ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯ, ಅವ್ವ ಎಂದರೆ ಆಸರೆ, ಅವ್ವ ಎಂದರೆ ಹೋರಾಟ, ಅವ್ವ ಎಂದರೆ ತ್ಯಾಗ, ಅವ್ವ ಎಂದರೆ ಪ್ರೀತಿ, ಅವ್ವ ಎಂದರೆ ವಾತ್ಸಲ್ಯ.
ಹಾಗಾಗಿ ಆಕೆಯನ್ನು ಏನೆಂದು ವರ್ಣಿಸಿದರೂ ಅದು ಕಡಿಮೆಯಾಗುತ್ತದೆ. ಅಮ್ಮ ಎನ್ನುವ ಶಕ್ತಿ ಎಲ್ಲ ಸ್ತರದಲ್ಲೂ, ಎಲ್ಲರ ಬದುಕಿನಲ್ಲಿ ಆವರಿಸಿಕೊಂಡು ಅವಳ ಖುಷಿಯನ್ನು, ಅವಳ ಸಾಧನೆಯನ್ನು ತನ್ನ ಮಕ್ಕಳ ಯಶಸ್ಸಿನಲ್ಲಿ ಕಾಣುತ್ತಾ ಜೀವಿಸುತ್ತಾಳೆ.
ಆಕೆಯ ಸರಿಸಾಟಿ ಯಾರು ಇರಲು ಸಾಧ್ಯವಿಲ.್ಲ ಆವಳಿಗೆ ಅವಳೇ ಸಾಟಿ ಮತ್ತು ಸ್ಫೂರ್ತಿ. ಆ ಸ್ಥಾನಕ್ಕೆ ಅವಳೇ ಅಮೃತ ಕಳಶÀ. ನವ ಮಾಸ ತನ್ನ ಗರ್ಭದಲ್ಲಿ ಬಚ್ಚಿಟ್ಟುಕೊಂಡು ಪೋಷಿಸುವ ತಾಯಿ ತನ್ನ ಮಗು ಮೊದಲ ಹೆಜ್ಜೆಯನ್ನು ಭೂಮಿಗೆ ಇಟ್ಟ ದಿನದಿಂದ ಹಿಡಿದು ಮಗು ದೊಡ್ಡವನಾಗಿ ತನ್ನ ಹಾಗೇ ವಯಸ್ಸಾದರೂ ಕೂಡ ಸೆರಗಿನಲ್ಲಿ ಅವುಚಿಕೊಂಡು ಮಮತೆಯ ನೆರಳನ್ನು ಸೂಸುತ್ತಾಳೆ.
ತಾಯಿಯ ತ್ಯಾಗ ಮತ್ತು ಪ್ರೀತಿಗೆ ಮಿತಿಯೆಂಬುದೇ ಇರುವುದಿಲ್ಲ. ತನ್ನ ಮಕ್ಕಳಿಗೆ ಕಿಂಚಿತ್ತು ಪ್ರೀತಿ ಕಡಿಮೆ ಮಾಡದೇ ಸದಾ ಕಾಲ ಪ್ರೀತಿಯನ್ನು ಪೊರೆಯುವ ಏಕೈಕ ಜೀವವೇ ಅವ್ವ.
ತಾನು ಹಸಿವಿನಲ್ಲಿ ಇದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡಿಕೊಳ್ಳುತ್ತಾ, ತಾನು ಎಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳು ಸುಖದಿಂದ ಇರಲಿ ಎಂದು ಆಶಿಸುತ್ತಾ, ಆಕೆ ಅಕ್ಷರ ಕಲಿಯದಿದ್ದರೂ, ತನ್ನ ಮಗು ವಿದ್ಯಾಭ್ಯಾಸದಿಂದ ವಂಚಿತವಾಗಬಾರೆಂದು ಹಗಲು ರಾತ್ರಿ ಎನ್ನದೇ, ಸಮಯದ ಪರಿವಿಲ್ಲದೇ ಮನೆ ಒಳಗೆ ಮತ್ತು ಮನೆ ಹೊರಗೆ ಪ್ರತಿ ನಿತ್ಯ ತನ್ನವರಿಗೆ, ತನ್ನ ಮಕ್ಕಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ದುಡಿಮೆ ಮಾಡಿ ತನ್ನೆಲ್ಲ ಆಸೆ ಕನಸುಗಳನ್ನು ಬದಿಗೊತ್ತಿ ಮಕ್ಕಳ ಹಾರೈಕೆಯಲ್ಲಿ ತಾಯಿ ಬದುಕುತ್ತಾಳೆ.
ಇತ್ತೀಚೆಗೆ ತಾಯಂದಿರ ಮರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 14 2022 ರಂದು ಬಿಡುಗಡೆಯಾದ ಮೆಟರ್ನಲ್ ಮಾರ್ಟಾಲಿಟಿ ರೇಶಿಯೋ (ಎಂ.ಎಂ.ಆರ್) “ಅತೀ ಹೆಚ್ಚು, ಹೆಚ್ಚು ಮತ್ತು ಕಡಿಮೆ” ಎಂದು ಮೂರು ರೀತಿಯಲ್ಲಿ ವರ್ಗೀಕರಿಸಿ ತಾಯಂದಿರ ಮರಣ ಪ್ರಮಾಣವನ್ನು ತಿಳಿಸಿದೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತಿಸ್‍ಗರ್, ಬಿಹಾರ, ಒಡಿಸ್ಸಾ ಮತ್ತು ಅಸ್ಸಾಂ ಈ 7 ರಾಜ್ಯಗಳಲ್ಲಿ 1 ಲಕ್ಷ ಮಕ್ಕಳಿಗೆ ಜನ್ಮ ಕೊಡವ ತಾಯಂದಿರಲ್ಲಿ 130 ಕ್ಕೂ ಅಧಿಕ ತಾಯಂದಿರ ಮರಣ ಹೊಂದಿದ್ದು ‘ಅತೀ ಹೆಚು’್ಚ ತಾಯಂದಿರು ಮರಣ ಹೋಂದುತ್ತಿರುವ ರಾಜ್ಯಗಳೆಂದು ಪ್ರಕಟಿಸಲಾಗಿದೆ.
ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಈ ರಾಜ್ಯಗಳಲ್ಲಿ 1 ಲಕ್ಷ ಮಕ್ಕಳಿಗೆ ಜನ್ಮ ನೀಡುವ ತಾಯಂದಿರ ಮರಣದ ಸಂಖ್ಯೆ 100 ರಿಂದ 130 ಇದ್ದು ‘ಹೆಚ್ಚು’ ಪ್ರಮಾಣದಲ್ಲಿ ತಾಯಂದಿರು ಮರಣವಾಗುತ್ತಿರುವ ರಾಜ್ಯಗಳೆಂದು ಗುರುತಿಸಲಾಗಿದೆ. ಹರಿಯಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ 1 ಲಕ್ಷ ಮಕ್ಕಳಿಗೆ ಜನ್ಮ ನೀಡುವ ತಾಯಂದಿರ ಮರಣದ ಪ್ರಮಾಣ 71 ರಿಂದ 100 ಇರುವುದರಿಂದ ‘ಕಡಿಮೆ’ ಎಂದು ಪ್ರಕಟಿಸಿದೆ.

ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಾಗೂ ಹಲವು ರಾಜ್ಯಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮಾತೃ ವಂದನಾ ಕಾರ್ಯಕ್ರಮವನ್ನು ಜಾರಿಗೆ ತಂದ್ದಿದ್ದು ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರಿಗೆ ರೂ.5000/-ಪ್ರತಿ ತಿಂಗಳು 1 ಸಾವಿರದಂತೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲೂ ಮಾತೃಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಗರ್ಭಿಣಿ ಮಹಿಳೆಯರಿಗೆ ರೂ.6000/- ನೀಡಲಾಗುತ್ತದೆ. ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಮುತ್ತು ಲಕ್ಷ್ಮಿ ಮೆಟರ್ನಿಟಿ ಬೆನಿಫಿಟ್ ಸ್ಕೀಮ್ ಮೂಲಕ ಬಡ ಗರ್ಭಿಣಿÉ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲು ರೂ.18000/- ಹಣವನ್ನು ನೀಡುವುದರ ಜೊತೆಗೆ ಅಮ್ಮ ಮೆಟರ್ನಿಟಿ ನ್ಯೂಟ್ರಿಷನ್ ಕಿಟ್‍ಗಳನ್ನು ನೀಡುತ್ತಿದೆ. ತೆಲಂಗಾಣದಲ್ಲಿ ಕೆಸಿಆರ್ ಕಿಟ್ ಮತ್ತು ಅಮ್ ಒಡಿAmm odi) ಯೋಜನೆಗಳನ್ನು ಜಾರಿಗೆ ತರಲಾಗಿದೆ.
ತಾಯಂದಿರನ್ನು ಇಳಿವಯಸ್ಸಿನಲ್ಲಿ ಇನ್ನಷ್ಟು ಪ್ರೀತಿ ಮತ್ತು ಕಾಣಜಿಯಿಂದ ನೋಡುವ ಬದಲಾಗಿ ಇತ್ತೀಚೆಗೆ ವೃದ್ಧಾಶ್ರಮಗಳು ಬಾಗಿಲು ತೆರೆದು ನಿಂತಿವೆ. ತನ್ನ ಸಂತೋಷ, ಸುಖ ಎಲ್ಲವನ್ನು ತ್ಯಾಗ ಮಾಡಿ ತನ್ನ ಮಗುವನ್ನು ಸಾಕಿ-ಸಲುಹಿ ದೊಡ್ಡವನಾಗಿ ಮಾಡಿದ ತಾಯಿಜೀವವನ್ನು ಮಕ್ಕಳು ವೃದ್ಧಾಶ್ರಮಕ್ಕೆ ತಳ್ಳುವ ಚಾಳಿ ಹೆಚ್ಚಾಗಿದೆ.
ತಾಯಂದಿರನ್ನು ಪ್ರೀತಿಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವವರು ಇದ್ದರೂ, ಕೆಲವರು ಮುಪ್ಪಿನಲ್ಲಿರುವ ತಾಯಿಯನ್ನು ಕರ್ತವ್ಯವೆಂದು ನೋಡಿಕೊಂಡರೆ, ಮತ್ತೆ ಕೆಲವರು ಹೊರೆಯೆಂದು ಭಾವಿಸಿ ತಾತ್ಸಾರದಿಂದ ಕಾಣುತ್ತಿದ್ದಾರೆ.
ವಿಶ್ವ ತಾಯಂದಿರ ದಿನವನ್ನು ಮೇ 8 ರಂದು ಆಚರಿಸಲಾಗುತ್ತಿದೆ. ತಾಯಂದಿರ ತ್ಯಾಗ ಮತ್ತು ಅವರ ಪೋಷಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆನಾ ಜಾರ್ವಿಸ್ ಅವರು 1908 ರಂದು ತಾಯಂದಿರ ದಿನದ ಆಚರಣೆಗೆ ನಾಂದಿ ಹಾಡುತ್ತಾರೆ. 1914 ರಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧಿಕೃತವಾಗಿ ತಾಯಂದಿರ ದಿನವನ್ನು ಆಚರಣೆಗೆ ತರುತ್ತದೆ. ಅಂದಿನಿಂದ ವಿಶ್ವ ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ತಾಯಂದಿರ ದಿನಾಚರಣೆ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿ ದಿನವು ತ್ಯಾಗ ಮೂರ್ತಿ ಮಾತೆಯನ್ನು ಸಂತೋಷದಿಂದ, ಖುಷಿಯಿಂದ ಹಾಗೂ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳತ್ತಾ ಅಮ್ಮಂದಿರ ಪ್ರೀತಿಯ ಮಕ್ಕಳಾಗಿ ಸಮಾಜದಲ್ಲಿ ಬದುಕೋಣ. ಎಲ್ಲರಿಗೂ ವಿಶ್ವತಾಯಂದಿರ ದಿನದ ಶುಭಾಶಯಗಳು.

ಭರತ್‍ಎಂ.ಎಸ್
ಅಪ್ರೆಂಟಿಸ್, ವಾರ್ತಾ ಇಲಾಖೆ
8861197602

Leave a Reply

Your email address will not be published. Required fields are marked *