ಸೋಗಿಲು(ನ್ಯಾಮತಿ):MAY 7
ಮನುಷ್ಯನಿಗೆ ನಾನು ಎಂಬ ಆಹಂಕಾರ ಮೂಡಿದರೆ ಅವನತಿಗೆ ಕಾರಣವಾಗುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ಭಾನುವಾರ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಕಳಸಾರೋಹಣ ಮತ್ತು ಮುಖ್ಯದ್ವಾರಉದ್ಘಾಟನೆ ಸಭಾಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.


ಹಮ್ಮು ಮಾಡಿ ಬ್ರಹ್ಮಕೆಟ್ಟ ಎಂಬ ನಾಣ್ನುಡಿಯಂತೆ, ಮನುಷ್ಯ ಆಹಂನಿಂದ ದೂರವಿರಬೇಕು, ಸಮಾಜದಲ್ಲಿ ಪಾಶ್ಚಾತ್ಯ ದೇಶಗಳ ವ್ಯಾಮೋಹ ಬಿಟ್ಟು, ನಮ್ಮ ಸಂಸ್ಕøತಿಯನ್ನು ರೂಢಿಸಿಕೊಳ್ಳಿ, ಲೌಕಿಕ ಜೀವನದಲ್ಲಿ ತಾಯಿ,ಮಕ್ಕಳು, ಆದ್ಯಾತ್ಮಿಕ ಜೀವನದಲ್ಲಿ ಗುರು-ಶಿಷ್ಯರ ಗಾಢವಾದ ಸಂಬಂಧವಿದೆ, ಅವುಗಳನ್ನು ಉಳಿಸಿಕೊಂಡು ಸಂಸಾರದಲ್ಲಿ ಸಾಮರಸ್ಯದಿಂದ ಬಾಳಿ ಎಂದರು.
ಬಸವಜಯಂತಿಯಂದು ಶರಣದ 22 ಸಾವಿರ ವಚನಗಳ ಬಿಡುಗಡೆ ಮಾಡಿದ್ದು, ಕೈಬೆರಳಲ್ಲಿ ಶರಣರ ವಚನಗಳು ನಾಲ್ಕು ಭಾಷೆಗಳಲ್ಲಿ ಸಿಗುವಂತೆ ಆಪ್‍ನ್ನು ಬಿಡುಗಡೆಗೊಳಿಸಿದೆ ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಇಂದುದೇಶದಲ್ಲಿಧರ್ಮ, ಸಂಸ್ಕøತಿ ಆಚಾರ,ವಿಚಾರಗಳು ಉಳಿದಿವೆ ಎಂದರೆಅದಕ್ಕೆ ಮಹಿಳೆಯರೆ ಕಾರಣ, ಮನುಷ್ಯನಿಗೆ ಸುಖ,ಶಾಂತಿ ನೆಮ್ಮದಿ ಬೇಕಾದರೆ ಗುರುಗಳ ಮೊರೆ ಹೋಗಬೇಕು, ರಾಜಕಾರಣಿಗಳ ಕುರ್ಚಿ ಶಾಶ್ವತವಲ್ಲಆದರೆ ಗುರುಗಳ ಪೀಠ ಶಾಶ್ವತಎಂದರು.
ಸಿರಿಗೆರೆ ಶ್ರೀಗಳ ಮಾರ್ಗದರ್ಶನದಂತೆತಾಲ್ಲೂಕಿನ ಅವಳಿ ತಾಲ್ಲೂಕುಗಳ ಕೆರೆ ಭರ್ತಿ ಮಾಡುವಕಾಮಗಾರಿ ಪ್ರಗತಿಯಲ್ಲಿದೆ, ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರುಎಂದರು.


ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಭಗವಂತನನ್ನು ನೋಡಲು ಆಗುವುದಿಲ್ಲ, ಅವನು ಇರುವ ಬಗ್ಗೆ ಅನುಭವ ಪಡೆಯಬಹುದು, ಬೇರೆಯವರಿಗೆಕೆಡಕನ್ನು ಬಯಸದೇ, ಸರ್ವೆಜನ ಸುಖಿನಭವಂತುಎಂಬಂತೆಎಲ್ಲರಿಗೂ ಒಳ್ಳೆಯದನ್ನು ಬಯಸಿ ಎಂದುಗ್ರಾಮಸ್ಥರಲ್ಲಿ ಮನವಿ ಮಾಡಿದರು.


ಗುರುಪ್ರಭುತೋಂಟೇಶ್ವರಧಾರ್ಮಿಕಟ್ರಸ್ಟ್‍ಅಧ್ಯಕ್ಷಡಿ.ಪಿ.ರಾಜಪ್ಪಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕತುರುವನೂರು ಎಂ.ವಿ. ಮಲ್ಲಿಕಾರ್ಜುನಉಪನ್ಯಾಸ ನೀಡಿದರು.
ಸಾಧು ಲಿಂಗಾಯಿತಿ ಸಮುದಾಯದ ನ್ಯಾಮತಿಅಧ್ಯಕ್ಷ ಶಿವಪ್ಪ ಹಾಗೂ ಹೊನ್ನಾಳಿ ಅಧ್ಯಕ್ಷಕರೇಗೌಡರು, ಟ್ರಸ್ಟ್‍ಉಪಾಧ್ಯಕ್ಷ ಮಹೇಶ್ವರಪ್ಪ, ಎಂ.ಎಸ್.ಅಮಿತ್, ದೀಪಾ ಉಪಸ್ಥಿತರಿದ್ದರು.
ಮಧು ಸ್ವಾಗತಿಸಿದರು, ಕುಬೇರಪ್ಪ ನಿರೂಪಿಸಿದರು,

Leave a Reply

Your email address will not be published. Required fields are marked *