ಸನ್ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮೇ.08
ರಂದು ನಡೆದ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳು
ಪ್ರತಿ ವಾರಕ್ಕೊಮ್ಮೆ ತಾಲ್ಲೂಕಿಗೆ ಭೇಟಿ ನೀಡಲು ಸೂಚಿಸಿರುತ್ತಾರೆ.
ಅದರನ್ವಯ ಮೇ.12 ರಂದು ಹೊನ್ನಾಳಿ ತಾಲ್ಲೂಕು ಕಚೇರಿಗೆ
ಭೇಟಿ ನೀಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಪಾಸಣೆ ನಡೆಸಲಿದ್ದಾರೆ.
ಅಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಸಾರ್ವಜನಿಕರಿಂದ ಅಹವಾಲು
ಸ್ವೀಕರಿಸಲಾಗುವುದು. ತಾಲ್ಲೂಕು ಕಚೇರಿಯ ಎಲ್ಲಾ ವಿಷಯ
ನಿರ್ವಾಹಕರ ಮೇಜು ತಪಾಸಣೆ, ಕಡತಗಳ ತಪಾಸಣೆ, ಆಹಾರ ಶಾಖೆ /
ಭೂದಾಖಲೆ ಶಾಖೆಯ ಕಡತ ವಿಲೇವಾರಿ, ವಿವಿಧ ಶಾಖೆಗಳ
ವಿಷಯಗಳ ಬಗ್ಗೆ ಆನ್‍ಲೈನ್ ಪ್ರಗತಿ ಪರಿಶೀಲನೆ ನಡೆಸಲಾಗುವುದು.
ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *