ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದಲ್ಲಿ ಬಸವಜಯಂತಿಯ ಅಂಗವಾಗಿ ಮಂಗಳವಾರ ರಾತ್ರಿ ಕ್ಯಾಸಿನಕೆರೆ ಹಟ್ಟಿ ಹಾಳು ಶಿವ ಶರಣ ಬಸವ ಸಮಿತಿ ಹಾಗೂ ಬಸವ ಸಮಿತಿ ಯುವಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ರಾತ್ರಿ ವಚನಾಮೃತ ಕಾರ್ಯಕ್ರಮ ನಡೆಯಿತು.
ವಚನಾಮೃತ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೆಪಿ ದೇವೇಂದ್ರಯ್ಯ ನೆರವೇರಿಸಿ ಮಾತನಾಡಿ ಕಾಯಕವೇ ಕೈಲಾಸದ ಕಲ್ಪನೆ ಬಸವಣ್ಣ. ಇಂತಹ ಕಾಯಕವೇ ಕೈಲಾಸ ದ ಕಲ್ಪನೆ ನೀಡಿದ ಬಸವಣ್ಣನವರಿಗೆ ನಾವು ತಲೆಬಾಗಬೇಕು. ಬಸವಣ್ಣನವರ ಅಂದಿನ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟ್ ಎಂದ ಅವರು 12ನೇ ಶತಮಾನದ ಶಿವಶರಣರ ವಚನಗಳು ಸಂಪತ್ತುಗಳು. ಇಂತಹ ಬಸವಣ್ಣರ ವಚನಗಳನ್ನು ಮನೆಯಲ್ಲಿ ಹಿರಿಯರು ನಿತ್ಯವೂ ಹೇಳುತ್ತಾ ಹೋದರೆ ಮಕ್ಕಳು ತಾವಾಗಿಯೇ ಕಲಿಯುತ್ತಾರೆ ಎಂದರು.
ಸಾಸ್ವೆಹಳ್ಳಿ ಎಡಿವಿಎಸ್ ಕಾಲೇಜಿನ ಹಿರಿಯ ಉಪನ್ಯಾಸಕಿ ಬಸವಣ್ಣನವರ ಇತಿಹಾಸ ಕುರಿತು ಮಾತನಾಡಿ ವೇದವನ್ನು ಓದುವವರು ದೊಡ್ಡವರಲ್ಲ ಜನರ ವೇದನೆಯನ್ನು ಅರಿತವರು ದೊಡ್ಡವರು. ಅಂತರಂಗದಲ್ಲಿ ದೇವರನ್ನು ಕಾಣುವ ಬಗೆಯನ್ನು ಬಸವಣ್ಣನವರು ತಿಳಿಸುತ್ತಾರೆ. ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಸವಣ್ಣನವರ ಪರಿಕಲ್ಪನೆ ಇಂದು ಹೆಣ್ಣುಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯವಾಗಿದೆ. ಹೀಗಾಗಿ ವಿಶ್ವಗುರು ಬಸವಣ್ಣನವರು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಯುವ ಪೀಳಿಗೆಗೆ ಸ್ಪೂರ್ತಿದಾಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣ ಬಸವ ಸಮಿತಿ ಅಧ್ಯಕ್ಷ ವೀರೇಶ್ ವಹಿಸಿದ್ದರು. ಗ್ರಾ ಪಂ ಅಧ್ಯಕ್ಷ ಬಿ ಎಂ ಕುಮಾರ್,ಜೀವವಿಮಾ ಕ್ಲಬ್ ಮೆಂಬರ್ ಪರಮೇಶ್ವರಪ್ಪ ಉಪನ್ಯಾಸಕ ಸಂಜು, ಕಲಾವಿದ ಹಾಲೇಶ ಚಾರ್, ಗ್ರಂಥಾಲಯದ ಮೇಲ್ವಿಚಾರಕ ಎಂಸಿ ಬಸವರಾಜು, ರುದ್ರೇಶ್ ಮಾವಿನಹಳ್ಳಿ, ಬಾಳೆಕಾಯಿ ದೇವೇಂದ್ರಪ್ಪ, ಇ ಕೆ ಪಾಟೀಲ್ ಶಿವ ಶರಣ ಬಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.