ನ್ಯಾಮತಿ : ಪಟ್ಟಣದ ಕುಂಬಾರಬೀದಿ ರಸ್ತೆ ಹಾಗೂ ಆಂಜನೇಯ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸದೇ ಇದ್ದರೇ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಬುಧುವಾರ ಪಟ್ಟಣದ ಕುಂಬಾರಬೀದಿ ರಸ್ತೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜನರು ನನ್ನ ಮಾತಿಗೆ ಬೆಲೆಕೊಟ್ಟು ರಸ್ತೆ ಅಗಲೀಕರಣ ಮಾಡಲು ಅವರೇ ಮನೆಗಳನ್ನು ತೆರವು ಮಾಡಿಕೊಟ್ಟಿದ್ದಾರೆ. ಆದರೇ ಗುತ್ತಿನದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ನಾನು ಜನರಿಗೆ ಹೇಗೆ ಮುಖ ತೋರಿಸಲಿ ಎಂದು ಬೇಸರ ವ್ಯಕ್ತ ಪಡಿಸಿದರು.
ಇದೀಗ ಮಳೆಗಾಲ ಬೇರೆ ಆರಂಭವಾಗಿದ್ದು ಹಬ್ಬ ಹರಿದಿನಗಳು ಬರುತ್ತಿದ್ದು ಜನರು ಹಬ್ಬವನ್ನು ಹೇಗೆ ಮಾಡುತ್ತಾರೆ ಎಂದ ರೇಣುಕಾಚಾರ್ಯ ಅಧಿಕಾರಿಗಳ ನಿರ್ಲಕ್ಷದಿಂದ ನಾನು ಜನರ ಬಳಿ ಚೀಮಾರಿ ಹಾಕಿಸಿಕೊಳ್ಳ ಬೇಕಾ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.
ಆಂಜನೇಯ ದೇವಸ್ಥಾನದ ರಸ್ತೆ ಹಾಗೂ ಕುಂಬಾರ್ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ವಾಲ್ಮೀಕಿ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಗಲೀಕರಣ ಕಾಮಗಾರಿ ಪೆಂಡಿಂಗ್ ಇದೇ ಎಂದ ರೇಣುಕಾಚಾರ್ಯ ಕಾಮಗಾರಿ ನಿಧಾನಗತಿಯಿಂದ ಮಾಡುತ್ತಿದ್ದು ನಾನು ಜನರಿಗೆ ಹೇಗೆ ಉತ್ತರ ನೀಡಲಿ ಎಂದರು.
25 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಮತಿ ಪಟ್ಟಣದ ಕುಂಬಾರ ಬೀದಿ, ಆಂಜನೇಯ ದೇವಸ್ಥಾನದ ರಸ್ತೆ,ವಾಲ್ಮೀಕಿ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಅಲೀಕರಣ ಕಾಮಗಾರಿಯ ಜೊತೆಗೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದೆ.
ನಾನು ಅನುದಾನ ತಂದು ಕೆಲಸ ಹಾಕಿಸಿದರೆ ಸರಿಯಾಗಿ ಕಾಮಗಾರಿಯಾಗುತ್ತಿಲ್ಲಾ ಅಂದರೇ ಏನು ಅರ್ಥ ಕೂಡಲೇ ಗುತ್ತಿಗೆದಾರ ನಿಗಧಿಯ ಸಮಯದ ಒಳಗಾಗೀ ಗುಣಮಟ್ಟದ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಂಡುವಂತೆ ಸೂಚನೆ ನೀಡಿದರು.
ಶನಿವಾರ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸೂಚನೆ : ಸಾರ್ವಜನಿಕರಿಂದ ಸಾಲು ಸಾಲು ದೂರು ಬಂದ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣದ ಕುಂಬಾರ್ ಬೀದಿಗೆ ಭೇಟಿ ನೀಡಿದ ರೇಣುಕಾಚಾರ್ಯ ಅಧಿಕಾರಿಗಳಿಗೆ ಪೋನ್ ಮಾಡಿ ಗುತ್ತಿಗೆದಾರ ಹಾಗೂ ಸಂಬಂಧ ಪಟ್ಟ ಇಲಾಖೆಯ ಎಂಡಿ,ಸಿಇ ಶನಿವಾರ ಬೆಳಗ್ಗೆ 10.30 ಕ್ಕೆ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದರು.
ಒಂದು ವೇಳೆ ಗುತ್ತಿಗೆದಾರ ಸ್ಥಳಕ್ಕೆ ಬಾರದೇ ಇದ್ದರೇ ಆತನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ರೇಣುಕಾಚಾರ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭ ತಹಶೀಲ್ದಾರ್ ರೇಣುಕಾ, ತಾ.ಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಸಿ.ಕೆ.ರವಿಕುಮಾರ್ ಸೇರಿದಂತೆ ಕುಂಬಾರ್ ಬೀದಿಯ ನಿವಾಸಿಗಳು ಹಾಗೂ ಇಲಾಖೆ ಅಧಿಕಾರಿಗಳಿದ್ದರು.