ಹೊನ್ನಾಳಿ : ನಾನು ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಿಲ್ಲಾ, ದಲಿತ ಸಮಾಜದ ಯಾವುದೇ ಸವಲತ್ತನ್ನು ನಾನು ಪಡೆದಿಲ್ಲಾ, ನಾನು ತಪ್ಪು ಮಾಡಿದರೇ ನೇಣಿಗೆ ಏರಲು ಕೂಡ ಸಿದ್ದ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 131 ನೇ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಯನ್ನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರು ಮೂರು ಬಾರಿ ಶಾಸಕನ್ನಾಗಿ ಮಾಡಿದ್ದು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು. ನಾನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಮನೆ ಮಗ, ಸೇವಕನಾಗಿ ನಾನು ಋಣ ತೀರಿಸುತ್ತೇನೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಂಡನ್ ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಿಸುವುದರ ಜೊತೆಗೆ, ದೆಹಲಿಯಲ್ಲಿ ನೂರು ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅವರ ಮೂಜಿಯಂ ನಿರ್ಮಾಣ ನಿರ್ಮಾಣ ಮಾಡಿಸಿದ್ದಾರೆ ಎಂದರೇ ಅದೇ ರೀತಿ ರಾಜ್ಯ ಸರ್ಕಾರ ಸಮಾಜವು ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದೆ ಎಂದರು.
ಮಾಜಿ ಶಾಸಕರ ವಿರುದ್ದ ವಾಗ್ದಾಳಿ : ಇದೀಗ ಚುನಾವಣೆ ಬಂತೆದು ವೇಷ ಹಾಕಿಕೊಂಡ ಇದು ನನ್ನ ಕೊನೆ ಚುನಾವಣೆ ಎಂದು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಜಿ ಶಾಸಕರು ಅವರ ಹಿಂಬಾಲಕರ ಮೂಲಕ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಚುನಾವಣೆ ಬಂದಾಗ ನೀವು ಮಾಲೀಕರಾಗುತ್ತೀರಿ ನಿಮ್ಮ ಕಾಲಿಗೆ ಬಿದ್ದು, ಚುನಾವಣೆ ಮುಗಿದ ಮೇಲೆ ಕಾಣದಂತೆ ಮಾಯವಾಗುತ್ತಾರೆ ಎಂದರು.
ನಾನು ಮೀಸಲಾತಿ ಕಬಳಿಸಿದ್ದೇನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ಹಿಂಬಾಲಿಕ ಮೂಲಕ ಪ್ರತಿಭಟನೆ ಮಾಡಿಸಿದ್ದು ಪ್ರತಿಭಟನೆ ಪ್ಲಾಪ್ ಆಯಿತು ಎಂದ ರೇಣುಕಾಚಾರ್ಯ ಅವರೆಲ್ಲಾ ಮಾಜಿ ಶಾಸಕರ ಡ್ರಾಮ ಕಂಪನಿಯವರು ಎಂದರು.
ಮಾಜಿ ಶಾಸಕರಿಗೆ ತಾಕತ್ ಇದ್ದರೇ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿ ಎಂದು ಸವಾಲು ಹಾಕಿದ ರೇಣುಕಾಚಾರ್ಯ ದಲಿತರು ಮನೆಗೆ ಬಂದರೆ ಅವರನ್ನು ಮನೆಯ ಒಳಗೆ ಬಿಡದೇ ರೈಸ್ ಮಿಲ್‍ನಲ್ಲಿ ನಿಲ್ಲಿಸುತ್ತೀರಿ ಎಂದರು.
ನಾನು ಜಾತ್ಯಾತೀತ ವ್ಯಕ್ತಿ ನಾನು ಒಂದು ಜಾತಿಗೆ ಸೀಮಿತವಾಗಿಲ್ಲಾ ಎಂದ ರೇಣುಕಾಚಾರ್ಯ ಏಪ್ರಿಲ್ 18 ರಂದು ಬಿಜೆಪಿ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ ಎಸ್‍ಸಿಎಸ್ಟಿ ಸಮಾವೇಶ ಹಮ್ಮಿಕೊಂಡಿದ್ದು ಹತ್ತು ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಜನರ ನಮ್ಮ ಮೇಲೆ ಇಟ್ಟಿರುವ ಪ್ರೀತಿ ತೊರಿಸುತ್ತದೇ ಎಂದರಲ್ಲದೇ ನಾನು ಹುಲಿಯೂ ಅಲ್ಲಾ ಸಿಂಹನೂ ಅಲ್ಲಾ ನಾನು ನಿಮ್ಮ ಸಹೋದರ ಅವಳಿ ತಾಲೂಕಿನ ಸೇವಕ ಎಂದರು.
ನಾನು ತಪ್ಪು ಮಾಡಿದರೇ ಕಪ್ಪುಬಟ್ಟೆ ಪ್ರದರ್ಶಿಸಿ : ನಾನು ಮೀಸಲಾತಿಯನ್ನು ದುರುಪಯೋಗ ಮಾಡಿ ಕೊಂಡಿದ್ದರೇ ನನಗೆ ಕಪ್ಪುಬಟ್ಟೆ ಪ್ರದರ್ಶಿಸಿ, ಇಲ್ಲಾ ನನ್ನನ್ನು ಕಟ್ಟಿಹಾಕಿ ನಾನು ಇದಕ್ಕೆ ಬೇಡ ಎನ್ನುವುದಿಲ್ಲಾ ಎಂದ ರೇಣುಕಾಚಾರ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಚ್.ಆಂಜನೇಯ ಹಾಗೂ ಸಿದ್ದರಾಮಯ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಚೇತನ್ ಹಿರೇಮಠ್ ಎಂಬುವವರಿಗೆ ಹಣ ನೀಡಿದ್ದರು. ಆದರೇ ಇದರಲ್ಲಿ ವಿನಾಃ ಕಾರಣ ನನ್ನ ಮಗಳ ಹೆಸರನ್ನು ಎಳೆ ತರುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಿ ಆದರೇ ನನ್ನ ಮಗಳ ಹೆಸರನ್ನು ವಿನಾಃ ಕಾರಣ ಇದರಲ್ಲಿ ಎಳೆ ತರಬೇಡಿ ಎಂದರು.
ಜನಮೆಚ್ಚಿದ ನಾಯಕ : ಕೋಣನತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡುವಾಗ ಗ್ರಾಮದ ಆಂಜನೆಪ್ಪ ಎಂಬುವವರು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಯಾವುದೇ ಜಾತಿಯವರು ಸತ್ತರೂ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಕೈಲಾದಷ್ಟು ಸಹಾಯ ಮಾಡುವ ಕರುಣಾಮಯಿ ನೀವು, ನೀವು ಜಾತ್ಯಾತೀತ ವ್ಯಕ್ತಿ ನಿಮ್ಮ ಬಗ್ಗೆ ಗೌರವವಿದೆ ನಾವೆಲ್ಲಾ ನಿಮ್ಮಪರವಾಗಿ ಇದ್ದೇವೆ ಎಂದರು.
ಜಯಮ್ಮ,ದಾಳೆಮ್ಮ ಮಾತನಾಡಿ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ದೊಡ್ಡಗುಣ ನಿಮ್ಮದು ಚುನಾವಣೆಗೆ ನಾವು ನಿಮ್ಮ ಪರವಾಗಿ ಇರುತ್ತೇವೆ ನಿಮ್ಮನ್ನು ಮತ್ತೆ ಗೆಲ್ಲಿಸುತ್ತೇವೆ ಎಂದರು.