ಹೊನ್ನಾಳಿ:ಮೇ-9- ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯ ಸಾರಾಂಶ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಸಾಧಿಸಲು ಲಿಂಗಾಯತ ಒಳಪಂಗಡಗಳು ಒಗ್ಗೂಡಬೇಕು ಎಂದು ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ, ಹಿರಿಯ ಮುಖಂಡ ಬಿದರಗಡ್ಡೆ ಡಿ.ಕೆ. ಭರಮಪ್ಪಗೌಡ್ರು ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಹೊನ್ನಾಳಿ ತಾಲೂಕು ಲಿಂಗಾಯತ ಒಕ್ಕೂಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಿಂಗಾಯತ ಒಳಪಂಗಡಗಳು ಒಂದಾದರೆ, ಸಮಾಜದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಧಾರ್ಮಿಕ ಕ್ಷೇತ್ರಗಳ ಗುರುಗಳನ್ನು ಆದರಿಸಲು ಸಹಕಾರಿಯಾಗುತ್ತದೆ. ಆಗ ಸಮರ್ಥವಾದ ಚಿಂತನ-ಮಂಥನ ನಡೆದು ಸಮಾಜದ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಮರ್ಥವಾದ ಸಮಿತಿಯನ್ನು ರಚಿಸಲು ಪ್ರತಿ ಜಿಪಂ ಕ್ಷೇತ್ರಕ್ಕೆ ಓರ್ವ ಮುಖಂಡರು ಜವಾಬ್ದಾರಿ ವಹಿಸಿಕೊಂಡು ಸಂಘಟನಾ ಕಾರ್ಯ ನಿರ್ವಹಿಸಬೇಕು. ಮೇ 29ರ ಭಾನುವಾರ ಬೆಳಗ್ಗೆ 11ಕ್ಕೆ ಹೊನ್ನಾಳಿಯಲ್ಲಿ ಸಭೆ ನಡೆಸಲುದ್ದೇಶಿಸಲಾಗಿದೆ. ಎಲ್ಲಾ ಅಧ್ಯಕ್ಷರು, ಸದಸ್ಯರು, ಮುಖಂಡರು ಭಾಗವಹಿಸಬೇಕು ಎಂದು ಹೇಳಿದರು.
ಮುಖಂಡರಾದ ಪಟ್ಟಣಶೆಟ್ಟಿ ಪರಮೇಶ್ವರಪ್ಪ, ದಿಡಗೂರು ಎ.ಜಿ. ಪ್ರಕಾಶ್, ಕುಂಕುವ ಕೊಟ್ರೇಶ್, ಎನ್.ಪಿ. ಗಿರೀಶ್, ಸಾಸ್ವೇಹಳ್ಳಿ ಬಸವರಾಜಪ್ಪ, ಬೆನಕನಹಳ್ಳಿ ಪಿ.ವೀರಪ್ಪ, ಹಿರೇಗೋಣಿಗೆರೆ ನಂದಿಗೌಡ್ರು, ಚನ್ನವೀರಪ್ಪ, ಕಡದಕಟ್ಟೆ ತಿಮ್ಮಪ್ಪ, ರಾಜಣ್ಣ, ಎಚ್.ಸಿ. ಮೃತ್ಯುಂಜಯ ಪಾಟೀಲ್, ಬಳ್ಳೇಶ್ವರದ ಹಾಲೇಶಪ್ಪ, ಸಾಯಿ ಹಾಲೇಶ್, ಚನ್ನೇಶ್ ಬಿ.ಇದರಮನಿ, ಅಂದಾನಿ ಗಂಗಾಧರಪ್ಪ, ಕೊಟ್ರೇಶ್, ಎಚ್.ಪಿ. ಗಂಗಾಧರ್, ಅರವಿಂದ್ ರೆಡ್ಡಿ, ವಿಜಯ್, ನಾಗರಾಜ್ ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *