ಹೊನ್ನಾಳಿ-ಮೇ;-9- ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಗಿದ್ದ ಹಾಲೇಶಪ್ಪ ನವರ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಸುಧಾ M ರವರು ನಾಮ ಪತ್ರವನ್ನು ಸಲ್ಲಿಸಿದ್ದರು, ಆದರೆ ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರುಗಳು ಸಹ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಕೂಡ ನಾಮಪತ್ರ ಅರ್ಜಿಯನ್ನು ಸಲ್ಲಿಸಿದೆ ಇರುವ ಕಾರಣ ಚುನಾವಣೆ ಅಧಿಕಾರಿಯಾದ ಮಹಾಂತೇಶ್ ಸ್ವಾಮಿ ಪೂಜಾರ್ ರವರು ಶ್ರೀಮತಿ ಸುಧಾ ಎಂ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಎಂ ರವರು ನಂತರ ಮಾತನಾಡಿ ನನ್ನನ್ನು ಉಪಾಧ್ಯಕ್ಷರನ್ನಾಗಿ ಮಾಡಲಿಕ್ಕೆ ಸಹಕರಿಸಿದ ನಮ್ಮ ಕಾಂಗ್ರೆಸ್ ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ನಮ್ಮ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಮುಖಂಡರುಗಳಿಗೂ ಮತ್ತು ಗ್ರಾಮಸ್ಥರಿಗೂ ಪಕ್ಷಾತೀತವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳುತ್ತಾ ಮಾತನ್ನು ಮುಂದುವರಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ನಾನು ಸರ್ವ ಸದಸ್ಯರುಗಳ ಸಹಕಾರದಿಂದ ಸರಕಾರದಿಂದ ಬರುವಂತ ಯಾವುದೇ ಕ್ರಿಯಾಯೋಜನೆಗಳು ಇರಬಹುದು, ಹಾಗೂ (NRIG )ಉದ್ಯೋಗ ಖಾತ್ರಿ ಯೋಜನೆ ಮತ್ತು ಬಾಕ್ಸ್ ಚರಂಡಿ ವ್ಯವಸ್ಥೆ ಇರಬಹುದು, ಕುಡಿಯುವ ನೀರಿನ ಯೋಜನೆ ಇರಬಹುದು, ಬೀದಿಯ ದೀಪ ಇನ್ನೂ ಹಲವಾರು ಕಾರ್ಯಗಳನ್ನು ಮಾಡುವುದರ ಮೂಲಕ ನಮ್ಮ ಬೆನಕನಹಳ್ಳಿ ಗ್ರಾಮ ಪಂಚಾಯತಿಗೆ ಹೆಸರು ತರುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಸರ್ವ ಸದಸ್ಯರ ಸಹಕಾರದಿಂದ ಮಾಡುತ್ತೇನೆಂದು ತಿಳಿಸಿದರು.
ನೂತನವಾಗಿ ಉಪಾಧ್ಯಕ್ಷರಾದ ಸುಧಾ ಎಂ ರವರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ದೀಪಾ ರಘುರವರು ಮತ್ತು ಎಲ್ಲಾ ಸದಸ್ಸೆರು ಒಳಗೊಂಡಂತೆ ಪುಷ್ಪ ಹಾರವನ್ನು ಹಾಕುವುದರ ಮುಖೇನ ಶುಭಾಶಯಗಳನ್ನು ಕೋರಿದರು.
ಉಪಸ್ಥಿತಿಯಲ್ಲಿ :-ನೂತನ ಉಪಾಧ್ಯಕ್ಷರಾದ ಸುಧಾ ಎಂ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ದೀಪಾ ರಘು ಡಿ ಜಿ, ಪುಷ್ಪ ಬಾಯಿ, ಹಾಲೇಶ ಎಚ್ ಪಿ, ಮಂಜುನಾಥ ಪಿ ,ಗದ್ದಿಗೇಶಪ್ಪ ,ರೇಷ್ಮಾ ಗಣೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಲ್ಲಿಕಾರ್ಜುನ ವೈ ,ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಂಕಳಪ್ಪ, ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.