ನ್ಯಾಮತಿ : ಜೂನ್ ಅಂತ್ಯದ ಒಳಗೆ ನ್ಯಾಮತಿ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಪಟ್ಟಣದ ಆಂಜನೇಯ ದೇವಸ್ಥಾನದ ರಸ್ತೆ, ವೀರಭದ್ರೇಶ್ವರ ದೇವಸ್ಥಾನದ ರಸ್ತೆ, ಕುಂಬಾರ್ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಬುಧುವಾರ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ಇಂದು ಕಾಮಗಾರಿ ಸ್ಥಳಕ್ಕೆ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಗುತ್ತಿಗೆದಾರ ಜೂನ್ ಅಂತ್ಯದ ಒಳಗೆ ಪಟ್ಟಣದ ನಾಲ್ಕು ರಸ್ತೆಗಳ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಅಧಿಕಾರಿಗಳು,ಗುತ್ತಿಗೆದಾರರು ಮಾಡಿದ ತಪ್ಪಿಗೆನಿಂದಾಗಿ ನಾನು ಈ ಭಾಗದಲ್ಲಿ ಓಡಾಡಿದರೂ ನ್ಯಾಮತಿ ಪಟ್ಟಣದಲ್ಲಿ ಇಳಿಯಲು ಸಾಧ್ಯವಾಗಿಲ್ಲಾ ಎಂದು ಬೇಸರ ವ್ಯಕ್ತ ಪಡಿಸಿದ ರೇಣುಕಾಚಾರ್ಯ
ನೀವು ಏನು ಮಾಡಿತ್ತೀರೋ ನನಗೆ ಗೊತ್ತಿಗೆ ಜೂನ್ ಅಂತ್ಯದ ಒಳಗೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿ, ಕಾಮಗಾರಿ ಮುಗಿಸಿಕೊಡುವಂತೆ ಸೂಚನೆ ನೀಡಿದರು.
ಜನರ ಬಳಿ ನಾನು ಮನವಿ ಮಾಡಿದ್ದಕ್ಕೆ ಸ್ಪಂಧಿಸಿ ಜನರು ಮನೆಗಳನ್ನು ತೆರವು ಮಾಡಿಕೊಟ್ಟಿದ್ದರು. ಆದರೇ ಗುತ್ತಿಗೆದಾರ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲೆಯಲ್ಲಿ ಕಾಮಗಾರಿ ವೇಗ ಪಡೆದಿಲ್ಲಾ.
ನ್ಯಾಮತಿ ಪಟ್ಟಣದಲ್ಲಿ ಹಬ್ಬ ಇದ್ದು ಜನರು ಹೇಗೆ ಹಬ್ಬ ಮಾಡುತ್ತಾರೆ ನಾನು ಜನರಿಗೆ ಮುಖ ತೋರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಗುತ್ತಿಗೆದಾರ ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿಕೊಡುವಂತೆ ಸೂಚನೆ ನೀಡಿದರು.
ಈಗಾಗಲೇ ಕುಂಬಾರ್ ಬೀದಿ ರಸ್ತೆ, ವೀರಭದ್ರೇಶ್ವರ ರಸ್ತೆ, ಕುಂಬಾರ್ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ವಾಲ್ಮೀಕಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಬಾಕೀ ಇದೇ. ಈಗಾಗಲೇ ಜನರು ಮನೆ ತೆರವು ಮಾಡಿಕೊಡಲು ಮುಂದಾಗಿದ್ದರೂ ಗುತ್ತಿಗೆದಾರರು ಕಾಮಗಾರಿ ವಿಳಂಬವಾಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅದೂ ಸಾಧ್ಯವಿಲ್ಲ ಎಂದರು.
ಇದು ನಾನು ಗುತ್ತಿಗೆದಾರರಿಗೆ ಕೊಡುತ್ತಿರುವ ಕೊನೆ ಎಚ್ಚರಿಕೆ, ನೀವುಕೊಟ್ಟ ಮಾತಿನಂತೆ ಕಾಮಗಾರಿಯನ್ನು ಜೂನ್ ಅಂತ್ಯದ ಒಳಗೆ ಮುಗಿಸಿಕೊಡ ಬೇಕು, ಇಲ್ಲದೇ ಇದ್ದರೇ ಜನರೇ ನಿಮಗೆ ಉತ್ತರ ನೀಡುತ್ತಾರೆಂದು ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ತಹಶೀಲ್ದಾರ್ ತನುಜಾ.ಟಿ.ಸವದತ್ತಿ, ಉಪತಹಸೀಲ್ದಾರ್ ನಾಗರಾಜ್,ಬಗರ್ ಹುಕ್ಕುಂ ಕಮಿಟಿ ಅಧ್ಯಕ್ಷರಾದ ಈರಣ್ಣಗೌಡ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ.ರವಿಕುಮಾರ್ ಸೇರಿದಂತೆ ಮುಖಂಡರು ಹಾಗೂ ನಿವಾಸಿಗಳಿದ್ದರು.