ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ
ರೇಣುಕಾಚಾರ್ಯ ಇವರ ಮೇ ಮಾಹೆಯ-2022ರ
ಮಾಹೆಯಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ
ಕೈಗೊಳ್ಳಲಿದ್ದಾರೆ.
        ಮೇ.06 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು
ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಮೇ.07 ರಂದು ಬೆ.10.30 ಗಂಟೆಗೆ ನ್ಯಾಮತಿ ಪಟ್ಟಣದಲ್ಲಿ ರಸ್ತೆ
ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ನಡೆಸುವರು. ಮ.12ಕ್ಕೆ ನ್ಯಾಮತಿ ಪಟ್ಟಣದ ಕಾಲೇಜು ಹಿಂಭಾಗದ
ರಸ್ತೆ ಕಾಮಗಾರಿ ಉದ್ಘಾಟನೆ
ನೆರವೇರಿಸುವರು. ಮ.12.30ಕ್ಕೆ ಬೆಳಗುತ್ತಿ ಗ್ರಾಮದಲ್ಲಿ
ಬೆಳಗುತ್ತಿ, ಯರಗನಾಳ್, ಗುಡ್ಡೆಹಳ್ಳಿ ಗ್ರಾಮ
ಪಂಚಾಯತಿಗಳ ವ್ಯಾಪ್ತಿಯ ಗ್ರಾಮ ವಾಸ್ತವ್ಯದ ಕುರಿತು
ಪೂರ್ವಭಾವಿ ಸಭೆ ನಡೆಸುವರು. ಮ.1.30ಕ್ಕೆ ಹಿರೇಗೋಣಿಗೆರೆ
ಗ್ರಾಮದಲ್ಲಿ ಹಿರೇಗೋಣಿಗೆರೆ ಮತ್ತು ಬೇಲಿಮಲ್ಲೂರು ಗ್ರಾಮ
ಪಂಚಾಯತಿಗಳ ವ್ಯಾಪ್ತಿಯ ಗ್ರಾಮ ವಾಸ್ತವ್ಯದ ಕುರಿತು
ಪೂರ್ವಭಾವಿ ಸಭೆ ನಡೆಸುವರು. ಮ.03ಕ್ಕೆ ದಾವಣಗೆರೆಯಲ್ಲಿ ಖಾಸಗಿ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ.10.15 ಗಂಟೆಗೆ
ಹೊನ್ನಾಳಿಗೆ ಪ್ರಯಾಣ ಹಾಗೂ ವಾಸ್ತವು ಮಾಡುವರು
ಮೇ.08 ರಂದು ಬೆ.10 ಗಂಟೆಗೆ ಕೊಡಚಗೊಂಡನಹಳ್ಳಿ
ಗ್ರಾಮದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಬೆ.10.30ಕ್ಕೆ ಶ್ರೀವೀರಭದ್ರಸ್ವಾಮಿ ದೇವಸ್ಥಾನದ
ಕಳಸಾರೋಹಣ ಕಾರ್ಯಕ್ರಮ. ಬೆ.11.30ಕ್ಕೆ ಸೋಗಿಲು ಗ್ರಾಮದ
ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.12.30ಕ್ಕೆ ಶಿವಮೊಗ್ಗ
ಜಿಲ್ಲೆಯ ಹುಟ್ಟಿನಹಳ್ಳಿ ಗ್ರಾಮದಲ್ಲಿರುವ ಬಸವೇಶ್ವರ
ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮ.2.30ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ
ಸಮುದಾಯ ಭವನದಲ್ಲಿ ನಡೆಯುವ ಶ್ರೀಕತ್ತಿಗೆ ಚನ್ನಪ್ಪ
ಇವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂ.05
ಕ್ಕೆ ದೊಡ್ಡೇರಿ ಭೂತಪ್ಪ ದೇವಸ್ಥಾನದ ಪ್ರತಿಷ್ಠಾಪನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂ.06.30 ಗಂಟೆಗೆ

ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ
ಆಹ್ವಾಲುಗಳನ್ನು ಸ್ವೀಕರಿಸುವರು. ರಾತ್ರಿ.08 ಕ್ಕೆ ಸೋಗಿಲು
ಗ್ರಾಮದಲ್ಲಿ sಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ರಾತ್ರಿ.09.30 ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು
ವಾಸ್ತವ್ಯ ಮಾಡುವರು.
ಮೇ.09 ರಂದು ಬೆ.10.30 ಗಂಟೆಗೆ ಅರಕೆರೆ ಗ್ರಾಮದಲ್ಲಿ
ನಡೆಯುವ ರೈತರ ಕಾರ್ಯಾಗಾರ ಹಾಗೂ ಸವಲತ್ತುಗಳ
ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.12
ಕ್ಕೆ ಅರಬಗಟ್ಟೆ ಗ್ರಾಮದಲ್ಲಿ ನಡೆಯುವ ರೈತರ
ಕಾರ್ಯಾಗಾರದಲ್ಲಿ ಭಾಗವಹಿಸುವರು. ಮ.01 ಕ್ಕೆ ಬೇಲಿಮಲ್ಲೂರು
ಗ್ರಾಮದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮ.02 ಕ್ಕೆ ಕುಂಬಳೂರು ಗ್ರಾಮದಲ್ಲಿ ವಿವಿಧ
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು. ಮ.03
ಕ್ಕೆ ಚನ್ನಗಿರಿ ತಾಲ್ಲೂಕಿನ ಚಿಕ್ಕಕೋಗಲೂರು ಗ್ರಾಮದಲ್ಲಿ ಶ್ರೀ
ಬಸವರಾಜಪ್ಪ ನವರ ಸಾರ್ಥಕ ಬದುಕಿನ ಅಮೃತ ಮಹೋತ್ಸವ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ರಾತ್ರಿ 09
ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರೆಂದು ಅವರ
ವಿಶೇಷ ಕರ್ತವ್ಯಾಧಿಕಾರಿ  ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *