ನಾನು ಚಿರಋಣಿ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರಾದ ಬಸಮ್ಮ, ಉಪಾದ್ಯಕ್ಷರಾಧ ಶೃತಿ ಮಂಜುನಾಥ್, ಸದಸ್ಯರಾದ ಸುಭಾಷ್, ನಾಗರಾಜ್ ನಾಯ್ಕ, ಭಾರತೀ ಬಾಯಿ, ಎಲ್ ಮಂಜಪ್ಪ, ರಫೀಕ್ ಸಾಬ್, ಹನುಮಂತಪ್ಪ ಗೌಡ್ರು, ಮಂಜುಳಮ್ಮ, ಸತ್ತಿಬಾಯಿ, ರಂಜಿತಾ ಸೇರಿದಂತೆ ಗ್ರಾಮ ಮುಖಂಡರಾದ ಮಂಜನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.