ಹೊನ್ನಾಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿದ್ದು ಈಗಾಗಲೇ ರೈತರಿಗೆ ಸಾಕಷ್ಟು ವಿನೂತನ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ ಜಾರಿ ಮಾಡಲಾಗಿದ್ದು ಎಲ್ಲಾ ರೈತರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಪ್ರಕಾಶನ ರೈತ ಸಿರಿ ರೈತ ಉತ್ಪಾದಕರ ಸಂಪನಿ ಅರಬಗಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಡಿಯೂರಪ್ಪನವರು ಸಿಎಂ ಆಗಿದ್ದಾರೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿದ್ದು ರೈತರಿಗಾಗೀ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದರಲ್ಲದೇ ಪಿಎಂ ಕಿಸಾನ್ ಸನ್ಮಾನ್ ಯೋಜನೆಯಡಿ ಆರು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ನೇವರಾಗಿ ಹಾಕುವ ಕೆಲಸ ಮಾಡಿದರೇ ಬಿ.ಎಸ್.ಯಡಿಯೂರಪ್ಪನರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಿಂದ ನಾಲ್ಕು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ನೀಡಿದರು ಎಂದರು.
ಬೆಳೆಹಾನಿಯಾದರೆ ರೈತರಿಗೆ ಪರಿಹಾರ ಕಡಿಮೆ ಬರುತ್ತಿದ್ದು ಇದನ್ನು ಮನಗಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅದನ್ನು ದುಪ್ಪಟ್ಟು ಹೆಚ್ಚಿಗೆ ಮಾಡಿದರು ಎಂದರು.
ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗೀ ಒಂದೇ ಘಂಟೆಯಲ್ಲಿ ರೈತ ಮಕ್ಕಳ ಅನುಕೂಲಕ್ಕಾಗಿ ಕೃಷಿ ವಿದ್ಯಾನಿಧಿ ಘೋಷಣೆ ಮಾಡಿ 63 ಲಕ್ಷ ರೂಪಾಯಿ ಪ್ರೋತ್ಸಹ ಧನ ಬಿಡುಗಡೆ ಮಾಡಿದರು ಎಂದರು
ಇನ್ನು ನಬಾರ್ಡ ಯೋಜನೆಯಲ್ಲಿ ಒಂದು ಸಾವಿರ ಶೇರು ದಾರರನ್ನು ಒಳಗೊಂಡ ಪ್ರಕಾಶನ ರೈತ ಸಿರಿ ರೈತ ಉತ್ಪಾದಕರ ಸಂಸ್ಥೆ ಅರಬಗಟೆ ಗ್ರಾಮದಲ್ಲಿ ರಮೇಶ್ ನೇತೃತ್ವದಲ್ಲಿ ಪ್ರಾರಂಭವಾಗುತ್ತಿದ್ದು ಈ ಸಂಸ್ಥೆ ರೈತರಿಗೆ ವಿಶೇಷವಾದ ಅನುಕೂಲ ಮಾಡಿಕೊಡಲಿದೆ ಎಂದ ರೇಣುಕಾಚಾರ್ಯ ಈ ಸಂಸ್ಥೆ ಸರ್ಕಾರ ಹಾಗೂ ರೈತರ ಮದ್ಯೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡ ಬೇಕೆಂದು ಕಿವಿ ಮಾತು ಹೇಳಿದರು.
ಹೈನುಗಾರಿಕೆ ರೈತರ ಅವಿಭಾಜ್ಯ ಅಂಗವಾಗಿದ್ದು ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿದ ಎರಡು ಪಶುಸಂಜೀವಿನ ವಾಹನವನ್ನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿಗೆ ನೀಡಿದ್ದು ಈ ಸುಸಜ್ಜಿತ ಅಂಬ್ಯುಲೆನ್ಸ್‍ಗಳು ರೈತರ ಮನೆ ಭಾಗಿಲಿಗೆ ಬಂದು ಜಾನುವಾರಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಲಿವೆ ಎಂದರು.
ರೈತನ ಬದುಕಿಗೆ ನೀರಾವರಿಯೂ ಅತ್ಯಂತ ಮುಖ್ಯವಾಗಿದ್ದು ಇದನ್ನು ಮನಗೊಂಡು 518 ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದ ರೇಣುಕಾಚಾರ್ಯ ಸದ್ಯದರಲ್ಲದೇ ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ನಾನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಮನೆ ಮಗನಾಗಿ ಸಹೋದರನಾಗಿ ಅವಳಿ ತಾಲೂಕಿನ ಜನರ ಋಣ ತೀರಿಸಲು ಸದಾ ಸಿದ್ದನಿದ್ದೇನೆ ಎಂದರು.
ಈ ಸಂದರ್ಭ ಪ್ರಕಾಶನ ರೈತ ಸಿರಿ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ರಮೇಶ್, ಆಡಳಿತ ಮಂಡಳಿಯ ಸದಸ್ಯ, ಗ್ರಾ.ಪಂ ಅಧ್ಯಕ್ಷರಾದ ಅನಿತ ಕರಿಬಸಪ್ಪ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪ್ರೋಪೆಸರ್ ಎಂ.ಜಿ.ಬಸವನಗೌಡ ಸೇರಿದಂತೆ ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *