ಹೊನ್ನಾಳಿ,2:ಇತ್ತಿಚೆಗೆ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆ ಮೀರಿದ ಜನತೆಯ ತೆರಿಗೆ ಹಣ ಸಂಗ್ರವಾದರೆ ಜನರ ಸಮಾನ್ಯ ನಿರೀಕ್ಷಿತ ಕೆಲಸಗಳು ನಡೆಯುತ್ತಿಲ್ಲ ಎಂಬುದಾಗಿ ಆಮ್‍ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಎಲ್.ರಂಗನಾಥ್ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಹಾಗೂ ಸ್ಪಷ್ಟ ಆಡಳಿತದ ಮೂಲ ಮಂತ್ರದೇಯ ಹೊಂದಿದೆ ಎಂದರು. ದೆಹಲಿ ಹಾಗೂ ರಾಜ್ಯಗಳಲ್ಲಿ ಆಮ್‍ಆದ್ಮಿ ಪಾರ್ಟಿಯು ಜನಪರ ಆಡಳಿತದಂತೆ ಕರ್ನಾಟಕದಲ್ಲಿ ಆಡಳಿತ ನಡೆಸಲು ಆಮ್‍ಆದ್ಮಿ ಪಕ್ಷವನ್ನು ಬಲಪಡಿಸಲಾಗುವುದು ಎಂದರು.ದೆಹಲಿಯಲ್ಲಿ ಎಸ್‍ಎಸ್‍ಎಲ್‍ಸಿ ಸರ್ಕಾರಿ ಶಾಲೆಗ¼ ಶಿಕ್ಷಣದ ಪದ್ದತಿ ಶೇ.97 ಪಲಿತಾಂಶ ಬಂದರೆ ಖಾಸಗಿ ಸಂಸ್ಥೆಗಳಲ್ಲಿ 93 ರಷ್ಟು ಆಗಿದೆ. ವಿದೇಶದಲ್ಲಿ ತರಬೇತಿಯೊಂದಿಗೆ ಶಿಕ್ಷಕರ ಆಯ್ಕೆಮಾಡಲಾಗುತ್ತದೆ.ಇಂತಹ ಅನೇಕ ಶಿಕ್ಷಣ ಕ್ರಾಂತಿ ಮುಂದುವರೆಸಿದ್ದೇವೆ ಎಂದರು.
ಹೊನ್ನಾಳಿ ತಾಲೂಕು ಕಾರ್ಯದ್ಯಕ್ಷ ಗುರುಪಾಧಯ್ಯಮಠದ ಮಾತನಾಡಿ ಆಮ್‍ಆದ್ಮಿ ಪಕ್ಷದ ಪ್ರಮುಖ ಪ್ರಣಾಳಿಕೆಯಲ್ಲಿ ಜನರ ಆರೋಗ್ಯ,ಶಿಕ್ಷಣ ಮಟ್ಟ ಸುದಾರಣೆ,ನೈರ್ಮಲ್ಯ ವಿದ್ಯುತ್ ಸುದಾರಣೆ ಮಾಡಿದರೆ ಜನಸಾಮನ್ಯರು ಮೆಚ್ಚುತ್ತಾರೆ, ದೆಹಲಿಯ ಹಿಂದಿನ ಮುಖ್ಯಮಂತ್ರಿ ಶೀಲಾದಿಕ್ಷೀತ್ ಅವರು ಮಾಡಿದ ಸಾಲವನ್ನು ತಿರಿಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರು ಸಾಲ ಇಲ್ಲದ ಸಕಾರ ಎಂದು ದೇಶಕ್ಕೆ ತೋರಿಸಿದ್ದಾರೆ ಎಂದರು.
ಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ, ಹರಿಹರದ ವೈ.ಎನ್.ಮಲ್ಲಿನಾಥ್ ಸೈಯದ್ ಯಾಸೂಫ್,ಕೂಲಂಬಿ ಇಂದೂಧರ,ಕತ್ತಿಗೆ ನಾಗರಾಜ್,ಗುರುಪಾದಯ್ಯಮಠದ,ಶ್ರೀನಿವಾಸ್,ಸಾಸ್ವೆಹಳ್ಳಿ ನರಂಹಮಪ್ಪ,ಮಂಜುನಾಥ್,ಸುನಿಲ್,ಬಸವರಾಜ್,ಹನುಮನಹಳ್ಳಿ ಮುಂಜುನಾಥ್ ಇತರರು ಇದ್ದರು.