ಹೊನ್ನಾಳಿ-ಮೇ -9-ತಾಲೂಕು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆಯ ತಾಲೂಕ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದಿನಾಂಕ 16 /5/ 20 22 ರಂದು ಶಾಲೆಗಳು ಪ್ರಾರಂಭವಾಗಲಿದ್ದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ಸುಚಿತ್ವ ಗೊಳಿಸುವುದರ ಜೊತೆಗೆ ಶಾಲೆಯ ಮುಂದೆ ಇರುವ ಮೈದಾನವನ್ನು ಸ್ವಚ್ಛತೆಯನ್ನು ಗೊಳಿಸಿ ಮಕ್ಕಳಿಗೆ ಪಾಠದ ಜೊತೆಗೆ ಆಟವನ್ನು ಆಡಲಿಕ್ಕೆ ಅನುವು ಮಾಡಿಕೊಡಬೇಕೆಂದು ಇದರ ಜೊತೆಗೆ ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಕೂಡಲೇ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೇಗನೆ ತುಂಬಿ ಮಕ್ಕಳು ಗಳಿಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ತಾಲೂಕ ದಂಡಾಧಿಕಾರಿಗಳಾದ ಶ್ರೀಮತಿ ಜೆ ರಶ್ಮಿ ರವರಿಗೆ ಈ ಮನವಿ ಪತ್ರವನ್ನು ಕೂಡಲೇ ಸರ್ಕಾರಕ್ಕೆ ಕಳಿಸಿಕೊಡುವಂತೆ ಒತ್ತಾಯಿಸಿದರು.
ಉಪಸ್ಥಿತಿಯಲ್ಲಿ;- ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ಜೆ ರಶ್ಮಿ, ತಾಲೂಕು ಎಸ್ಡಿಎಂಸಿ ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ, ಕಾರ್ಯದರ್ಶಿ ಕೆ ಬಿ ಸತೀಶ್ ಬನ್ನಿಕೋಡ್, ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರನಾಯಕ ಹಾಲಿವಾಣ ,ಸಾವಿತ್ರಮ್ಮ, ಸುಭಾಷ್ ಬಳ್ಳೇಶ್ವರ ಸಹ ಭಾಗಿಯಾಗಿದ್ದರು.