ಹೊನ್ನಾಳಿ ಮೇ 12 ತಾಲೂಕ್ ಆಫೀಸ್ ತಶಿಲ್ದಾರ್ ಕಚೇರಿ ಆವರಣದಲ್ಲಿ ಇಂದು ಮನ್ಯ ಜಿಲ್ಲಾಧಿಕಾರಿಗಳಾದ ಮಾಂತೇಶ್ ಬೀಳಗಿಯವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮದ ಎ ಜೆ ಪ್ರಕಾಶ್ ಎಂಬ ರೈತನು ಗ್ರಾಮದಲ್ಲಿ ಬರುವ ದುಂಡಿ ಬಸವೇಶ್ವರ ದೇವಸ್ಥಾನದಿಂದ ಎ ಜಿ ಮಹೇಂದ್ರಕುಮಾರ್ ಎ ಜಿ ನಾಗರಾಜ್ ಅವರ ತೋಟದ ವರೆಗೆ ಮೆಟ್ಲಿಂಗ್ ಕಾಮಗಾರಿ ನಡೆದಿತ್ತು. ಆ ರಸ್ತೆಯ ಕಾಮಗಾರಿಯು ಕಳಪೆಯಿಂದ ಕೂಡಿದೆ, ರಸ್ತೆಯಲ್ಲಿ ಜನರು ಓಡಾಡುವಂತಿಲ್ಲ ಎಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಉತ್ತರವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಅದನ್ನು ಪರಿಶೀಲಿಸಿ ಕಾಮಗಾರಿ ಸರಿ ಮಾಡುವಂತೆ ಇದಕ್ಕೆ ಸಂಬಂಧಪಟ್ಟ ತಾಲೂಕಿನ ನಿರ್ವಹಣಾ ಅಧಿಕಾರಿ ರಾಮ ಭೋವಿ ಯವರಿಗೆ ಸೂಚನೆಯನ್ನು ನೀಡಿದರು. ರೈತರ ಮತ್ತು ಸಾರ್ವಜನಿಕರ ಅಹವಾಲುಗಳ ಸ್ವೀಕರಿಸಿದ ನಂತರ ರೆಕಾರ್ಡ್ ರೂಮ್ ರೂಮಿಗೆ ತೆರಳಿ ಅಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ಪರಿಶೀಲಿಸಿದ ನಂತರ ಅಲ್ಲಿಗೆ ಬರುವ ರೈತರುಗಳಿಗೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ನಾಲ್ಕನೇ ದರ್ಜೆ ನೌಕರರಿಗೆ ಖಡಕ್ಕಾಗಿ ಸಾರ್ವಜನಿಕರು ಮತ್ತು ರೈತ ಬಾಂಧವರಿಂದ ಹಣವನ್ನು ವಸೂಲಾತಿ ಮಾಡಿಕೊಳ್ಳುತ್ತಿದ್ದೀರಿ ಎಂದು ನನಗೆ ಅರ್ಜಿ ಬಂದಿರುವ ಹಿನ್ನೆಲೆಯಲ್ಲಿ ನೀವು ಇನ್ನೊಂದು ಸಾರಿ ಸಾರ್ವಜನಿಕರಿಂದ ಹಣವನ್ನು ವಸೂಲಾತಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದರ ಜೊತೆಗೆ ಅಮಾನತು ಸಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅದರ ಜೊತೆಗೆ ನಿಮ್ಮ ಇಲಾಖೆ ಒಂದೇ ಅಲ್ಲ ನಿಮ್ಮ ಹೊನ್ನಾಳಿ ತಾಲೂಕಿನಲ್ಲಿ ತಾಲೂಕು ಮಟ್ಟದ ಅಧಿಕಾರಿವರ್ಗ ದವರಿಗೂ ಸಹ ಇದು ಅನ್ವಯ ಆಗುತ್ತದೆ ಎಂದು ಅಧಿಕಾರ ಮಟ್ಟದವರೆಗೂ ಸಹ ಚಾಟಿ ಬೀಸಿದರು.
ಸ್ಮಶಾನಕ್ಕೆ ಸಂಬಂಧಿಸಿದಂತ ಸಾರ್ವಜನಿಕರು ಪ್ರಶ್ನೆಗೆ ಉತ್ತರವಾಗಿ 180 ಗ್ರಾಮಗಳಲ್ಲಿ ಸ್ಮಶಾನ ಮಂಜೂರು ಆಗಿದ್ದು 2019ರ ಜಮೀನ್ ಕ್ಲಿಯರೆನ್ಸ್ ಪಡೆದುಕೊಂಡು ಯಾರು ಜಮೀನನ್ನು ಒತ್ತುವರಿ ಮಾಡಿ ಹೊಡೆಯುತ್ತಾರೆ ಅವರನ್ನು ಬಿಡಿಸಿ ಸ್ಮಶಾನಕ್ಕೆ ಜಾಗ ಕೊಡಿಸುವ ಕೆಲಸವನ್ನು ಮಾಡಿ ಎಂದು ತಾಲೂಕ ದಂಡಾಧಿಕಾರಿಗಳ ಆದ ಎಚ್ ಜೆ ರಶ್ಮಿ ಅವರಿಗೆ ಆದೇಶ ನೀಡಿದರು.
ಪ್ರತಿಯೊಂದು ಇಲಾಖೆ ಅವರು ಕಂದಾಯ ಇಲಾಖೆ ಭೂದಾಖಲೆ ಇಲಾಖೆ ಆಹಾರ ಇಲಾಖೆ ರೆಕಾರ್ಡ್ ರೂಮ್ ಮುಜರಾಯಿ ಇಲಾಖೆ ಪ್ರತಿಯೊಂದು ಇಲಾಖೆಗೆ ತೆರಳಿ ದಾಖಲಾತಿಗಳನ್ನು ಪರಿಶೀಲಿಸಿದರು .
ಉಪಸ್ಥಿತಿಯಲ್ಲಿ;- ಮಾನ್ಯ ಜಿಲ್ಲಾಧಿಕಾರಿಗಳಾದ ಮಾಂತೇಶ ಬಿಳಗಿ ತಾಲೂಕ ದಂಡಾಧಿಕಾರಿಗಳಾದ ಎಸ್ ಜೆ ರಶ್ಮಿ ಉಪನೊಂದಣಿ ಅಧಿಕಾರಿಯಾದ ಹುಲ್ಲು ಮನೆ ತಿಮ್ಮಣ್ಣ ತಾಲೂಕ್ ನಿರ್ವಹಣಾ ಅಧಿಕಾರಿ ರಾಮ ಭೂಮಿ ಪಿಎಸ್ಐ ಬಸವರಾಜ್ ಬೀರದಾರ್ ಪುರಸಭೆಯ ಮುಖ್ಯಾಧಿಕಾರಿ ವೀರಭದ್ರಯ್ಯ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಸಹ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.