ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಜಗಳೂರು, ಹರಿಹರ
ಹಾಗೂ ನ್ಯಾಮತಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ
ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು
ಉಪಚುನಾವಣೆಯನ್ನು ನಡೆÀಸಲು ಚುನಾವಣಾ
ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೊರಡಿಸಿರುತ್ತಾರೆ.
ಚನ್ನಗಿರಿ ತಾಲ್ಲೂಕು, ಗ್ರಾಮ ಪಂಚಾಯಿತಿ -ಚಿರಡೋಣಿ, ಕ್ಷೇತ್ರ
ಚಿರಡೋಣಿ-3, (ಹಿಂದುಳಿದ ವರ್ಗ(ಅ) ) –ಹೊಸಕೇರೆ ಗ್ರಾಮ
ಪಂಚಾಯಿತಿ (ಬಸವಾಪಟ್ಟಣ), ಕ್ಷೇತ್ರ ಹೊಸಕೇರೆ(ಬಸವಾಪಟ್ಟಣ)-1,(
ಹಿಂದುಳಿದ ವರ್ಗ(ಅ) (ಮಹಿಳೆ))  ಗ್ರಾಮ ಪಂಚಾಯಿತಿ-ಗೊಪ್ಪೇನಹಳ್ಳಿ,
ಕ್ಷೇತ್ರ ಪೆನ್ನಸಮುದ್ರ-3, (ಅನುಸೂಚಿತ ಜಾತಿ (ಮಹಿಳೆ))
ದಾವಣಗೆರೆ ತಾಲ್ಲೂಕು, ಕಾಡಜ್ಜಿ ಗ್ರಾಪಂ, ಕ್ಷೇತ್ರ
ಕಾಡಜ್ಜಿ,(ಅನುಸೂಚಿತ ಜಾತಿ) ಕುಕ್ಕುವಾಡ ಗ್ರಾ.ಪಂ, ಕ್ಷೇತ್ರ
ಕುಕ್ಕುವಾಡ (ಹಿಂದುಳಿದ ವರ್ಗ ಬ)
ಜಗಳೂರು ತಾಲ್ಲೂಕು, ಬಿದರಕೆರೆ ಗ್ರಾಪಂ, ಕ್ಷೇತ್ರ
ಬಿದರಕೆರೆ-1,(ಅನುಸೂಚಿತ ಜಾತಿ) ಕ್ಷೇತ್ರ ರಸ್ತೆಮಾಕುಂಟೆ(ಮ)
ಗೊಲ್ಲರಹಟ್ಟಿ(ಸಾಮಾನ್ಯ)
ಹರಿಹರ ತಾಲ್ಲೂಕು, ಎಳೆಹೊಳೆ ಗ್ರಾಪಂ, ಕ್ಷೇತ್ರ
ಮಳಲಹಳ್ಳಿ,(ಅನುಸೂಚಿತ ಪಂಗಡ)
ನ್ಯಾಮತಿ ತಾಲ್ಲೂಕು, ಗುಡ್ಡೇಹಳ್ಳಿ ಗ್ರಾಪಂ, ಕ್ಷೇತ್ರ
ಜೀನಹಳ್ಳಿ-1,(ಅನುಸೂಚಿತ ಜಾತಿ), (ಸಾಮಾನ್ಯ(ಮಹಿಳೆ)), ಕ್ಷೇತ್ರ
ಜೀನಹಳ್ಳಿ-2(ಅನುಸೂಚಿತ ಪಂಗಡ(ಮಹಿಳೆ)), (ಸಾಮಾನ್ಯ), (ಸಾಮಾನ್ಯ
ಮಹಿಳೆ)
ಮೇ.05 ರಂದು ಚುನಾವಣಾ ಅಧಿಸೂಚನೆಯನ್ನು
ಹೊರಡಿಸಲಾಗುವುದು. ಮೇ.10 ರಂದು ನಾಮಪತ್ರಗಳನ್ನು
ಸಲ್ಲಿಸಲು ಕೊನೆಯ ದಿನ. ಮೇ.11 ರಂದು ನಾಮಪತ್ರಗಳನ್ನು
ಪರಿಶೀಲಿಸಲು ಕೊನೆಯ ದಿನ. ಮೇ.13 ರಂದು
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನ.
ಮೇ.20 ರಂದು ಮತದಾನ ಅಗತ್ಯವಿದ್ದರೆ, ಬೆಳಿಗ್ಗೆ 7 ರಿಂದ ಸಂಜೆ 5
ಗಂಟೆಯವರೆಗೆ ಮತದಾನ ನಡೆಸಲಾಗುವುದು.. ಮೇ.22
ರಂದು ಚುನಾವಣೆಯನ್ನು ಮುಕ್ತಾಯಗೊಳಿಸುವ
ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *