ಹೊನ್ನಾಳಿ ಮೇ 13- ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ಇಂದು ಬಗರುಕುಂ ಕಮಿಟಿಯ ತಾಲೂಕಿನ ಅಧ್ಯಕ್ಷರಾದ ಕೆ ಇ ನಾಗರಾಜ್ ಮಾದೇನಹಳ್ಳಿ ರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಬಗರುಕುಂ ಕಮಿಟಿಯ ತಾಲೂಕ ಅಧ್ಯಕ್ಷರಾದ ಕೆ ಇ ನಾಗರಾಜುರವರು ನಂತರ ಮಾತನಾಡಿ ತಾಲೂಕ್ ಶಾಸಕರ ನೇತೃತ್ವದಲ್ಲಿ ಕಮಿಟಿ ರಚನೆಯಾಗಿ ಒಂದು ವರ್ಷವಾಯಿತು. ನಮ್ಮ ಒಂದು ವರ್ಷದ ಅವಧಿಯಲ್ಲಿ ಸುಮಾರು ಎಂಟ ರಿಂದ ಹತ್ತು ಬಾರಿ ಬಗರುಕುಂ ವಿಚಾರವಾಗಿ ರೈತರಿಗೆ ಅನುಕೂಲವಾಗಲಿ ಎಂದು ಮೀಟಿಂಗ್ ಅನ್ನು ಕರೆದು ಅಧಿಕಾರಿ ಮಟ್ಟದಲ್ಲಿ ಚರ್ಚೆಯನ್ನು ಮಾಡಿದ್ದೆವು, ಆದರೆ ನಮ್ಮ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ತಾಲೂಕಿನ ಬಗರುಕುಂ ಕಮಿಟಿ ಅಧ್ಯಕ್ಷರು ಆಗಿರ ಬೇಕಾಗಿತ್ತು .ಆದರೆ ನನ್ನ ಮೇಲೆ ಪ್ರೀತಿ ಇಟ್ಟುಕೊಂಡು ನನ್ನನ್ನು ತಾಲೂಕ ಬಗರುಕುಂ ಕಮಿಟಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅವರುಗಳಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ತಿಳಿಸುತ್ತಾ ,ರಾಜ್ಯದಲ್ಲಿ 224 ಕ್ಷೇತ್ರದಲ್ಲಿ ಕೂಡ ತಾಲೂಕಿನ ಶಾಸಕರು ಅಧ್ಯಕ್ಷರಾಗಿದ್ದಾರೆ ಆದರೆ ನಮ್ಮ ಹೊನ್ನಾಳಿ ತಾಲೂಕಿನಲ್ಲಿ ಬಗರುಕುಂ ಕಮಿಟಿಗೆ ಶಾಸಕರು ಅಧ್ಯಕ್ಷರಾಗದೇ ರೈತರ ಮೇಲೆ ಕಾಳಜಿಯನ್ನು ಇಟ್ಟುಕೊಂಡು ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಇರುವುದರಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಪೂರ್ವಜನ್ಮದ ಪುಣ್ಯ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಂದಾಯ ಸಚಿವರಾದ ಆರ್ ಅಶೋಕ್ ರವರಿಗೆ ಒತ್ತಡವನ್ನು ಹಾಕಿ ಸರ್ಕಾರದಿಂದ ಆರು ತಿಂಗಳ ಅವಧಿ ಮುಂದೂಡಲು ಒತ್ತಡ ಹಾಕಿದ್ದರು ಇದನ್ನು ಮನಗಂಡ ರಾಜ್ಯದ ಮುಖ್ಯಮಂತ್ರಿಗಳು 6ತಿಂಗಳ ಸಮಯವ ಅವಕಾಶವನ್ನು ಕೊಟ್ಟಿದ್ದಾರೆ ಅರ್ಜಿ ಹಾಕಲಿಕ್ಕೆ ಹಾಗಾಗಿ ರೈತರುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ರೈತರುಗಳಿಗೆ ನಮೂನೆ 50 ಮತ್ತು 53ನೇ ಅಡಿಯಲ್ಲಿ 400 ಕ್ಕಿಂತ ಹೆಚ್ಚು ಬಾಕಿ ಪ್ರಕರಣಗಳು ಇವೆ ಅದರಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಇನ್ನೂರಕ್ಕೂ ಹೆಚ್ಚು ಮತ್ತು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಂಬಂಧಪಟ್ಟಂತೆ ಜಂಟಿ ಸರ್ವೆ ಮಾಡಿಸಿ ಸಾಗುವಳಿ ಕೊಡಿಸುವಂತಹ ಕೆಲಸವನ್ನು ಸದ್ಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹೊನ್ನಾಳಿ ತಾಲೂಕಿನ ಆಗಮಿಸಿತ್ತಿರುವುದರಿಂದ ಆ ಸಂದರ್ಭದಲ್ಲಿ 100 ಬಗರುಕುಂ ಸಾಗುವಳಿ ಚೀಟಿಯನ್ನು ಕಂದಾಯ ಇಲಾಖೆಯವರು ವಿತರಣೆ ಮಾಡಲಿದ್ದಾರೆ. ಅದರ ಜೊತೆಗೆ ನಮೂನೆ 57 ಅಡಿಯಲ್ಲಿ ಸಾಗುವಳಿ ಚೀಟಿಯನ್ನು ಪಡೆಯಲಿಕ್ಕೆ ರೈತರು 5175 ಅರ್ಜಿಯನ್ನು ಸಲ್ಲಿಸಿದ್ದು ಅದರಲ್ಲಿ ಹುಲ್ಲು ಮನ್ನಿ ಕರಾಬು ಮತ್ತು ಗೋಮಾಳ ಕಂದಾಯ ಇಲಾಖೆ ಮತ್ತು ಸರ್ಕಾರ ಜಂಟಿ ಸರ್ವೆ ಮಾಡಿ ಸಾಗುವಳಿ ಚೀಟಿಯನ್ನು ಮಾನ್ಯ ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ನೇತೃತ್ವದಲ್ಲಿ ಕೊಡುತ್ತೇವೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ತಾಲೂಕು ಬಗರುಕುಂ ಕಮಿಟಿಯ ಅಧ್ಯಕ್ಷರಾದ ಕೆ ಇ ನಾಗರಾಜ್ ಮಾದೇನಹಳ್ಳಿ ಬಗರುಕುಂ ಕಮಿಟಿಯ ಸದಸ್ಯರುಗಳಾದ ಶಾಂತರಾಜ್ ಕುಂದೂರು ,ಎಂ ಆರ್ ಮಾಲ್ತೇಶ್ ಕುಳಗಟ್ಟೆ ,ಮತ್ತು ಭಾಗ್ಯಮ್ಮ ಕಮ್ಮಾರಗಟ್ಟೆ ಸಹ ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *