ಹರಿಹರ ನಗರಸಭೆಯ ಕರ ವಸೂಲಿಗಾರ ಡಿ ಮಂಜಪ್ಪ ಬಿನ್
ಲೇ.ದುರುಗಪ್ಪ 48 ವರ್ಷ ಇವರನ್ನು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಪಿರ್ಯಾದಿ ರಾಘವೇಂದ್ರ ಬಿನ್ ಶ್ರೀನಿವಾಸ್ ಮೂರ್ತಿ 33 ವರ್ಷ, 5ನೇ ಕ್ರಾಸ್,
ಕೆ.ಬಿ ಬಡಾವಣೆ ದಾವಣಗೆರೆ ರವರು ಗುತ್ತೂರು ಗ್ರಾಮಪಂಚಾಯಿತಿ
ವ್ಯಾಪ್ತಿಯ ಹರ್ಲಾಪುರ ಗ್ರಾಮದ ರಿ.ಸ.ನಂ 39/3 ರಲ್ಲಿ ಸೈಟ್ ನಂಬರ್
7ರಲ್ಲಿನ 80*50 ಅಡಿ ಉದ್ದಗಲದ ನಿವೇಶನವನ್ನು ಖಾತೆ ಬದಾಲಾವಣೆ
ಮಾಡಿಕೊಡಲು ರೂ.1,50,000/-ಗಳ ಲಂಚದ ಬೇಡಿಕೆ ಇಟ್ಟಿದ್ದು, ದಿ:
06.04.2022 ರಂದು ಅಪಾದಿತನು ರೂ.1,00,000/-ಲಂಚದ ಹಣ ಸ್ವೀಕರಿಸಿ ಹಣದ
ಸಮೇತ ಸಿಕ್ಕಿಬಿದಿದ್ದು, ಲಂಚದ ಹಣವನ್ನು ಸ್ವೀಕರಿಸಿರುವುದು ದಾಳಿ
ಸಮಯದಲ್ಲಿ ಸಾಬೀತಾಗಿರುತ್ತದೆ.
ಆದುದರಿಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೆ.ಸಿ.ಎಸ್(ಸಿಸಿಎ)
ನಿಯಮಾವಳಿ 1957ರ ನಿಯಮ(10)ರಡಿ ಮತ್ತು ಸರ್ಕಾರದ
ಉಲ್ಲೇಖಿತ (1)ರ ಆದೇಶದಲ್ಲಿ ಪ್ರತ್ಯಾಯೋಜಿಸಿರುವ ಅಧಿಕಾರವನ್ನು
ಚಲಾಯಿಸಿ ಹರಿಹರ ನಗರಸಭೆಯ ಕರವಸೂಲಿಗಾರ ಡಿ.ಮಂಜಪ್ಪ
ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ
ನಿಲಂಬನೆಯಲ್ಲಿಟ್ಟು ಆದೇಶಿಸಿದ್ದಾರೆ.